ಮಡಿಕೇರಿ, ಡಿ. ೨೧: ಕ್ರೀಡೆಯಲ್ಲಿನ ಸಾಧನೆಗಾಗಿ ಕೊಡಗು ಜಿಲ್ಲೆಯ ಮೂವರು ಕ್ರೀಡಾಪಟುಗಳು ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ (ಕೆಓಎ) ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಾಲಿ ಕ್ರೀಡಾಪಟು ಉದಯೋನ್ಮುಖ ಕ್ರೀಡಾಪಟು ಬೊಳ್ಳಂಡ ಉನ್ನತಿ ಅಯ್ಯಪ್ಪ ಅವರು ಅಥ್ಲೆಟಿಕ್ ವಿಭಾಗದಲ್ಲಿ ೨೦೨೪-೨೫ ರ ಸಾಲಿನಲ್ಲಿ ತೋರಿರುವ ಕ್ರೀಡಾ ಸಾಧನೆಗಾಗಿ ಪ್ರಶಸ್ತಿ ಗಳಿಸಿದ್ದಾರೆ. ಇವರೊಂದಿಗೆ ಕ್ರೀಡೆಯಲ್ಲಿ ಮಾಡಿರುವ ಜೀವಮಾನ ಸಾಧನೆಗಾಗಿ ಹಾಕಿಪಟು ವಿ.ಎಸ್. ವಿನಯ್ ಹಾಗೂ ಜೀವಮಾನ ಸಾಧನೆಗಾಗಿ ಬಾಸ್ಕೆಟ್‌ಬಾಲ್ ಕ್ರೀಡಾಪಟು ಐಚಂಡ ಜರೀನ್ ಅಯ್ಯಮ್ಮ (ತಾಮನೆ : ಪುಚ್ಚಿಮಂಡ) ಅವರುಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬೆAಗಳೂರಿನ ರಾಜಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರುಗಳು ಪ್ರಶಸ್ತಿ ಪ್ರದಾನ ಮಾಡಿದರು. ಒಲಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಮತ್ತಿತರ ಪ್ರಮುಖರು ಸಮಾರಂಭದಲ್ಲಿ ಹಾಜರಿದ್ದರು.