ಮಡಿಕೇರಿ, ಡಿ. ೨೦: ಸೇವಾ ಸಂಸ್ಥೆಯಾಗಿರುವ ರೌಂಡ್ ಟೇಬಲ್ ಇಂಡಿಯಾ ಸಂಸ್ಥೆಯ ಕೊಡಗು ಘಟಕದ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ಬಿಟ್ಟಂಗಾಲದ ಅಂಬಟ್ಟಿ ಗ್ರೀನ್ಸ್ನಲ್ಲಿ ಈ ಸಂಸ್ಥೆಯ ಉದ್ಘಾಟನಾ ಸಮಾರಂಭ ನಡೆದಿದ್ದು, ಅಂತರರಾಷ್ಟಿçÃಯ ಸೇವಾ ಸಂಸ್ಥೆಯೂ ಆಗಿರುವ ಇದರ ಕೊಡಗು ಘಟಕ ಇದೀಗ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ.
೧೬ ಜನರನ್ನು ಒಳಗೊಂಡು ಪದಾಧಿಕಾರಿಗಳು ನೇಮಕಗೊಂಡಿದ್ದು, ನೂತನ ಅಧ್ಯಕ್ಷರಾಗಿ ತೀತಮಾಡ ಆಶಿಕ್ ಬೋಪಣ್ಣ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮುಕ್ಕಾಟಿರ ಡ್ಯಾನಿ ಕಾವೇರಪ್ಪ, ಕಾರ್ಯದರ್ಶಿಯಾಗಿ ಮಾಚಿಮಾಡ ಮಾಚಯ್ಯ ತಿಮ್ಮಯ್ಯ, ಖಜಾಂಚಿಯಾಗಿ ಮಲಚೀರ ಕಣ್ಮ ಕಾಳಯ್ಯ ಹಾಗೂ ಇತರ ೧೧ ಮಂದಿ ನಿರ್ದೇಶಕರುಗಳಾಗಿ ನೇಮಕಗೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಕಂಜಿತAಡ ಸುನಿಲ್ ಮುದ್ದಯ್ಯ, ಡಾ. ಮುಕ್ಕಾಟಿರ ಅಮೃತ್ ನಾಣಯ್ಯ, ಡಾ. ಮಾತಂಡ ಆರ್. ಅಯ್ಯಪ್ಪ ಅವರುಗಳು ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.
ರೌಂಡ್ ಟೇಬಲ್ ಕೊಡಗು ಘಟಕ ಸಾಮಾಜಿಕ ಸೇವಾ ಕಾರ್ಯಗಳತ್ತ ಗಮನ ಹರಿಸಲಿದೆ. ಅಂತರರಾಷ್ಟಿçÃಯ, ರಾಷ್ಟಿçÃಯಮಟ್ಟದಲ್ಲಿ ಹಲವು ಘಟಕಗಳಿದ್ದು, ಸಾಮಾಜಿಕ ಕಳಕಳಿ ಸಂಸ್ಥೆಯ ಉದ್ದೇಶವಾಗಿದೆ. ವಿವಿಧ ಸೇವಾ ಕಾರ್ಯದೊಂದಿಗೆ ನಾಯಕತ್ವ ಬೆಳವಣಿಗೆ, ಸ್ನೇಹಪರತೆಯಂತಹ ಕೆಲಸಗಳನ್ನು ನಿರ್ವಹಿಸಲಿರುವುದಾಗಿ ನೂತನ ಅಧ್ಯಕ್ಷ ತೀತಮಾಡ ಆಶಿಕ್ ಬೋಪಣ್ಣ ತಿಳಿಸಿದ್ದಾರೆ.