ಅನಿಲ್ ಎಚ್.ಟಿ.
ಬಾಳೆಹೊನ್ನೂರು, ಡಿ. ೨೦ : ಸ್ಥಳೀಯವಾಗಿ ಮಾತ್ರವಲ್ಲದೇ ಜಾಗತಿಕವಾಗಿಯೂ ಭಾರತೀಯ ಕಾಫಿಗೆ ಬೇಡಿಕೆ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದ್ದು, ಈ ನಿಟ್ಟಿನಲ್ಲಿ ವಿಳಂಬರಹಿತವಾದ ಸಂಶೋಧನೆ, ಮಾರುಕಟ್ಟೆ ವಿಸ್ತರಣೆ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಭರವಸೆ ನೀಡಿದರು.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ರಾಷ್ಟಿçÃಯ ಕಾಫಿ ಸಂಶೋಧನಾ ಮಂಡಳಿಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಪ್ರಲ್ಹಾದ್ ಜೋಶಿ, ದೇಶದ ರಕ್ಷಣಾ ಪಡೆಯಂತೆಯೇ ಕಾಫಿ ಸೇರಿದಂತೆ ದೇಶದ ವಾಣಿಜ್ಯ ಬೆಳೆಗಳಿಗೆ ಆತ್ಮ ನಿರ್ಭರ್ ಯೋಜನೆಯಡಿ ಯಾರದ್ದೇ ಹಂಗಿಲ್ಲದ ಸ್ವಾವಲಂಬಿ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ. ಭಾರತದ ಕಾಫಿ ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಜನತೆ, ಉದ್ಯಮಿಗಳ ಮನಗೆದ್ದಿದೆ. ಹೀಗಿರುವಾಗ ಭವಿಷ್ಯದಲ್ಲಿಯೂ ಭಾರತದ ಕಾಫಿಗೆ ಉತ್ತಮ ಮಾರುಕಟ್ಟೆ ದೊರಕುವುದು ನಿಸ್ಸಂಶಯ ಎಂದರು.
ಕೆಲವು ವರ್ಷಗಳಿಂದ ಜಾಗತಿಕವಾಗಿ ಭಾರತವು ಶಕ್ತಿಯುತವಾಗಿ ಗುರುತಿಸಿಕೊಂಡಿದೆ ಎಂದು ಹೆಮ್ಮೆಯಿಂದ ನುಡಿದ ಸಚಿವರು, ದೇಶದ ಜಿಡಿಪಿ ಪ್ರಗತಿಯು ೬.೫ ಶೇಕಡದಿಂದ ೭ ಶೇಕಡಕ್ಕೆ ಹೆಚ್ಚಾಗಿದೆ. ೩೩೦ ಬಿಲಿಯನ್ ಡಾಲರ್ ಬಂಡಾವಳ ಹೂಡಿಕೆಯಲ್ಲಿಯೂ ಪ್ರಗತಿಯಾಗಿದೆ. ವಿದೇಶಕ್ಕೆ ಭಾರತದ ಉತ್ಪನ್ನ ಸಾಗಣೆಗಾಗಿ ದೇಶೀಯ ಬಂದರುಗಳಲ್ಲಿಯೂ ವಿಳಂಬರಹಿತವಾಗಿ `ಕ್ಲಿಯರೆನ್ಸ್’ ದೊರಕುವ ವ್ಯವಸ್ಥೆಯಾಗಿದೆ. ದೇಶೀಯ ಉತ್ಪನ್ನಗಳಿಗೆ ಮಾರುಕಟ್ಟೆಯ ಬಲವರ್ಧನೆಗಾಗಿ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ಜಾರಿಗೊಳ್ಳುತ್ತಿದೆ. ಭಾರತ ವಿಶ್ವದಲ್ಲಿಯೇ ೪ನೇ ಆರ್ಥಿಕ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮಿದೆ ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದರು.
ಇಂಧನ ಕ್ಷೇತ್ರದಲ್ಲಿ ಅಂತರರಾಜ್ಯಗಳ ನಡುವೇ ವಿದ್ಯುತ್ ಹಂಚಿಕೆ ವ್ಯವಸ್ಥೆ ಜಾರಿಯಲ್ಲಿದ್ದು ಈ ಮೂಲಕ ಒನ್ ನೇಷನ್ - ಒನ್ ಸನ್ - ಒನ್ ಗ್ರಿಡ್ ಯೋಜನೆ ಯಶಸ್ವಿಯಾಗಿ ಜಾರಿಯಾಗಿದೆ. ದೇಶೀಯವಾಗಿ ೩೩೦ ಕಂಪೆನಿಗಳು ಮೊಬೈಲ್ ಉತ್ಪಾದನಾ ಘಟಕಗಳನ್ನು ತೆರೆದಿವೆ ಎಂದರು. ಕಾಫಿ ಕೃಷಿಕರಿಗೆ ಸಂಕಷ್ಟವಾಗಿ ಪರಿಣಮಿಸಿರುವ ವನ್ಯಜೀವಿಗಳ ದಾಂಧಲೆ ನಿವಾರಣೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬಳಿ ಕಾಫಿ ಕೃಷಿಕರ ನಿಯೋಗ ಬಂದಲ್ಲಿ ಸಮಸ್ಯೆಗೆ ಸೂಕ್ತ ಪರಿಹಾರ ಸಾಧ್ಯವಿದೆ ಎಂದು ಸಚಿವರು ಸಲಹೆ ನೀಡಿದರು.ಭಾರತ ದೇಶವು ಪ್ರಸ್ತುತ ಕಾಫಿಯ ಉತ್ಪಾದನೆಯಲ್ಲಿ ಜಾಗತಿಕವಾಗಿ ೭ನೇ ಸ್ಥಾನದಲ್ಲಿದ್ದು ರಫ್ತು ಪ್ರಮಾಣದಲ್ಲಿ ೬ನೇ ಸ್ಥಾನದಲ್ಲಿದೆ. ಜಾಗತಿಕವಾಗಿ ಕಾಫಿಗೆ ಹೊಸ ಮಾರುಕಟ್ಟೆಯ ಮೂಲಕ ಮತ್ತಷ್ಟು ಬೇಡಿಕೆ ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಕಾಫಿಯಲ್ಲಿ ರೋಗನಿರೋಧಕ ತಳಿಗಳು ಹೆಚ್ಚಾಗಬೇಕು. ಮಣ್ಣಿನ ಫಲವತ್ತತೆ ನಾಶಗೊಳಿಸುವ ರಾಸಾಯನಿಕಗಳ ಬಳಕೆ ಕಡಮೆಯಾಗಿ ಸಾವಯವ ಕೃಷಿಯತ್ತ ಕೃಷಿಕರು ಗಮನ ನೀಡಬೇಕು. ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಕೊಡಗು, ಚಿಕ್ಕಮಗಳೂರಿನಂÀತಹ ಸುಂದರ ಜಿಲ್ಲೆಗಳು ಬೇರೆಲ್ಲೂ ಇಲ್ಲ. ಕಾಫಿಯಿಂದಾಗಿ ಪ್ರಕೃತಿ ಸೌಂದರ್ಯ ಹೆಚ್ಚಾಗಿರುವುದೂ ಇದಕ್ಕೆ ಕಾರಣವಾಗಿರಬಹುದು ಎಂದು ಹೆಮ್ಮೆಯಿಂದ ನುಡಿದ ಜಾರ್ಜ್, ತಾನೂ ಕೊಡಗಿನಿಂದ ಬಂದವನಾಗಿದ್ದು, ಕಾಫಿ ಬಗ್ಗೆ ಹೆಚ್ಚಿನ ಮಾಹಿತಿ ಕೊಡಗಿನಿಂದಲೇ ದೊರಕಿದೆ ಎಂದು ನುಡಿದರು.
ಉಡುಪಿ, ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರದಿಂದ ಮಲೆನಾಡು ಜಿಲ್ಲೆಗಳಿಗೆ ನೀಡಲಾಗಿರುವ ಬಿ.ಎಸ್.ಎನ್.ಎಲ್ ಟವರ್‌ಗಳಿಗೆ ಸೂಕ್ತ ರೀತಿಯಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ವಿದ್ಯುತ್ ಸಂಪರ್ಕ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕೆAದು ಸಲಹೆ ನೀಡಿದರು. ಕಾಡಾನೆ ದಾಳಿಯಿಂದ ಕಾಫಿ ಜಿಲ್ಲೆಗಳ ಬೆಳೆಗಾರರರನ್ನು ಪಾರು ಮಾಡುವುದು ಇಂದಿನ ಆದ್ಯತೆಯಾಗಿದೆ ಎಂದು ಸಂಸದರು ಹೇಳಿದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ, ಕಾಫಿ ಬೆಳೆಗಾರರು ಶ್ರೀಮಂತರು ಎಂದು ಎಲ್ಲರೂ ಹೇಳುತ್ತಾರೆ. ಇಂಥವರಿಗೆ ಈ ಬೆಳೆಗಾರರ ಸಮಸ್ಯೆಗಳ ಅರಿವಾಗುತ್ತಲೇ ಇಲ್ಲ ಎಂದು ವಿಷಾದಿಸಿದರು. ಒಂದೆಡೆ ಕಾರ್ಮಿಕರ ತೀವ್ರ ಕೊರತೆಯಿದ್ದರೆ ಮತ್ತೊಂದೆಡೆ ಇರುವ ಕಾರ್ಮಿಕರ ವೇತನವೂ ಗಗನಕ್ಕೇರಿದೆ. ಇದಕ್ಕೆ ಪರಿಹಾರವಾಗಿ ಕಾಫಿ ತೋಟಗಳಲ್ಲಿ ಯಾಂತ್ರೀಕರಣದ ಅಳವಡಿಕೆ ಸೂಕ್ತವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕಾಫಿ ಕೃಷಿಕರಿಗೆ ಸಹಾಯಧನವನ್ನು ಹೆಚ್ಚಿಸಬೇಕಾಗಿದೆ ಎಂದು ಕೋರಿದರು.
ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾತನಾಡಿ, ೨೮೦ ಎಕರೆ ವಿಸ್ತಾರದಲ್ಲಿರುವ ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಕೇಂದ್ರವು ವಿಶ್ವದಲ್ಲಿಯೇ ಕೃಷಿ ಸಂಶೋಧನೆಗೆ ಮೀಸಲಾದ ಮೂರನೇ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ೨೦೪೭ರಲ್ಲಿ ಭಾರತದ ಸ್ವಾತಂತ್ರö್ಯ ಶತಮಾನೋತ್ಸವ ಆಚರಿಸುವ ಸಂದರ್ಭ ಭಾರತದ ಕಾಫಿ ಉತ್ಪಾದನೆಯನ್ನೂ ೯ ಲಕ್ಷ ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸುವ ದೂರದೃಷ್ಟಿಯ ಗುರಿಯಿದೆ ಎಂದರು. ಭಾರತದಲ್ಲಿ ಆಂತರಿಕ ಮಾರುಕಟ್ಟೆ ಹೆಚ್ಚಿಸುವ ನಿಟ್ಟಿನಲ್ಲಿ ದೇಶದಾದ್ಯಂತ ೧೦ ಸಾವಿರ ಕಾಫಿ ಕಿಯೋಸ್ಕ್ಗಳನ್ನು ಪ್ರಾರಂಭಿಸಲಾಗುತ್ತಿದೆ. ರಾಜ್ಯದಲ್ಲಿ ೫೦೦ ಮಹಿಳೆಯರಿಗೆ ಕಾಫಿ ತಯಾರಿಕೆಯ ತರಬೇತಿ ನೀಡಿ ಕಿಯೋಸ್ಕ್ಗಳನ್ನು ನೇಮಿಸಲಾಗುತ್ತದೆ. ಪ್ರಸ್ತುತ ೧.೫೦ ಲಕ್ಷ ಮೆಟ್ರಿಕ್ ಟನ್ ಆಂತರಿಕವಾಗಿ ಬಳಕೆಯಾಗುತ್ತಿರುವ ಕಾಫಿಯನ್ನು ಶೀಘ್ರದಲ್ಲಿಯೇ ೨ ಲಕ್ಷ ಟನ್‌ಗೆ ಹೆಚ್ಚಿಸುವ ಗುರಿಯಿದೆ ಎಂದು ನುಡಿದರು.
ದೇಶದಾದ್ಯಂತ ಎಲ್ಲಿಗೇ ಹೋದರೂ ಒಂದೇ ಸ್ವಾದದ ಕಾಫಿ ದೊರಕುವಂತಹ ಸೌತ್ ಇಂಡಿಯನ್ ಫಿಲ್ಟರ್ ಕಾಫಿ ಯೋಜನೆಯೂ ಮಂಡಳಿಯ ಮುಂದಿದೆ ಎಂದು ಹೇಳಿದ ದಿನೇಶ್, ಬಾಳೆಹೊನ್ನೂರಿನ ಸಂಶೋಧನಾ ಕೇಂದ್ರದಲ್ಲಿ ರೂ.೬ ಕೋಟಿ ವೆಚ್ಚದಲ್ಲಿ ಕಾಫಿ ಕೆಫೆ ಸಂಬAಧಿತ ಡಿಪ್ಲೋಮಾ ಕೋರ್ಸ್ ಪ್ರಾರಂಭಿಸಲಾಗುತ್ತದೆ ಎಂದು ಘೋಷಿಸಿದರು. ಕೇಂದ್ರ ವಾಣಿಜ್ಯ ಇಲಾಖೆಯ ತೋಟಗಾರಿಕಾ ವಿಭಾಗದ ಪ್ರಧಾನ ಕಾರ್ಯದರ್ಶಿ ನಿತಿನ್ ಕುಮಾರ್ ಯಾದವ್, ಶೃಂಗೇರಿ ಶಾಸಕ ಟಿ.ಪಿ. ರಾಜೇಗೌಡ, ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ, ಮಾಜಿ ಸಚಿವ ಜೀವರಾಜ್, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನ್ ವೇದಿಕೆಯಲ್ಲಿದ್ದರು. ಭಾರತೀಯ ಕಾಫಿ ಮಂಡಳಿ ಕಾರ್ಯದರ್ಶಿ ಎಂ. ಕೂರ್ಮಾರಾವ್ ಸ್ವಾಗತಿಸಿದರು.
ಇದೇ ಸಂದರ್ಭ ಜೀವರಕ್ಷಕ್ ಮತ್ತು ಶತಾಬ್ದಿ ಎಂಬ ರೋಬಸ್ಟಾ ತಳಿಯ ಎರಡು ಹೊಸ ಕಾಫಿ ತಳಿಯನ್ನು ಭಾರತೀಯ ಕಾಫಿ ಮಂಡಳಿಯಿAದ ಲೋಕಾರ್ಪಣೆಗೊಳಿಸಲಾಯಿತು.
ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ಕಾಫಿ ಮಂಡಳಿ ಕೊಡಗು ಉಪನಿರ್ದೇಶಕ ಡಾ. ಚಂದ್ರಶೇಖರ್, ಡಾ. ಕೆ. ಶ್ರೀದೇನಿ, ತೋಟಗಾರಿಕಾ ಕೇಂದ್ರದ ನಿರ್ದೇಶಕ ಮುರಳೀಧರ್, ಕೂರ್ಗ್ ಕಾಫಿ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ, ನಿರ್ದೇಶಕ ಮೋಹನ್ ದಾಸ್, ಉಪಾಸಿ ಮಾಜಿ ಅಧ್ಯಕ್ಷ ವಿನೋದ್ ಶಿವಪ್ಪ ಸೇರಿದಂತೆ ಕೊಡಗು ಜಿಲ್ಲೆಯಿಂದಲೂ ಅನೇಕ ಬೆಳೆಗಾರ ಪ್ರಮುಖರು ಹಾಜರಿದ್ದರು. ಭಾರತದಾದ್ಯಂತಲಿನ ಕಾಫಿ ಬೆಳೆಗಾರ ಪ್ರದೇಶವಲ್ಲದೇ ವಿದೇಶದಿಂದಲೂ ಅನೇಕ ಕಾಫಿ ಕೃಷಿಕರು ಹಾಜರಿದ್ದುದು ವಿಶೇಷವಾಗಿತ್ತು. ಆಕಾಶವಾಣಿಯ ಹಾಸನ ನಿಲಯ ನಿರ್ದೇಶದ ವಿಜಯ್ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.
ಎರಡು ಸಭಾಂಗಣಗಳಲ್ಲಿ ಕಾಫಿಗೆ ಸಂಬAಧಿಸಿದAತೆ ವಿಚಾರಗೋಷ್ಠಿಗಳು ಆಯೋಜಿತವಾಗಿದ್ದು, ಕಿಕ್ಕಿರಿದು ಕಾಫಿ ಕೃಷಿಕರು ತಮ್ಮ ಜೀವನದ ಮುಖ್ಯ ಕೃಷಿಗೆ ಸಂಬAಧಿಸಿದ ಗೋಷ್ಠಿಗಳ ಮಾಹಿತಿಯನ್ನು ಆಲಿಸುತ್ತಿದ್ದರು.
ರಾಷ್ಟಿçÃಯ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಹಿನ್ನೆಲೆಯಲ್ಲಿ ಕಾಫಿಗೆ ಸಂಬAಧಿಸಿದAತೆ ೧೮೦ ಪ್ರದರ್ಶನ ಮಳಿಗೆಗಳು ಸಾವಿರಾರು ಕೃಷಿಕರ ಗಮನ ಸೆಳೆದವು.