`ಶಕ್ತಿ’ ವರದಿಗೆ ಸ್ಪಂದನ

ಕೂಡಿಗೆ, ಡಿ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ರಾಜ್ಯ ಸರ್ಕಾರದ ಹೊಸ ಯೋಜನೆಯಾದ ಮೇಕೆ ಸಾಕಾಣಿಕೆ ಮತ್ತು ಹಾಲು ಉತ್ಪಾದನೆ ಮಾಡುವ ಉದ್ದೇಶಿತ ಯೋಜನೆಯ ಸ್ಧಳಕ್ಕೆ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಭೇಟಿ ನೀಡಿ ಪರಿಶೀಲಿಸಿದರು. ತಾ. ೧೬ರಂದು `ಶಕ್ತಿ’ ಪತ್ರಿಕೆಯಲ್ಲಿ ಪ್ರಕಟವಾದ. “ಮೇಕೆ ಸಾಕಾಣಿಕೆ- ಹಾಲು ಉತ್ಪಾದನಾ ಘಟಕದ ಯೋಜನೆ ಮೂಲೆಗುಂಪು, ೧೦ ವರ್ಷಗಳು ಕಳೆದರೂ ಪೂರ್ಣಗೊಳ್ಳದ ಯೋಜನೆ ಖಾಲಿ ಕಟ್ಟಡ ಕಾಯಲು ಇಬ್ಬರು ಸಿಬ್ಬಂದಿ’’ ಎಂಬ ವರದಿಗೆ ಜಿಲ್ಲಾಡಳಿತ ಪರವಾನಗಿ ತಹಶೀಲ್ದಾರ್À ಕಿರಣ್ ಜಿ. ಗೌರಯ್ಯ ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವಿಷಯಕ್ಕೆ ಸಂಬAಧಿಸಿದAತೆ ಜಿಲ್ಲಾಡಳಿತದ ಗಮನ ಸೆಳೆಯಲಾಗುವುದು. ಈಗಾಗಲೇ ಗುರುತಿಸಲ್ಪಡಲಾಗಿದ್ದ ಜಾಗ ಒತ್ತುವರಿ ಆಗಿದೆ ಎಂಬ ವರದಿಯ ಅನ್ವಯ ಇಲಾಖೆ ವತಿಯಿಂದ ಸರ್ವೆ ಕಾರ್ಯ ನಡೆಸಿ ಹದ್ದುಬಸ್ತು ಗುರುತಿಸಿ ಸಂಬAಧಿಸಿದ ಇಲಾಖೆಗೆ ಒದಗಿಸಲಾಗುವುದು. ಸಂಬAಧಿಸಿದ ಇಲಾಖೆಯವರು ಕಾರ್ಯೋನ್ಮಖರಾಗಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಕಂದಾಯ ಪರಿವೀಕ್ಷಣಾಧಿಕಾರಿ ಸಂತೋಷ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.