ಮಡಿಕೇರಿ, ಡಿ. ೧೯: ವರ್ಷದ ಹಿಂದೆ ವಸ್ತç ಸಂಹಿತೆಯಿAದ ನಡೆದ ಅಹಿತಕರ ಪ್ರಕರಣಗಳ ಬಳಿಕ ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ಮಹದೇಶ್ವರ ಕ್ಷೇತ್ರದಲ್ಲಿ ತಾ. ೨೩ರಿಂದ ೨೮ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ಆರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ಜಾತ್ರೋತ್ಸವವನ್ನು ವಿಜೃಂಭಣೆಯಿAದ ನಡೆಸಲು ದೇವಾಲಯ ಸಮಿತಿ ಸನ್ನದ್ಧವಾಗಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾರ್ಯದರ್ಶಿ ತೋರೇರ ಕಾಶಿ ಕಾವೇರಪ್ಪ, ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ತಾ. ೧೫ರಂದು ನಡೆದ ಸಭೆಯಲಿ,್ಲ ಜಾತ್ರಾ ದಿನಗಳಂದು ದೇವಾಲಯದೊಳಗೆ ದೈವಿಕ ವಿಧಿ ವಿಧಾನಗಳು ನಡೆಯುವುದರಿಂದ ಹಾಗೂ ಇಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಸಾರ್ವಜನಿಕರಿಗೆ ಉತ್ಸವದ ಸಂದರ್ಭ ದೇವಾಲಯದೊಳಗೆ ಒಳಗೆ ಪ್ರವೇಶವಿರುವುದಿಲ್ಲ. ಒಳಭಾಗದಲ್ಲಿ ವಿಧಿ ವಿಧಾನ ನಡೆಸುವ ತಂತ್ರಿವರ್ಗಕ್ಕೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಅಲ್ಲದೆ, ಪೂಜೆಯ ಬಳಿಕ ಸ್ವಚ್ಛತಾ ಕೆಲಸಗಾರರು ಮಾತ್ರ ಒಳಗೆ ಪ್ರವೇಶಿಸಬಹುದಾಗಿದೆ. ಒಳಗೆ ನಡೆಯುವ ಕೈಂಕರ್ಯಗಳನ್ನು ಹೊರಗಿನಿಂದ ವೀಕ್ಷಿಸಲು ಎಲ್‌ಇಡಿ ಪರದೆ ಅಳವಡಿಲಾಗುವುದು ಎಂದು ಮಾಹಿತಿ ನೀಡಿದರು.

ಸಮಿತಿ ಅಧ್ಯಕ್ಷ ಕಟ್ಟೆಮನೆ ಜನಾರ್ಧನ್ ಮಾತನಾಡಿ, ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು. ಉತ್ಸವದ ದಿನಗಳಂದು ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಇರಲಿದೆ. ಪ್ರತಿನಿತ್ಯ ವಿಶೇಷ ಪೂಜೆ, ಹೋಮ-ಹವನ ಸೇರಿದಂತೆ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ ಎಂದು ವಿವರಿಸಿದರು. ಅರ್ಚಕ ವಿಘ್ನೇಶ್ ಅವರನ್ನು ಕೈಬಿಟ್ಟ ಬಗ್ಗೆ ಪ್ರತಿಕ್ರಿಯೆ ನೀಡಿ, ವಿಘ್ನೇಶ್ ರಾಜೀನಾಮೆ ಪತ್ರ ನೀಡಿದ್ದು, ಅದಿನ್ನೂ ಅಂಗೀಕಾರವಾಗಿಲ್ಲ. ಅವರ ವೈಯಕ್ತಿಕ ಕಾರಣಗಳಿಂದ ಅರ್ಚಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೇವಾಲಯದ ಆಡಳಿತ ಮಂಡಳಿಯಲ್ಲಿ ಎಲ್ಲ ವರ್ಗವನ್ನೂ ಸೇರಿಸಿಕೊಳ್ಳಲಾಗಿದೆ ಎಂದರು.

ಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ನಂದೇಟಿರ ಗಣಪತಿ, ಪೆರಿಯಪ್ಪಮ್ಮನ ಮಹೇಶ್, ಮರಾಠಿ ದೇವಪ್ಪ ಮತ್ತು ಅರ್ಚಕರಾದ ವೇಣುಗೋಪಾಲ್ ಉಪಸ್ಥಿತರಿದ್ದರು.