ನಾಪೋಕ್ಲು, ಡಿ. ೧೯: ಕಾವೇರಿಮನೆ ಕುಟುಂಬಸ್ಥರಿAದ ಅಯ್ಯಂಗೇರಿ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಹುತ್ತರಿ ಕಪ್ ಕ್ರೀಡಾಕೂಟದ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ೦.೨೨ ರೈಫಲ್ ಸ್ಪರ್ಧೆಯಲ್ಲಿ ಜಗತ್ ಬೆಳ್ಳಿಯನ ಪ್ರಥಮ ಸ್ಥಾನ ಗಳಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡರು. ದ್ವಿತೀಯ ಸ್ಥಾನ ಕೃತಿಕ ಬೆಳ್ಳಿಯನ ಪಾಲಾಯಿತು. ತೃತೀಯ ಸ್ಥಾನವನ್ನು ಜಗದೀಶ್ ಶಂಕರನ ಗಳಿಸಿಕೊಂಡರು.

೦.೨೨ ರೈಫಲ್ ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನ ರೂ. ೧೦,೦೦೦ ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ. ೭,೦೦೦ ಮತ್ತು ಟ್ರೋಫಿ ಹಾಗೂ ತೃತೀಯ ಬಹುಮಾನ ರೂ. ೫,೦೦೦ ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ೧೨ ಬೋರ್ ವಿಭಾಗದಲ್ಲಿ ದಿಲಿಪ್ ಬೊಳ್ಳರಪಂಡ ಪ್ರಥಮ ಸ್ಥಾನ ಗಳಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡರು. ದ್ವಿತೀಯ ಸ್ಥಾನ ಪ್ರತಿಕ್ ಚೆಂಬು ಪಾಲಾಯಿತು. ತೃತೀಯ ಸ್ಥಾನವನ್ನು ಭರತ್ ಕಾವೇರಿಮನೆ ಗಳಿಸಿಕೊಂಡರು.

೧೨ ಬೋರ್ ವಿಭಾಗದಲ್ಲಿ ಪ್ರಥಮ ಬಹುಮಾನ ರೂ. ೧೦,೦೦೦ ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ. ೭,೦೦೦ ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನ ರೂ. ೫,೦೦೦ ನಗದು ಹಾಗೂ ಟ್ರೋಫಿ ವಿತರಿಸಲಾಯಿತು. ಏರ್‌ಗನ್ ವಿಭಾಗದಲ್ಲಿ ಮಿಥುನ್ ಬೆಳ್ಳಿಯನ ಪ್ರಥಮ ಸ್ಥಾನ ಗಳಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಂಡರು. ದ್ವಿತೀಯ ಸ್ಥಾನ ಡಿಶೀಲ್ ಪಾಲಾಯಿತು. ತೃತೀಯ ಸ್ಥಾನವನ್ನು ಚೇತನ್ ಕುದುಕುಳಿ ಗಳಿಸಿಕೊಂಡರು. ಏರ್‌ಗನ್ ವಿಭಾಗದಲ್ಲಿ ಪ್ರಥಮ ಬಹುಮಾನ ರೂ. ೫,೦೦೦ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ. ೩,೦೦೦ ನಗದು ಹಾಗೂ ಟ್ರೋಫಿ, ತೃತೀಯ ಬಹುಮಾನ ರೂ. ೨,೦೦೦ ನಗದು ಹಾಗೂ ಟ್ರೋಫಿ ವಿತರಿಸಲಾಯಿತು.

ಸಾರ್ವಜನಿಕರಿಗಾಗಿ ಆಯೋಜಿಸಲಾಗಿ ರುವ ಮುಕ್ತ ಮ್ಯಾರಥಾನ್ ಸ್ಪರ್ಧೆಯನ್ನು ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಉದ್ಘಾಟಿಸಿದರು.

ಸಾರ್ವಜನಿಕರಿಗೆ ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ಅಯ್ಯಂಗೇರಿ ಶಾಲಾ ಮೈದಾನದವರೆಗೆ ೮ ಕಿ.ಮೀ. ಅಂತರದ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಬಿಳಿಗೇರಿಯ ಅಂಜೇರಿರ ಟಿಸನ್ ಮಾದಪ್ಪ ಪ್ರಥಮ, ಕುಶಾಲನಗರದ ನಿತಿನ್ ಯು.ಎನ್. ಹಾಗೂ ಕೆದಂಬಾಡಿ ಕೃಷ್ಣ ಕ್ರಮವಾಗಿ ದ್ವಿತೀಯ, ತೃತೀಯ ಬಹುಮಾನ ಗಳಿಸಿದರು. ಮ್ಯಾರಥಾನ್ ಸ್ಪರ್ಧೆಯಲ್ಲಿ ೩೮ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಮಹಿಳೆಯರ ವಿಭಾಗದಲ್ಲಿ ಕಟ್ಟೆಮನೆ ಪ್ರಕೃತಿ ಬೋಪಯ್ಯ ಪ್ರಥಮ, ಚೆಟ್ಟಿಮಾನಿಯ ಆಮೆಮನೆ ರಶ್ಮಿತಾ ಹಾಗೂ ಸುಳ್ಯಕೋಡಿ ವಂಶಿಕ ಕ್ರಮವಾಗಿ, ದ್ವಿತೀಯ, ತೃತೀಯ ಬಹುಮಾನ ಗಳಿಸಿದರು. ೧೫ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸೂದನ ಗವಿನ್ ಪ್ರಥಮ, ಕೂರನ ಸಮರ್ಥ್ ಹಾಗೂ ಮಸೂದ್ ಕ್ರಮವಾಗಿ ದ್ವಿತೀಯ, ತೃತೀಯ ಬಹುಮಾನ ಗಳಿಸಿದರು. ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಾರ್ಥಿಗಳಿಗೆ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೇರಿಮನೆ ಭರತ್ ವಹಿಸಿದ್ದರು. ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಉದ್ಘಾಟಿಸಿದರು. ಅತಿಥಿಗಳಾಗಿ ಭಾಗವಹಿಸಿದ ಟ್ರೋಫಿ ದಾನಿ ಎಡಿಕೇರಿ ಪ್ರಸನ್ನ ಮಾತನಾಡಿ, ಕುಟುಂಬದ ಒಗ್ಗಟ್ಟಿನಿಂದ ಕ್ರೀಡೆಗೆ ಯಶಸ್ಸು ಲಭಿಸಲಿದೆ. ಗ್ರಾಮೀಣ ಕ್ರೀಡಾಕೂಟದಿಂದ ಸ್ನೇಹ, ಪ್ರೀತಿ, ಒಗ್ಗಟ್ಟು ಬಲವರ್ಧನೆ ಆಗಲಿದೆ ಎಂದರು.

ಈ ಸಂದರ್ಭ ಅಯ್ಯಂಗೇರಿ ಗ್ರಾಮ ಪಂಚಾಯಿತಿ ಸದಸ್ಯ ರಂಜಿತ್, ಕಾವೇರಿಮನೆ ಮಮತಾ ಸುನಿಲ್, ಕೇನೆರ ಮೀನಾಕ್ಷಿ, ಪ್ರಕಾಶ್, ಕಾರುಗುಂದ, ಗೌಡ ಸಮಾಜದ ಕಾರ್ಯದರ್ಶಿ ಬೆಳ್ಳಿಯನ ರವಿ, ಶರತ್ ಪದಕಲ್ಲು, ಶ್ರೀ ಕೃಷ್ಣ ಯುವಕ ಸಂಘದ ಕಾರ್ಯದರ್ಶಿ ದೀಪಕ್, ಕಾವೇರಿಮನೆ ಕುಟುಂಬದ ಹಿರಿಯರು, ಸದಸ್ಯರು ಹಾಗೂ ಕ್ರೀಡಾ ಪ್ರೇಮಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.