ಮಡಿಕೇರಿ, ಡಿ. ೧೭: ಅಹ್ಮದಿಯಾ ಮುಸ್ಲಿಂ ಜಮಾಅತ್ನ ಮಹಿಳಾ ವಿಭಾಗದ ವತಿಯಿಂದ ನಗರದ ಬಾಲಭವನದಲ್ಲಿ ಮಹಿಳಾ ಸರ್ವಧರ್ಮ ಸಮ್ಮೇಳನ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಎಲ್ಲರ ದೇಹದಲ್ಲಿ ಹರಿಯುವ ರಕ್ತ ಒಂದೇ, ನಾವು ಎಲ್ಲರೂ ಶಾಂತಿಗಾಗಿ ಒಟ್ಟಾಗಿ ಸೇರಿ ಸಹಬಾಳ್ವೆ ನಡೆಸಬೇಕೆಂದು ಹೇಳಿದರು.
ಲಜ್ನಾ ಇಮಾಇಲ್ಲಾಹ್ ಸದಸ್ಯರಾದ ಡಾ. ಅಫ್ರೀನ್ ಮೆಲ್ವಿನ್ ಮಾತನಾಡಿ, ಬಹುಧರ್ಮೀಯ ಹಾಗೂ ಬಹುಸಾಂಸ್ಕöÈತಿಕ ಸಮಾಜದಲ್ಲಿ ಜೀವಿಸುತ್ತಿರುವುದರಿಂದ ಪರಸ್ಪರ ಧರ್ಮಗಳ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಲಜ್ನಾ ಇಮಾಇಲ್ಲಾಹ್ ಸಂಸ್ಥೆಯ ಅಧ್ಯಕ್ಷೆ ಜೀನತ್ ಜಫುö್ರಲ್ಲಾ ಅವರು ``ಇಸ್ಲಾಂನಲ್ಲಿ ಮಹಿಳೆಯ ಸ್ಥಾನಮಾನ'' ವಿಷಯದ ಕುರಿತು ಮಾತನಾಡಿ, ಇಸ್ಲಾಂ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ÷್ಯ, ಸಮಾನತೆ, ಘನತೆ, ಗೌರವ, ರಕ್ಷಣೆ ಹಾಗೂ ಸೂಕ್ತ ಸ್ಥಾನಮಾನವನ್ನು ನೀಡುತ್ತದೆ ಎಂದು ವಿವರಿಸಿದರು.
ಶಿಕ್ಷಣ, ಉದ್ಯೋಗ, ಆರ್ಥಿಕ ಹಕ್ಕುಗಳು, ಭದ್ರತೆ ಹಾಗೂ ಸಂರಕ್ಷಣೆ, ವಿವಾಹ ಮತ್ತು ವಿಚ್ಛೇದನ ಸೇರಿದಂತೆ ಜೀವನದ ಎಲ್ಲಾ ವಲಯಗಳಲ್ಲಿ ಮಹಿಳೆಯರಿಗೆ ಹಕ್ಕುಗಳನ್ನು ನೀಡಿರುವುದನ್ನು ಹಲವಾರು ಉದಾಹರಣೆಗಳ ಮೂಲಕ ವಿವರಿಸಿದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಕೆ. ಭರತ್ ಮಾತನಾಡಿ, ಧರ್ಮ ಎಂದರೆ ಕೇವಲ ಮಾತಿನಲ್ಲಿ ಉಳಿಯದೇ, ನಮ್ಮೊಳಗೆ ನೆಲೆಸಿದ್ದು, ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದದ್ದು ಅಗತ್ಯ ಎಂದು ಹೇಳಿದರು.ಮಹಿಳೆಯರಲ್ಲಿ ಅಪಾರ ಶಕ್ತಿ ಇದೆ. ಸೌಹಾರ್ದತೆ, ಶಾಂತಿ ಮತ್ತು ಏಕತೆಯ ಉದ್ದೇಶದೊಂದಿಗೆ ಮಹಿಳೆಯರು ಒಟ್ಟಾಗಿ ಬಂದರೆ ಯಾವುದೇ ಸಾಧನೆ ಯನ್ನು ಮಾಡಬಹುದು ಎಂದು ಹೇಳಿದರು.
ಮಡಿಕೇರಿಯ ಸೈಂಟ್ ಮೈಕಲ್ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಸಿಲಿಯಾ ಮಾತನಾಡಿ, ಲೋಕದಲ್ಲಿ ಒಂದೇ ಒಂದು ಧರ್ಮವಿದ್ದು ಅದು ಮಾನವೀಯತೆಯ ಧರ್ಮ ಎಂದು ಹೇಳಿದರು.
ಪ್ರೀತಿ, ಕ್ಷಮೆ, ತ್ಯಾಗ ಮತ್ತು ಸಹನಶೀಲತೆಯ ಮೂಲಕ ಶಾಂತಿಯ ಮೂಲಭೂತ ಮಾನವ ಸಂಬAಧಗಳು ಗಟ್ಟಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಲಜ್ನಾ ಇಮಾಇಲ್ಲಾಹ್ ದಕ್ಷಿಣ ವಲಯದ ಅಧ್ಯಕ್ಷ ರೂಮಾನ್ ರಿಝ್ವಾನ್ ಮಾತನಾಡಿ, ಇಸ್ಲಾಂ ಧರ್ಮ ಹಾಗೂ ಇತರ ಧರ್ಮಗಳೊಂದಿಗೆ ಪರಸ್ಪರ ಗೌರವ, ಸಹಬಾಳ್ವೆ ಮತ್ತು ಸಾಮರಸ್ಯದ ಅಗತ್ಯತೆಯನ್ನು ವಿವರಿಸಿದರು.
ಇಸ್ಲಾಂ ಎಂಬ ಪದದ ಅರ್ಥವೇ ಶಾಂತಿ, ಎಲ್ಲಾ ಧರ್ಮಗಳನ್ನು ಗೌರವಿಸುವುದು ಅತ್ಯಂತ ಮಹತ್ವದ್ದು ಎಂದು ಹೇಳಿದರು. ಸಮ್ಮೇಳನದಲ್ಲಿ ವಿವಿಧ ಧರ್ಮಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಕಾರ್ಯಕ್ರಮವು ಪವಿತ್ರ ಕುರ್ಆನ್ ಪಾರಾಯಣದೊಂದಿಗೆ ಆರಂಭಗೊAಡಿತು. ``ಹಿಂದೂ, ಮುಸ್ಲಿಂ, ಕ್ರೆöÊಸ್ತರೆಲ್ಲರೂ ಒಂದೇ, ನಮ್ಮ ದೇಹದಲ್ಲಿ ಹರಿಯುವ ರಕ್ತ ಒಂದೇ'' ಎಂಬ ಸಂದೇಶ ಸಾರುವ ಮೈತ್ರಿಗಾನವನ್ನು ನಸೀರಾ ಹಾಡಿದರು.
ಕಾರ್ಯಕ್ರಮದಲ್ಲಿ ಲಜ್ನಾ ಇಮಾಇಲ್ಲಾಹ್ ಸಂಸ್ಥೆಯು ೧೦೦ ವರ್ಷಗಳ ಪೂರೈಸಿರುವ ವಿಶೇಷ ಸಾಕ್ಷö್ಯಚಿತ್ರವನ್ನು ಪ್ರದರ್ಶಿಸಲಾಯಿತು. ಇದರಲ್ಲಿ ಸಂಸ್ಥೆಯ ಇತಿಹಾಸ, ಉದ್ದೇಶಗಳು ಹಾಗೂ ಮಡಿಕೇರಿ ಶಾಖೆಯು ಸಮಾಜದ ಮಾನವ ಕಲ್ಯಾಣಕ್ಕಾಗಿ ನಡೆಸುತ್ತಿರುವ ವಿವಿಧ ಸೇವಾ ಕಾರ್ಯಗಳ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಮೂಹಗಾನವನ್ನು ನಾದಿಯಾ, ಆರಿಫಾ ಮತ್ತು ಆತಿಫಾ ಹಾಡಿದರು. ಇದೇ ಸಂದರ್ಭ ಎಲ್ಲಾ ಗಣ್ಯರನ್ನು ಸನ್ಮಾನಿಸಲಾಯಿತು.
ಸಾಲಿಹಾ ಬಾಸಿತಾ ಕಾರ್ಯಕ್ರಮ ನಿರೂಪಿಸಿದರು. ಫಿದಾ ಅನ್ವರ್ ಕುರ್ಆನ್ ಪಾರಾಯಣ ಹಾಗೂ ಅರ್ಥವಾಚನ ಮಾಡಿದರು. ಝರೀನಾ ಮುಜೀಬ್ ಸ್ವಾಗತಿಸಿದರು. ಮುಬಶಿರ್ ಆಯೂಬ್ ವಂದಿಸಿದರು.