ಮಡಿಕೇರಿ, ಡಿ. ೨೧: ಕೊಡಗು ವಿದ್ಯಾ ಇಲಾಖಾ ನೌಕಕರ ಪತ್ತಿನ ಸೌಹಾರ್ಧ ಸಹಕಾರಿ ಸಂಘ ವತಿಯಿಂದ ಸಂಸ್ಥೆಗೆ ೧೦೦ ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ಶತ ಸಂಭ್ರಮ ಎಂಬ ಕಾರ್ಯಕ್ರಮವು ೨೦೨೬ ರ ಜನವರಿ ೧೧ ರಂದು ನಗರದ ಗೌಡ ಸಮಾಜದಲ್ಲಿ ನಡೆಯಲಿದೆ.

ಆ ದಿಸೆಯಲ್ಲಿ ಕೊಡಗು ಜಿಲ್ಲಾ ಶಿಕ್ಷಣ ಇಲಾಖಾ ನೌಕರರಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ತಾ. ೨೫ ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಪುರುಷರಿಗೆ ವಾಲಿಬಾಲ್, ಹಗ್ಗಜಗ್ಗಾಟ, ಕಬಡ್ಡಿ, ಮಹಿಳೆಯರಿಗೆ ಹಗ್ಗಜಗ್ಗಾಟ ಮತ್ತು ಥ್ರೋಬಾಲ್. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ೧೦೦ ಮೀಟರ್ ಓಟದ ಸ್ಪರ್ಧೆ, ನಡೆಯುವ ಸ್ಪರ್ಧೆ ಮತ್ತು ಮೂಸಿಕಲ್ ಚೇರ್, ಭಾರತದ ಗುಂಡು ಎಸೆತ ಮತ್ತು ವಿಷದ ಚೆಂಡು.

ನAತರ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ಜನಪದ ನೃತ್ಯ (ಗುಂಪು)-೧೦ ಜನಕ್ಕೆ ಮೀರದಂತೆ, ಸಿನಿಮಾ ಹಾಡಿಗೆ ನೃತ್ಯ (ಗುಂಪು)-೧೦ ಜನಕ್ಕೆ ಮೀರದಂತೆ, ಭಾವಗೀಎ ಮತ್ತು ಜಾನಪದ ಗೀತೆ (ವೈಯಕ್ತಿಕ), ಏಕಾಭಿನಯ (ವೈಯಕ್ತಿಕ), ಜನಪದ ಗೀತೆ (ಗುಂಪು) ಮಹಿಳೆಯರಿಗೆ ಮಾತ್ರ ೧೦ ಜನಕ್ಕೆ ಮೀರದಂತೆ. ನಿವೃತ್ತ ಶಿಕ್ಷಕರಿಗೆ ನಡೆಯುವ ಸ್ಪರ್ಧೆ, ಬಕೆಟ್‌ನಲ್ಲಿ ಬಾಲ್ ಹಾಕುವುದು ಮತ್ತು ವಿಷದ ಚೆಂಡು. ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಪ್ರತ್ಯೇಕವಾಗಿ ದೇಶದ ಆರ್ಥಿಕತೆಯ ಬೆಳೆವಣಿಗೆಯಲ್ಲಿ ಸಹಕಾರ ಮತ್ತು ಸೌಹಾರ್ದದ ಪಾತ್ರ ಕುರಿತು ಪ್ರಬಂಧ ಸ್ಪರ್ಧೆ ನಡೆಯಲಿದೆ.