ಮಡಿಕೇರಿ, ಡಿ. ೨೨: ಅಂಡರ್ ೧೪ ಕೊಡಗು ಜಿಲ್ಲಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ತಾ.೨೪ ರಂದು ಮಡಿಕೇರಿಯ ಕೊಡಗು ವಿದ್ಯಾಲಯದಲ್ಲಿ ನಡೆಯಲಿದೆ. ಕೆ.ಎಸ್.ಸಿ.ಎ ಮಂಗಳೂರು ವಲಯದಿಂದ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ೨೦೧೧ ಸೆಪ್ಟೆಂಬರ್ ೧ ರಂದು ಹಾಗೂ ನಂತರದಲ್ಲಿ ಜನಿಸಿರುವ, ೧೨ ವರ್ಷ ಮೇಲ್ಪಟ್ಟ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಅಂದು ಬೆಳಿಗ್ಗೆ ವೈಟ್ ಜರ್ಸಿ, ಶೂಸ್ನೊಂದಿಗೆ ಜನನ ಪ್ರಮಾಣ ಪತ್ರದೊಂದಿಗೆ ಬೆ.೮ ಗಂಟೆಗೆ ಸ್ಥಳದಲ್ಲಿ ಹಾಜರಿರಬೇಕೆಂದು ಕೆ.ಎಸ್.ಸಿ.ಎ ಮಂಗಳೂರು ವಲಯ ಸಂಚಾಲಕ ಶೇಖರ್ ಶೆಟ್ಟಿ ಅವರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗೆ ದಾಮೋದರ್ ಗೌಡ, ಮೊ: ೯೯೪೫೨೭೩೬೮೮ ಅವರನ್ನು ಸಂಪರ್ಕಿಸಬಹುದಾಗಿದೆ.