ಶನಿವಾರಸಂತೆ, ಡಿ. ೨೧: ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಶಾಲನಗರ ಆಯುರ್ವೃದ್ಧಿ ಚಿಕಿತ್ಸಾಲಯ ವತಿಯಿಂದ ವಿದ್ಯಾರ್ಥಿಗಳು, ಪೋಷಕರು ಮತ್ತು ಗ್ರಾಮಸ್ಥರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಬೆಂಗಳೂರಿನ ಉದ್ಯಮಿ ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ನೀಡಿದ ಕರಾಟೆ ಸಮವಸ್ತç ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಆಯುರ್ವೃದ್ಧಿ ಚಿಕಿತ್ಸಾಲಯ ವೈದ್ಯೆ ಡಾ. ಎ.ಎಂ. ನಿಧಿ ಮಾತನಾಡಿ, ಇಂಗ್ಲೀಷ್ ಔಷಧಿ, ಆಯುರ್ವೇದ ಔಷಧಿಗೂ ವ್ಯತ್ಯಾಸವಿದೆ. ರೋಗವನ್ನು ಮೂಲದಿಂದಲೇ ಶಮನಗೊಳಿಸಲು ಆಯುರ್ವೇದದಿಂದ ಮಾತ್ರ ಸಾಧ್ಯ ಎಂದರು. ಯೋಗ ಮತ್ತು ಕರಾಟೆ ತರಬೇತಿ ಶಿಕ್ಷಕಿ ಸೀಮಾ ಮಾತನಾಡಿ, ಸದೃಢವಾದ ಆರೋಗ್ಯ ಸ್ಥಿತಿ ಹಾಗೂ ಸ್ಥಿರವಾದ ಮಾನಸಿಕ ಸ್ಥಿತಿ ಕಾಯ್ದುಕೊಳ್ಳಲು ವಿದ್ಯಾರ್ಥಿಗಳಿಗೆ ಕರಾಟೆ, ಯೋಗ, ಧ್ಯಾನಗಳು ಅನೇಕ ರೀತಿಯಲ್ಲಿ ಸಹಾಯಕವಾಗಿವೆ ಎಂಬುದನ್ನು ವಿವರವಾಗಿ ತಿಳಿಸಿದರು.

ಡಾ. ಎ.ಎಂ. ನಿಧಿ, ಸಿಬ್ಬಂದಿ ಶಿಲ್ಪಾ, ಪ್ರಿಯದರ್ಶನ್, ಡ್ಯಾನಿ ಯಲ್ ವಿದ್ಯಾರ್ಥಿಗಳ, ಪೋಷಕರ ಹಾಗೂ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು. ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಪಿಸಿಒಡಿ, ಅಸ್ತಮಾ, ಕೀಲು ನೋವು, ಥೈರಾಯ್ಡ್, ಸೋರಿಯಾಸಿಸ್, ಸ್ತಿçà ಸಂಬAಧಿ ಕಾಯಿಲೆ, ಚರ್ಮ ಸಮಸ್ಯೆ ಮಕ್ಕಳ ಕಾಯಿಲೆಗಳು, ಮಾಸಿಕ ಒತ್ತಡ, ಕೂದಲು ಉದುರುವಿಕೆ, ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸಲು ಸ್ವರ್ಣ ಪ್ರಾಶನ ಇತ್ಯಾದಿ ಕಾಯಿಲೆಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.

ಈ ಸಂದರ್ಭ ಉದ್ಯಮಿ ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಕರಾಟೆ ಸಮವಸ್ತ್ರವನ್ನು ವಿತರಿಸಿ, ಶುಭ ಹಾರೈಸಿದರು. ನಂತರ ಶಾಲಾ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ಮಾತನಾಡಿ, ವೈದ್ಯ ವೃತ್ತಿ ಕೇವಲ ಉದ್ಯೋಗವಲ್ಲ; ಅದು ಸಮಾಜದತ್ತ ಇರುವ ಜವಾಬ್ದಾರಿ ಎಂಬ ನಂಬಿಕೆಯೊAದಿಗೆ ವೈದ್ಯರು ಕಾರ್ಯನಿರ್ವಹಿಸುತ್ತಾರೆ. ಹಣಕ್ಕಿಂತ ಮಾನವೀಯ ಮೌಲ್ಯಗಳು ಮೇಲುಗೈಯಾಗಿ ಕಾಣುವ ವೈದ್ಯರಾದ ಡಾ. ನಿಧಿ ಅವರ ಸೇವೆ ಸಮಾಜಕ್ಕೆ ಮಾದರಿ. ಅವರ ಸೇವಾ ಮನೋಭಾವ ಯುವ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಶ್ಲಾಘಿಸಿದರು. ಗ್ರಾಮದ ಪೋಷಕರು ಹಾಗೂ ಗ್ರಾಮಸ್ಥರು ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಕಾರ್ಯಕ್ರಮದ ಸದುಪಯೋಗಪಡಿಸಿಕೊಂಡರು.