ವಿಶೇಷ ವರದಿ : ಅನಿಲ್ ಹೆಚ್.ಟಿ.
ಬಾಳೆಹೊನ್ನೂರು, ಡಿ. ೧೯: ಕಾಫಿ ಕೃಷಿಯಲ್ಲಿನ ನವ ತಂತ್ರಜ್ಞಾನ, ಕಾಫಿ ಕೃಷಿಯ ಸಮಸ್ಯೆಗಳ ಪರಿಹಾರದ ದೃಷ್ಟಿಯಿಂದ ೧೯೨೫ರಲ್ಲಿ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಸ್ಥಾಪಿತವಾದ ರಾಷ್ಟಿçÃಯ ಕಾಫಿ ಸಂಶೋಧನಾ ಕೇಂದ್ರಕ್ಕೆ ಈಗ ಶತಮಾನದ ಸಂಭ್ರಮ.
ಇAದಿನಿAದ ಮೂರು ದಿನಗಳು ಕಾಫಿ ಸಂಬAಧಿತ ವಿವಿಧ ವಿಚಾರಗಳ ಬಗ್ಗೆ ಗೋಷ್ಠಿ, ಪ್ರದರ್ಶನ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ಈ ಕೇಂದ್ರ ಸಜ್ಜಾಗಿದೆ. ಭಾರತದ ಕಾಫಿ ಕೃಷಿಯ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಕಾಫಿ ನಾಡಿನ ಈ ಹೆಮ್ಮೆಯ ಕೇಂದ್ರದ ಶತಮಾನ ಸಂಭ್ರಮಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಎಂಬ ಪಟ್ಟಣ ಹಬ್ಬದ ಸಂಭ್ರಮದಿAದ ಸಜ್ಜುಗೊಂಡಿದೆ. ಕಾಫಿ ಸಂಶೋಧನಾ ಕೇಂದ್ರಕ್ಕೆ ೫ ಕಿ.ಮೀ. ದೂರದಿಂದಲೇ ರಸ್ತೆಯ ಇಕ್ಕೆಲಗಳಲ್ಲಿ ತೋರಣ, ವಿದ್ಯುದ್ದೀಪಾಲಂಕರ ಮಾಡಲಾಗಿದ್ದು, ಬಾಳೆಹೊನ್ನೂರಿನ ಜನತೆ ತಮ್ಮ ಮನೆಯ ಹಬ್ಬದಂತೆ ಕೇಂದ್ರದ ಶತಮಾನೋತ್ಸವಕ್ಕಾಗಿ ಆಗಮಿಸಲಿರುವ ದೇಶವಿದೇಶಗಳ ಅತಿಥಿ ಗಣ್ಯರನ್ನು ಸ್ವಾಗತಿಸಲು ಸಿದ್ದರಾಗಿದ್ದಾರೆ. ಮೂರು ದಿನಗಳ ಸಮಾರಂಭಕ್ಕೆ ೩೦ ಸಾವಿರ ಜನರನ್ನು ನಿರೀಕ್ಷಿಸಲಾಗಿದೆ. ಭಾರತೀಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಕಾರ್ಯಕ್ರಮಕ್ಕಾಗಿ ಭಾರತೀಯ ಕಾಫಿ ಮಂಡಳಿಯು ಅಂದಾಜು ೩.೫೦ ಕೋಟಿ ರೂ. ವೆಚ್ಚ ಮಾಡುತ್ತಿದೆ. ಕಾಫಿಗೆ ಸಂಬAಧಿಸಿದAತೆ ರಫ್ತುದಾರರು, ಕೃಷಿಕರು, ಯಂತ್ರೋಪಕರಣಗಳು, ಕಾಫಿ ಕೆಫೆಗಳು, ವ್ಯಾಪಾರೋದ್ಯಮಿಗಳು, ಸಂಶೋಧನಾ ಸಂಸ್ಥೆಗಳಿಗೆ ಮೀಸಲಿಟ್ಟಿರುವ ೧೩೦ ಪ್ರದರ್ಶನ ಮಳಿಗೆಗಳು ಕೂಡ ಸಾವಿರಾರು ಕೃಷಿಕರ ಮನಸೆಳೆಯಲು ಸಜ್ಜಾಗುತ್ತಿದೆ.
ಶತಮಾನೋತ್ಸವದ ಅಂಗವಾಗಿ ಅರೇಬಿಕಾ ಕಾಫಿಯಲ್ಲಿ ಬಿಳಿಕಾಂಡಕೊರಕ ನಿವಾರಕ ಅಂಶ ಹೊಂದಿರುವ ಕುಬ್ಜ ತಳಿಯ ಸೆಲೆಕ್ಷನ್ ೧೫ ಎಂಬ ಹೊಸ ತಳಿಯನ್ನು ಸೆಕ್ಷನ್ ೧೪ ಎಂಬ ತಳಿಯೊಂದಿಗೆ ಕೇಂದ್ರವು ಲೋಕಾರ್ಪಣೆ ಮಾಡುತ್ತಿದೆ. ಈವರೆಗೂ ಈ ಕೇಂದ್ರದಿAದ ೧೩ ನೂತನ ಕಾಫಿ ತಳಿಗಳು ಕೃಷಿಕರ ಬಳಕೆಗೆ ದೊರಕಿರುವುದು ವಿಶೇಷವಾಗಿದೆ.
ಕಾಫಿ ಬೆಳೆಗೆ ಕೀಟಬಾಧೆ ಮತ್ತು ರೋಗಗಳು ಕಾಡತೊಡಗಿದ್ದಾಗ ಅಂದಿನ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದಾಗಿ ಕೊಪ್ಪ ಗ್ರಾಮದಲ್ಲಿ ೧೯೨೫ ನೇ ಡಿಸೆಂಬರ್ ೧೫ ರಂದು ಕಾಫಿಗಾಗಿಯೇ ಮೀಸಲಾಗಿರುವ ಪ್ರಯೋಗಾಲಯದ ಈ ಕೇಂದ್ರ ಸ್ಥಾಪನೆಯಾಯಿತು ೧೯೨೭ ರಲ್ಲಿ ಬಾಳೆಹೊನ್ನೂರಿನಲ್ಲಿರುವ ಈಗಿನ ಸ್ಥಳಕ್ಕೆ ಕೇಂದ್ರವು ಸ್ಥಳಾಂತರಗೊAಡಿತ್ತು. ೧೯೪೬ ರಲ್ಲಿ ರಾಷ್ಟ್ರೀಯ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರ ಎಂಬ ಹೆಸರನ್ನು ಇದು ಪಡೆದುಕೊಂಡಿತ್ತು.
ಕಳೆದ ೧ ಶತಮಾನದಿಂದ ಲಕ್ಷಾಂತರ ಕಾಫಿ ಕೃಷಿಕರಿಗೆ ಅನೇಕ ವಿಧದಲ್ಲಿ ವರದಾನವಾಗಿ ಪರಿಣಮಿಸಿರುವ ಈ ಕೇಂದ್ರವು ಕಾಫಿಗೆ ಸಂಬAಧಿಸಿದAತೆ ಸಂಶೋಧನೆಗಳು, ಹೊಸ ತಳಿಯ ಕಾಫಿ ತಳಿಯ ಸೃಷ್ಟಿ, ಕಾಫಿಯ ಗುಣಮಟ್ಟ ಹೆಚ್ಚಳಕ್ಕೆ ಯೋಜನೆ, ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಮಣ್ಣಿನ ಗುಣಮಟ್ಟ ಪರೀಕ್ಷೆ, ಕಾಫಿಗೆ ತಗುಲುವ ವಿವಿಧ ರೋಗಗಳಿಗೆ ಪರಿಹಾರ ಸೇರಿದಂತೆ ಭಾರತದಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ಪ್ರಾಯೋಗಿಕ ಕೇಂದ್ರವಾಗಿಯೂ ಪ್ರಸಿದ್ದಿ ಪಡೆದಿದೆ.
ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರ, ಚೆಟ್ಟಳ್ಳಿಯ ಸಂಶೋಧನಾ ಕೇಂದ್ರ ಸೇರಿದಂತೆ ಭಾರತದಾದ್ಯಂತ ಐದು ಸಂಶೋಧನಾ ಕೇಂದ್ರಗಳು ಕಾಫಿಗಾಗಿಯೇ ಮೀಸಲಿದ್ದು ಇದರಲ್ಲಿ ೧೩೦ ವಿಜ್ಞಾನಿಗಳು, ಕೃಷಿ ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಬಾಳೆಹೊನ್ನೂರಿನ ಕೇಂದ್ರದಲ್ಲಿ ಹಲವಾರು ವರ್ಷಗಳಿಂದ ಯೂರೋಪ್, ನೇಪಾಳ, ಶ್ರೀಲಂಕಾ, ಕೀನ್ಯಾ, ಸಿಂಗಾಪುರ ಸೇರಿದಂತೆ ಜಗತ್ತಿನ ವಿವಿಧೆಡೆಗಳ ಕೃಷಿಕರಿಗೆ ಕಾಫಿ ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ ಆಯೋಜಿಸುತ್ತಾ ಬರಲಾಗಿದೆ. ಈ ಮೂಲಕ ಭಾರತದ ಕಾಫಿಯನ್ನು ವಿಶ್ವದಗಲಕ್ಕೂ ಪಸರಿಸುವ ಕೈಂಕರ್ಯದಲ್ಲಿಯೂ ಈ ಸಂಶೋಧನಾ ಕೇಂದ್ರ ಹೆಸರುವಾಸಿಯಾಗಿದೆ.