ನಾಪೋಕ್ಲು, ಡಿ. ೧೯: ಇತಿಹಾಸ ಪ್ರಸಿದ್ಧ ಸತ್ಯ ಸಂಧತೆಯ ಬೇತು ಗ್ರಾಮದ ಮಕ್ಕಿ ಶ್ರೀ ಶಾಸ್ತಾವು ದೇವರ ಹಬ್ಬವು ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊAಡಿತು.

ಉತ್ಸವದ ಅಂಗವಾಗಿ ಸಾಂಪ್ರದಾಯಿಕವಾಗಿ ನಡೆದು ಬಂದAತೆ ಶ್ರೀ ಶಾಸ್ತಾವು ಸನ್ನಿಧಿಯಲ್ಲಿ ತಾ.೧೫ ರಂದು ಭಕ್ತಾದಿಗಳು ಹಾಗೂ ದೇವಾಲಯದ ತಕ್ಕ ಮುಖ್ಯಸ್ಥರು ದೇವರಿಗೆ ಹರಕೆ ರೂಪದಲ್ಲಿ ಮಣ್ಣಿನ ಪ್ರತಿಕೃತಿ ನಾಯಿ ಒಪ್ಪಿಸುವ ಕಾರ್ಯಕ್ರಮದ ಮುಖಾಂತರ ಹಬ್ಬಕ್ಕೆ ಚಾಲನೆ ನೀಡಲಾಯಿತು.

ತಾ. ೧೭ ರಂದು ದೇವಾಲಯದ ಆವರಣದಲ್ಲಿ ತಕ್ಕ ಮುಖ್ಯಸ್ಥರು ಸೇರಿ ಕೊಟ್ಟಿ ಪಾಡುವ ಕಾರ್ಯಕ್ರಮ ನಡೆಸಲಾಯಿತು. ತಾ. ೧೮ ರಾತ್ರಿ ಅಂದಿ ಬೊಳಕ್ (ದೀಪಾರಾಧನೆ) ಕಾರ್ಯಕ್ರಮ ನಂತರ ರಾತ್ರಿಯಿಂದ ಶುಕ್ರವಾರ ಬೆಳಗ್ಗಿನ ವರೆಗೆ ವಿವಿಧ ದೈವಗಳ ಕೋಲ ನಡೆದು ಬೆಳಿಗ್ಗೆ ಕಲ್ಯಾಟ ಅಜ್ಜಪ್ಪ ದೈವದ ಕೋಲ ನಡೆಯಿತು. ಮಧ್ಯಾಹ್ನ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಏರ್ಪಾಡಿಸಲಾಗಿತ್ತು.

ಅಪರಾಹ್ನ ಶ್ರೀ ವಿಷ್ಣುಮೂರ್ತಿ ಮೇಲೇರಿ (ಚೌಂಡಿ ಅಗ್ನಿ ಪ್ರವೇಶ) ನೆರವೇರಿತು. ಈ ಸಂದರ್ಭ ಐದಾರು ತಿರೂಳ (ದೇವರ ಆವೇಶ) ಇದ್ದು ಜನರಿಗೆ ಆಶೀರ್ವಾದ ನೀಡುತ್ತಿರುವುದು ಕಂಡು ಬಂತು. ನಂತರ ನೆರೆದ ಭಕ್ತಾದಿಗಳು ದೈವಕ್ಕೆ ಹರಕೆ ಕಾಣಿಕೆ ಒಪ್ಪಿಸುವ ಕಾರ್ಯಕ್ರಮದೊಂದಿಗೆ ಹಬ್ಬವು ಸಂಪನ್ನಗೊAಡಿತು. ಉತ್ಸವದಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಊರ ಮತ್ತು ಪರವೂರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

- ದುಗ್ಗಳ ಸದಾನಂದ