ಸಿದ್ದಾಪುರ, ಡಿ. ೨೧: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಟಿ.ಎನ್.ಟಿ. ಮುಕ್ತ ಕ್ಲಾಸಿಕ್ ನ್ಯಾಚುರಲ್ ದೇಹದಾರ್ಢ್ಯ ಹಾಗೂ ಪಂಚ ಕುಸ್ತಿಯ ಸ್ಪರ್ಧೆ ಯಲ್ಲಿ ಭಾಗವಹಿಸಿದ ಸಿದ್ದಾಪುರದ ಕ್ರೀಡಾಪಟು ಸುಜಯ್ ಎಸ್. ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಬೆAಗಳೂರಿನಲ್ಲಿ ನಡೆದ ಟಿ.ಎನ್.ಟಿ. ಓಪನ್ ಕ್ಲಾಸಿಕ್ ನ್ಯಾಚುರಲ್ ದೇಹದಾರ್ಢ್ಯ ಸ್ಪರ್ಧೆಯಲ್ಲಿ ತೃತೀಯ ಮತ್ತು ಟಿ.ಎನ್.ಟಿ. ಕ್ಲಾಸಿಕ್ ಓಪನ್ ಸ್ಟೇಟ್ ಲೆವಲ್ ಜೀನ್ಸ್ ಮಾಡೆಲಿಂಗ್ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದುಕೊಂಡರು. ಅಲ್ಲದೆ ಟಿ.ಎನ್.ಟಿ. ಕ್ಲಾಸಿಕ್ ಓಪನ್ ಸ್ಟೇಟ್ ಲೆವಲ್ ಪಂಚಕುಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಅAತರರಾಷ್ಟಿçÃಯ ಮಟ್ಟದ ಜಿಮ್ ಕೋಚ್ ಹಾಗೂ ತರಬೇತುದಾರರಾಗಿರುವ ಸುಜಯ್ ಬೆಂಗಳೂರಿನ ಜಿಮ್ ಪರ್ಸನಲ್ ಟ್ರೆöÊನರ್ ಹಾಗೂ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ನ್ಯಾಚುರಲ್ ಬಾಡಿ ಬಿಲ್ಡಿಂಗ್‌ಗೆ ಆದ್ಯತೆ ನೀಡುವ ಸುಜಯ್ ಯಾವುದೇ ಚುಚ್ಚುಮದ್ದು ಮತ್ತು ಪ್ರೊಟೀನ್ ಪೌಂಡರ್‌ನ್ನು ತೆಗೆದುಕೊಳ್ಳದೇ ನ್ಯಾಚುರಲ್ ಆಗಿ ದೇಹದಾರ್ಢ್ಯ ಮಾಡಲು ಜಿಮ್‌ಪಟುಗಳಿಗೆ ಸಲಹೆ ನೀಡುತ್ತಾರೆ.