೪ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈಪ್ಲೈಯರ್ಸ್ ಕಪ್-೨೦೨೫ರ ಮೊದಲ ದಿನದ ಪಂದ್ಯಾವಳಿಯಲ್ಲಿ ಒಟ್ಟು ನಾಲ್ಕು ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ದ. ಕೊಡಗಿನ ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಐನ್‌ಮನೆ ಹೊಂದಿರುವ ಕೊಡವ ಕುಟುಂಬ ತಂಡ ಗಳಿಗಾಗಿ ಆಯೋಜಿಸಲಾಗಿರುವ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನಲ್ಲಿ ಅಪ್ಪಂಡೇರAಡ, ತೀತಿಮಾಡ, ಕೇಳಪಂಡ ಮತ್ತು ಕುಪ್ಪಂಡ ತಂಡಗಳು ಮುನ್ನಡೆ ಸಾಧಿಸಿದವು.

ಮೊದಲ ಪಂದ್ಯದಲ್ಲಿ ಅಪ್ಪಂಡೇರAಡ ತಂಡ ಮುರುವಂಡ ತಂಡವನ್ನು ೨-೦ ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರರಾದ ಚೇತನ್ ೧೩ನೇ ನಿಮಿಷದಲ್ಲಿ ಆರ್ಯನ್ ೩೪ನೇ ನಿಮಿಷದಲ್ಲಿ ಗೋಲು ಬಾರಿಸಿದರು. ೨ನೇ ಪಂದ್ಯದಲ್ಲಿ ತೀತಿಮಾಡ ತಂಡವು ಕಂಜಿತAಡ ತಂಡವನ್ನು ಟೈಬ್ರೇಕರ್‌ನಲ್ಲಿ ಒಟ್ಟು ೧೪-೧೩ ಗೋಲುಗಳಿಂದ ಸೋಲಿಸಿತು. ಪಂದ್ಯದ ದ್ವಿತೀಯಾರ್ಧ ಪೂರ್ಣಗೊಳ್ಳುವಾಗ ಉಭಯ ತಂಡಗಳು ಎರಡು ಗೋಲಿನ ಸಮಬಲ ಸಾಧಿಸಿತು. ಈ ಹಿನ್ನೆಲೆಯಲ್ಲಿ ಟ್ರೈಬ್ರೇಕರ್ ಅಳವಡಿಸಿ ಪಂದ್ಯದ ವಿಜಯವನ್ನು ನಿರ್ಣಯಿಸಬೇಕಾಯಿತು. ವಿಜೇತ ತಂಡದ ಪರ ೮ನೇ ಮತ್ತು ೧೮ನೇ ನಿಮಿಷದಲ್ಲಿ ಯಶಸ್ ಗೋಲು ಬಾರಿಸಿದರೆ, ಕಂಜಿತAಡ ತಂಡದ ಪರವಾಗಿ ಅತಿಥಿ ಆಟಗಾರ ಕುಪ್ಪಂಡ ದಿವಾನ್ ೩೪ನೇ ಮತ್ತು ೪೦ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಬಳಿಕ ನಡೆದ ಟೈಬ್ರೇಕರ್‌ನಲ್ಲಿ ವಿಜೇತ ತಂಡದ ಪರವಾಗಿ ೧೪ ಗೋಲು ದಾಖಲಾದರೆ, ಪರಾಜಿತ ತಂಡದ ಪರವಾಗಿ ೧೩ ಗೋಲು ದಾಖಲಾಯಿತು. ತೀತಿಮಾಡ ತಂಡದ ಪರವಾಗಿ ಅಂತರರಾಷ್ಟಿçÃಯ ಆಟಗಾರ ಮೇಕೇರಿರ ನಿಕ್ಕಿನ್ ತಿಮ್ಮಯ್ಯ ಆಡಿ ಗಮನ ಸೆಳೆದರು.

೩ನೇ ಪಂದ್ಯದಲ್ಲಿ ಅಮ್ಮಣಿಚಂಡ ತಂಡವು ಪಂದ್ಯಾವಳಿಗೆ ಗೈರು ಹಾಜರಾದ ಕಾರಣ ಕೇಳಪಂಡ ತಂಡ ವಾಕ್ ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶಿಸಿತು. ದಿನದ ಕೊನೆಯ ಪಂದ್ಯದಲ್ಲಿ ಕುಪ್ಪಂಡ ತಂಡವು ಕೋಲತಂಡ ತಂಡವನ್ನು ೫-೦ ಗೋಲುಗಳಿಂದ ಪರಾಭವಗೊಳಿಸಿ ಮುನ್ನಡೆ ಸಾಧಿಸಿತು. ಕುಪ್ಪಂಡ ತಂಡದ ಪರವಾಗಿ ಅತಿಥಿ ಆಟಗಾರ ಪ್ರತೀಕ್ ೪ನೇ ನಿಮಿಷದಲ್ಲಿ, ಮತ್ತೋರ್ವ ಅತಿಥಿ ಆಟಗಾರ ಅಪ್ಪಚೆಟ್ಟೋಳಂಡ ಅಯ್ಯಪ್ಪ ೨೦ನೇ, ೨೫ನೇ, ೨೯ನೇ ನಿಮಿಷದಲ್ಲಿ ಮತ್ತು ಭವೀನ್ ಕುಶಾಲಪ್ಪ ೨೩ನೇ ನಿಮಿಷದಲ್ಲಿ ಗೋಲು ದಾಖಲಿಸಿ ಅಂತರ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಪಂದ್ಯಾವಳಿಯ ನಿರ್ದೇಶಕರಾದ ಕುಪ್ಪಂಡ ದಿಲನ್ ಬೋಪಣ್ಣ ಅವರ ನೇತೃತ್ವದಲ್ಲಿ ಕಳ್ಳಿಚಂಡ ಗೌತಮ್, ಕರವಂಡ ಅಪ್ಪಣ್ಣ, ಪಟ್ರಪಂಡ ಮ್ಯಾಂಡಿ ಮಂದಣ್ಣ, ಬೊಳ್ಳಚಂಡ ನಾಣಯ್ಯ ಹಾಗು ಮೂಕಚಂಡ ನಿರನ್ ನಾಚಪ್ಪ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು