ಮಡಿಕೇರಿ, ಡಿ. ೧೭: ಪೊನ್ನಂಪೇಟೆ ತಾಲೂಕು ಕಿರುಗೂರು ಕುಟ್ಟಿಚಾತ ಮಂದ್ನಲ್ಲಿ ಬೀಟಿವಾಡ, ಕಿರುಗೂರು, ಮತ್ತೂರು ಗ್ರಾಮದವರನ್ನು ಒಳಗೊಂಡ ಕೊಡಗು ಹೆಗ್ಗಡೆ ಜನಾಂಗದವರ ಪುತ್ತರಿ ಕೋಲ್ ನಮ್ಮೆ ನಡೆಯಿತು.
ಕೋಲಾಟ್, ಉಮ್ಮತ್ತಾಟ್, ಪರೆಯಕಳಿ, ವಾಲಗತಾಟ್, ಕ್ರೀಡೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.
ಕುಟ್ಟಿಚಾತ ದೇವಸ್ಥಾನದ ಅಧ್ಯಕ್ಷ ಕೊರಕುಟ್ಟಿರ ರಾಜಪ್ಪ, ಕಾರ್ಯದರ್ಶಿ ಚಾರಿಮಂಡ ಪಟ್ಟು, ಪ್ರಮುಖರಾದ ಕೊರಕುಟ್ಟಿರ ಚಂಗಪ್ಪ, ಪೊಕ್ಕಳಿಚಂಡ ಪೂಣಚ್ಚ, ಪಾನಿಕುಟ್ಟಿರ ಕಾರ್ಯಪ್ಪ, ಕಾಕೇರ ರವಿ, ಸವಿ ದೇವಯ್ಯ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.