ಪೊನ್ನಂಪೇಟೆಯ ನಿವಾಸಿಯಾಗಿದ್ದ ಹಾಕಿ ತಜ್ಞ, ತರಬೇತುದಾರ, ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಆದ ಪುಚ್ಚಿಮಾಡ ಹರೀಶ್ ದೇವಯ್ಯ(೭೬) ಅವರು ತಾ. ೨೧ ರಂದು ಮೈಸೂರು ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಸೇರಿದಂತೆ ಇಬ್ಬರು ಪುತ್ರಿಯರು ಓರ್ವ ಪುತ್ರನನ್ನು ಅಗಲಿದ್ದಾರೆ.

ಸ್ವತಹ ಹಾಕಿ ಪಟುವಾದ ಇವರು ಅಂದಿನ ದಿನಗಳಲ್ಲಿ ಹಲವು ತಂಡಗಳಲ್ಲಿ ಮುಂಚೂಣಿ ಆಟಗಾರರಾಗಿದ್ದರು. ನಂತರ ಪೊನ್ನಂಪೇಟೆ ಜೂನಿಯರ್ ಕಾಲೇಜ್ ಮೈದಾನದಲ್ಲಿ ಒಲಂಪಿಯನ್ ಸಿ.ಎಸ್ ಪೂಣಚ್ಚ ಸೇರಿದಂತೆ, ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ರಿಕ್ಕಿ ಗಣಪತಿ,ಉತ್ತಯ್ಯ, ಸೇರಿದಂತೆ ಹಲವು ಕ್ರೀಡಾಪಟುಗಳಿಗೆ ಮೊದಲ ಗುರುವಾಗಿ, ತರಬೇತಿದಾರರಾಗಿದ್ದರು.

ಪೊನ್ನಂಪೇಟೆಯಲ್ಲಿ ಕ್ರೀಡಾ ವಸತಿ ನಿಲಯ ಸ್ಥಾಪಿಸುವಲ್ಲಿ ಕಾರಣಕರ್ತರಾದವರಲ್ಲಿ ಇವರು ಒಬ್ಬರಾಗಿದ್ದಾರೆ.ಎರಡು ದಶಕಗಳ ಹಿಂದೆ ಪೊನ್ನಂಪೇಟೆ ಪ್ರತ್ಯೇಕ ತಾಲೂಕು ಹೋರಾಟವನ್ನು ಆರಂಭಿಸಲು ಕಾರಣಕರ್ತರಾದ ಇವರು ಅಂದಿನ ದಿನಗಳಲ್ಲಿ ಇವರ ಮನೆಯಲ್ಲೇ ಹಲವು ಬಾರಿ ಸಮಿತಿ ಸಭೆಯನ್ನು ಚೆಪ್ಪುಡೀರ ಅರುಣ್ ಮಾಚಯ್ಯ ಅವರ ನೇತೃತ್ವದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಪೊನ್ನಂಪೇಟೆಯ ನ್ಯಾಯಾಲಯ ಸ್ಥಾಪನೆಯ ಸಂದರ್ಭ ಕೂಡ ಇವರ ಶ್ರಮ ಇತ್ತು.

ಇವರು ಕೂರ್ಗ್ ಹಾಕಿ ಅಸೋಸಿಯೇಷನ್‌ನ ಕಾರ್ಯದರ್ಶಿ, ಪೊನ್ನಂಪೇಟೆ ಬಸವೇಶ್ವರ ದೇವಸ್ಥಾನದ ಅಧ್ಯಕ್ಷರಾಗಿ, ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಯಾಗಿ ಕೊಡವ ಸಮಾಜ, ಐಟಿಐ ಸಂಸ್ಥೆ ಸೇರಿ ಇನ್ನು ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲಿಸಿದ್ದರು. ಮೃತರ ಅಂತ್ಯಕ್ರಿಯೆ ತಾ. ೨೨ ರಂದು (ಇಂದು) ಮಧ್ಯಾಹ್ನ ೧.೩೦ ಗಂಟೆಗೆ ಪೊನ್ನಂಪೇಟೆಯ ಕುಟುಂಬದ ರುದ್ರಭೂಮಿಯಲ್ಲಿ ನಡೆಯಲಿದೆ.