ಚೆಯ್ಯಂಡಾಣೆ, ಡಿ. ೧೯: ಮೂರ್ನಾಡು ವೀರಾಜಪೇಟೆ ಮುಖ್ಯ ರಸ್ತೆಯ ಕಾಕೋಟುಪರಂಬುವಿನಲ್ಲಿ ಟಿಪ್ಪರ್ ವಾಹನದ ಹಿಂಬದಿಗೆ ಜೀಪ್ ಅಪ್ಪಳಿಸಿ ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಮೂರ್ನಾಡು ಕಡೆಯಿಂದ ವೀರಾಜಪೇಟೆ ಕಡೆಗೆ ತೆರಳುತ್ತಿದ್ದ ಟಿಪ್ಪರ್ ವಾಹನದ ಹಿಂಬದಿಗೆ ಇದೇ ಮಾರ್ಗವಾಗಿ ತೆರಳುತ್ತಿದ್ದ ಬಿಎಸ್ಎನ್ಎಲ್ ಉದ್ಯೋಗಿಗಳು ಪ್ರಯಾಣಿಸುತ್ತಿದ್ದ ಬೊಲೆರೋ ಜೀಪ್ ಚಾಲಕನ ನಿಯಂತ್ರಣ ಕಳೆದುಕೊಂಡು ಟಿಪ್ಪರ್ ವಾಹನ ಹಿಂಬದಿಗೆ ಅಪ್ಪಳಿಸಿದೆ. ಅಪಘಾತದಿಂದ ಜೀಪಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ವೀರಾಜಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಜೀಪ್ ಸಂಪೂರ್ಣ ಜಖಂಗೊAಡಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.