ಸೋಮವಾರಪೇಟೆ, ಡಿ. ೧೭: ಕಣಿವೆ ಕಟ್ಟೆ-ಕೊಡಗು ಬಳಗದ ವತಿಯಿಂದ ತಾಲೂಕಿನ ಯಡವನಾಡು ಗ್ರಾಮದ ಶ್ರೀ ಶಿವ ಬಸವೇಶ್ವರ ದೇವಸ್ಥಾನ ಸಮಿತಿಯ ಆಶ್ರಯದಲ್ಲಿ, ದೇವಾಲಯ ಆವರಣದ ಹಸಿರು ಪರಿಸರದ ಅಂಗಳದಲ್ಲಿ, ಆಹ್ವಾನಿತ ಕವಿಗಳಿಂದ ಏರ್ಪಡಿಸಿದ್ದ ಕವಿಗೋಷ್ಠಿ ಕಾರ್ಯಕ್ರಮ ಸಾಹಿತ್ಯಾಸಕ್ತರ ಮನೆಸೂರೆಗೊಂಡಿತು.

ಕವಿಗೋಷ್ಠಿಯಲ್ಲಿ ಒಟ್ಟು ೨೭ ಮಂದಿ ವಾಚಿಸಿದ ಕವನಗಳು ಕೇಳುಗರ ಮನಸೂರೆಗೊಳಿಸಿತು. ಉತ್ತಮ ಕವನಗಳ ರಚನೆ ಬಗ್ಗೆ ಮಾತನಾಡಿದ ಕುಶಾಲನಗರ ಅನುಗ್ರಹ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕಿ, ಕವಯತ್ರಿ ಲೀಲಾಕುಮಾರಿ ತೊಡಿಕಾನ ಅವರು, ಬದುಕಿನ ಮಹತ್ವ ಮತ್ತು ಜಗತ್ತಿನಾದ್ಯಂತ ಜ್ಞಾನ ಮತ್ತು ವಾಸ್ತವ ಸಂಗತಿಯ ಅರಿವನ್ನು ಎಲ್ಲರಿಗೂ ಮುಟ್ಟಿಸುವುದೇ ಕಾವ್ಯವಾಗಿದೆ. ಸಾಹಿತ್ಯದ ಅಸ್ತಿತ್ವ ಹಾಗೂ ಮೂಲಗುಣ ಕಾವ್ಯದಲ್ಲಿ ಅಡಗಿದೆ ಎಂದರು.

ಕವನ ರಚನೆ ಹಾಗೂ ಅದನ್ನು ಪ್ರಸ್ತುತ ಪಡಿಸುವುದು ಒಂದು ಕಲೆ. ಕವಿತೆ ಹುಟ್ಟಬೇಕೇ ಹೊರತು ಕಟ್ಟಬಾರದೆಂಬ ಪ್ರಜ್ಞೆ ಕವಿಗಳಿಗಿರಬೇಕು. ಕವಿತೆಗಳು ಶಬ್ದಗಳ ಗದ್ದಲ ಆಗಬಾರದು. ಅವುಗಳು ಬದುಕಿನ ಅರ್ಥ ಕೊಡುವ ಹಾಗೂ ಮೌನ ಆವರಿಸುವ ಭಾವನೆಗಳಿಂದ ಕೂಡಿರಬೇಕು ಎಂದು ಅಭಿಪ್ರಾಯಿಸಿದರು.

ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಸಾಹಿತಿ, ತಾಲ್ಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಕೆ. ಭರತ್, ಹಮ್ಮು ಬಿಮ್ಮುಗಳಿಂದ ಬೀಗುವ ಮಾನವನನ್ನು ಬಾಗಿಸುವ ಶಕ್ತಿ ಸೃಜನಾತ್ಮಕ ಕಲೆಗಳಿಗಿವೆ. ನಿರಂತರ ಅಧ್ಯಯನದಿಂದ ಉತ್ತಮ ಕವಿತೆ ರಚನೆ ಮತ್ತು ಸಾಹಿತ್ಯ ಬರವಣಿಗೆ ಪಕ್ವಗೊಳ್ಳುತ್ತದೆ. ನಾವು ಬರೆದಷ್ಟು, ಕಲಿತಷ್ಟು ನಾವು ಬಾಗಬೇಕು. ಈ ನೆಲದ ಕಂಪು, ಸತ್ವ, ಕಥೆ, ಕವನಗಳು ನಮ್ಮ ಬರವಣಿಗೆಯಲ್ಲಿ ಮೂಡುವುದನ್ನು ಸಾಧ್ಯವಾಗಿಸಬೇಕು ಎಂದರು.

ಸಾಹಿತಿ ಭಾರಧ್ವಾಜ ಕೆ.ಆನಂದತೀರ್ಥ ಮಾತನಾಡಿ, ಕಣಿವೆ ಕಟ್ಟೆ ವತಿಯಿಂದ ಪ್ರಾಪಂಚಿಕ ವಿಚಾರಕ್ಕೆ ಸಂಬAಧಿಸಿದAತೆ ಮುಂದಿನ ಸಲ ಒಬ್ಬರಿಂದ ಒಂದು ಹಾಡು ಕಾರ್ಯಕ್ರಮದ ಮೂಲಕ ಹಳೆಯ ಚಲನಚಿತ್ರ ಗೀತೆಗಳನ್ನು ಹಾಡುವಂತಹ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಕವಿಗಳು ಉತ್ತಮ ಕವನ ರಚನೆ ಮಾಡುವುದರ ಜೊತೆಗೆ ವಾಚನ ಮಾಡುವ ಗುಣವನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಎಂ. ಗಣೇಶ್, ತಮ್ಮ ಗ್ರಾಮದ ಹಸಿರು ಪರಿಸರದಲ್ಲಿ ಕವಿಗೋಷ್ಠಿ ಏರ್ಪಡಿಸುವ ಮೂಲಕ ಗ್ರಾಮಸ್ಥರಲ್ಲಿ ಕಾವ್ಯದ ಸದಭಿರುಚಿ ಮೂಡಿಸಿರುವುದು ಶ್ಲಾಘನೀಯ ಎಂದರು.

ಪ್ರಾಸ್ತಾವಿಕವಾಗಿ ಮಾತ ನಾಡಿದ ಬಳಗದ ಸಂಚಾಲಕ ಟಿ.ಜಿ. ಪ್ರೇಮ್‌ಕುಮಾರ್, ಬಳಗದ ವತಿಯಿಂದ ಸಾಹಿತ್ಯ, ಕವಿಗೋಷ್ಠಿ, ಪ್ರಚಲಿತ ವಿಷಯಗಳ ಕುರಿತಂತೆ ಚರ್ಚೆ, ಸಂವಾದದAತಹ ವೈವಿಧ್ಯಮಯ ಚಟುವಟಿಕೆ ಗಳನ್ನು ಸಂಘಟಿಸಲಾಗುವುದು ಎಂದರು. ಕವಿಗೋಷ್ಠಿಯ ಆತಿಥ್ಯ ವಹಿಸಿದ್ದ ಯುವ ಕವಿ ಹೇಮಂತ್ ಪಾರೇರ ಮಾತನಾಡಿ, ಕಾಡಂಚಿನ ಗ್ರಾಮಕ್ಕೆ ಕವಿಗಳು ಆಗಮಿಸಿ ತಮ್ಮ ಕವಿತೆಗಳನ್ನು ವಾಚಿಸಿದ್ದು, ವಿಶೇಷವಾಗಿದೆ ಎಂದರು.

ಬಳಗದ ಸಂಚಾಲಕ ಎಂ.ಎನ್. ವೆಂಕಟನಾಯಕ್, ಕೆ.ವಿ. ಉಮೇಶ್ ಹೆಬ್ಬಾಲೆ, ಡಾ. ಛಾಯ ವಿಜಯ್ ವೇದಿಕೆ ಯಲ್ಲಿದ್ದರು. ಕವಿಗೋಷ್ಠಿಯಲ್ಲಿ ಲೀಲಾಕುಮಾರಿ ತೊಡಿಕಾನ, ಡಾ. ಛಾಯ ವಿಜಯ್, ಮಿಲನ ಕೆ. ಭರತ್, ವೈಲೇಶ್ ಕೊಡಗು, ಟಾಮಿ ಥಾಮಸ್ ನಾ.ಕನ್ನಡಿಗ, ಹೇಮಂತ್ ಪಾರೇರ, ಶರ್ಮಿಳಾ ರಮೇಶ್, ಎನ್.ಕೆ.ಮಾಲಾದೇವಿ, ಸುಕುಮಾರ್ ತೊರೆನೂರು, ಕೆ.ಆರ್. ವಿನಯ ರಾಜಶೇಖರ್, ವಿಜಯಶ್ರೀ ಅನಿಲ್ ಕೆದಿಲಾಯ, ಸುಶೀಲಾ ಹಾನಗಲ್, ಆಶಾ ಪುಟ್ಟರಾಜು, ಎಂ.ಎ. ರುಬೀನಾ, ಕೆ.ಕೆ. ಗಾಯತ್ರಿ, ಪವಿತ್ರ ಹೆತ್ತೂರು, ಕವಿತಾ ಪುಟ್ಟೇಗೌಡ, ಎ.ಕೆ. ಅನಂತ, ಎಲ್.ಎಂ. ಪ್ರೇಮ, ರಾಣಿ ರವೀಂದ್ರ, ದೀಪಿಕಾ ಸುದರ್ಶನ, ಕೆ.ವಿ. ಅಮೃತ, ಎಂ. ಪವಿತ್ರ, ಮಹೇಶ್ ತಿಮ್ಮಯ್ಯ, ವಸಂತಿ ರವೀಂದ್ರ, ಮಂಜುನಾಥ್ ಎಚ್.ಚಿರಕನಹಳ್ಳಿ, ವಿದ್ಯಾರ್ಥಿನಿ ಪೂರ್ಣಶ್ರೀ ಪಾರೇರ ಅವರು ತಮ್ಮ ಕವನಗಳನ್ನು ವಾಚಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದರು.

ನಿತ್ಯಶ್ರೀ ಪಾರೇರ ಮತ್ತು ತಂಡದವರಿAದ ಗೀತಗಾಯನ ನಡೆಯಿತು. ಪ್ರಮುಖರಾದ ಸೂದನ ರತ್ನಾವತಿ, ಭಾನುಪ್ರಕಾಶ್, ಉದಯಪ್ರಕಾಶ್, ಸುಶೀಲಾ, ಯು.ಆರ್.ಲೋಕೇಶ್, ಯತಿನ್, ಹರ್ಷ ಮತ್ತಿತರರು ಇದ್ದರು.