ಸೋಮವಾರಪೇಟೆ, ಡಿ. ೨೧: ದೇಶದ ಭವಿಷ್ಯವಾಗಿರುವ ಯುವಜನಾಂಗ ಪ್ರಸ್ತುತ ಡ್ರಗ್ಸ್ಗಳಿಗೆ ಬಲಿಯಾಗುತ್ತಿರುವುದು ದುರಂತ. ಇದರ ದೂರಗಾಮಿ ಪರಿಣಾಮ ಊಹಿಸಲೂ ಅಸಾಧ್ಯ. ಈ ಹಿನ್ನೆಲೆ ವಿದ್ಯಾರ್ಥಿಗಳು ಹಾಗೂ ಯುವ ಜನಾಂಗ ಡ್ರಗ್ಸ್ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರೇಮ್‌ನಾಥ್ ಸಲಹೆ ನೀಡಿದರು.

ಪರಿವರ್ತನಾ ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ‘ಡ್ರಗ್ಸ್ ವ್ಯಸನ-ದಂಧೆ-ಕಳ್ಳಸಾಗಣೆ ವಿರುದ್ಧದ ಜನಜಾಗೃತಿ ರಥಯಾತ್ರೆ’ ಸೋಮವಾರಪೇಟೆಗೆ ಆಗಮಿಸಿದ ಸಂದರ್ಭ ಇಲ್ಲಿನ ಜೆ.ಸಿ. ವೇದಿಕೆ ಬಳಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅವರನ್ನು ಮಾದಕ ವ್ಯಸನಿಗಳನ್ನಾಗಿ ಮಾಡಲಾಗುತ್ತಿದೆ. ಒಮ್ಮೆ ಅವರು ಈ ಚಟಕ್ಕೆ ಬಲಿಯಾದರೆ ಅದರಿಂದ ಹೊರಬರುವುದು ಕಷ್ಟಕರ.

ಇಂತಹ ವ್ಯಕ್ತಿಗಳು ಕುಟುಂಬ ಹಾಗೂ ಸಮಾಜಘಾತುಕರಾಗುತ್ತಿದ್ದಾರೆ. ಮನೆಯಲ್ಲಿ ಪೋಷಕರು ತಮ್ಮ ಮಕ್ಕಳ ಬಗ್ಗೆ, ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಜಾಗೃತಿ ವಹಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಮಾದಕ ವಸ್ತುಗಳು ದೇಶದ ಆಂತರಿಕ ಭಯೋತ್ಪಾದಕ ಇದ್ದಂತೆ.

ಬಂದೂಕು ಹಿಡಿದು, ಬಾಂಬ್ ಹಾಕಿ ಜನರ ಜೀವ ತೆಗೆಯುತ್ತಿರುವ ಭಯೋತ್ಪಾದನೆ ಒಂದೆಡೆಯಾದರೆ ಯುವ ಜನಾಂಗಕ್ಕೆ ಮಾದಕ ವಸ್ತುಗಳನ್ನು ನೀಡುವ ಮೂಲಕ ಅವರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುವುದು, ಮಾದಕ ವಸ್ತುಗಳ ಸಾಗಾಣಿಕೆಗೆ ಬಳಕೆ ಮಾಡುವ ಮೂಲಕ ಸಮಾಜದ ಸ್ವಾಸ್ಥö್ಯ ಕೆಡಿಸುವ ಯತ್ನಗಳು ನಡೆಯುತ್ತಿವೆ ಎಂದರು.

ರಾಜ್ಯದಲ್ಲಿ ಪ್ರಸಕ್ತ ವರ್ಷ ಮಾದಕ ವಸ್ತುಗಳಿಗೆ ಸಂಬAಧಿಸಿದAತೆ ೫,೯೩೦ ಪ್ರಕರಣಗಳು ದಾಖಲಾಗಿದ್ದು ರೂ. ೭೭,೯೯,೧೨,೦೯೪. ಮೌಲ್ಯದ ೬೦೭೩.೦೬೯ ಕಿ.ಗ್ರಾಂ. ಗಾಂಜಾ ಹಾಗೂ ರೂ. ೧೧೬,೦೯,೮೧,೭೧೨ ಮೌಲ್ಯದ ೧೨೭೨ ಕಿ.ಗ್ರಾಂ. ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಂಡು ೨,೮೯೮ ಮಂದಿಯನ್ನು ಬಂಧಿಸಲಾಗಿದೆ.

ಮಾದಕ ವಸ್ತು ಪ್ರಕರಣದಲ್ಲಿ ಕೊಡಗು ಜಿಲ್ಲೆಯೂ ಹೊರತಾಗಿಲ್ಲ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ೧೩೦ ಪ್ರಕರಣ ದಾಖಲಾಗಿದ್ದು, ೭೪ ಮಂದಿಯನ್ನು ಬಂಧಿಸಲಾಗಿದೆ. ರೂ. ೨೦,೭೧,೮೦೦ ಮೌಲ್ಯದ ೭೦.೯೫೨ ಕಿ.ಗ್ರಾಂ. ಗಾಂಜಾ, ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಅವರು ಸಂಬAಧಿಸಿದ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇದೇ ಸಂದರ್ಭ ಶಿಕ್ಷಕ ಸಂತೋಷ್ ಹಿರೇಮಠ್ ಅವರು ಮಾದಕ ವಸ್ತುಗಳ ವಿರುದ್ಧ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಪರಿವರ್ತನಾ ಟ್ರಸ್ಟ್ನ ಸಂದೇಶ್, ಹಿಂದೂ ಜಾಗರಣಾ ವೇದಿಕೆಯ ಪ್ರಮುಖರುಗಳಾದ ಸುಭಾಷ್ ತಿಮ್ಮಯ್ಯ, ಬೋಜೇಗೌಡ, ಉಮೇಶ್, ಬಿ.ಜೆ .ದೀಪಕ್, ಸುನೀಲ್, ದೀಪಕ್ ಕಾಗಡಿಕಟ್ಟೆ ಸೇರಿದಂತೆ ಇತರರು ಇದ್ದರು.