ಮಡಿಕೇರಿ, ಡಿ. ೨೧: ರಾಷ್ಟçದ ನಾಗರಿಕ ನೋಂದಣಿ ಜನನ ಮತ್ತು ಮರಣ ಅಧಿನಿಯಮ ೧೯೬೦ ರನ್ವಯ ಕರ್ನಾಟಕ ಜನನ ಮತ್ತು ಮರಣ ನೋಂದಣಿ ೧೯೭೦ ಮತ್ತು ಪುನರ್ ರಚಿತ ಕರ್ನಾಟಕ ಜನನ ಮರಣ ನೋಂದಣಿ ಕಾಯ್ದೆ ನಿಯಮ ೧೯೯೦ ರ ರನ್ವಯ ಜನನ ಮತ್ತು ಮರಣ ನೋಂದಣಿ ಕಡ್ಡಾಯವಾಗಿದ್ದು, ಪ್ರಸ್ತುತ ಜನನ ಮತ್ತು ಮರಣ ನೋಂದಣಿಯನ್ನು ೨೦೧೫ ರ ಏಪ್ರಿಲ್ ೧ ರಿಂದ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಜನ್ಮ ತಂತ್ರಾAಶದ ಮೂಲಕ ಆನ್‌ಲೈನ್ ನೋಂದಣಿಯನ್ನು ನಿರ್ವಹಿಸಲಾಗುತ್ತಿದ್ದು, ಅದರಂತೆ ಜನನ ಮರಣ ನೋಂದಣಿ (ತಿದ್ದುಪಡಿ-೨೦೨೩) ಅಧಿನಿಯಮ ೧೯೬೦, ಕರ್ನಾಟಕ ಜನನ ಮರಣ ನೋಂದಣಿ (ತಿದ್ದುಪಡಿ ೨೦೨೪) ರಂತೆ ನಿಯಮಗಳಲ್ಲಿ ಕೆಲವು ಮಾರ್ಪಾಡಾಗಿದ್ದು, ಅದರಂತೆ ನಿಯಮಗಳನ್ನು ಪಾಲಿಸಬೇಕಾಗಿ ಕೋರಿದೆ.

ಜನನ ಮರಣ ನೋಂದಣಿಯಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಪ್ರಮುಖ ಅಂಶಗಳು: ಜನನ ಪ್ರಮಾಣ ಪತ್ರಕ್ಕೆ ಸಂಬAಧಿಸಿದAತೆ ನಮೂನೆ-೧ ರ ಕಾಲಂ ೪ ಮತ್ತು ೫ ರಲ್ಲಿ ತಂದೆ ತಾಯಿಗಳ ಆಧಾರ್ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸ ನಮೂದಿಸುವುದು. ಮರಣ ಪ್ರಮಾಣ ಪತ್ರಕ್ಕೆ ಸಂಬAಧಿಸಿದAತೆ ನಮೂನೆ-೨ ರಲ್ಲಿ ಕಾಲಂ ೬ ರಲ್ಲಿ ಆಧಾರ್ ಸಂಖ್ಯೆ, ಜನನದ ದಿನಾಂಕ ವಯಸ್ಸು ಲಭ್ಯವಿಲ್ಲದಿದ್ದಲ್ಲಿ ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸ ನಮೂದಿಸುವುದು. ಎಲ್ಲಾ ಸರ್ಕಾರಿ ಆಸ್ಪತ್ರೆ/ಖಾಸಗಿ ಆಸ್ಪತ್ರೆ ಹಾಗೂ ಮನೆಯಲ್ಲಿ ಸಂಭವಿಸುವ ಜನನ/ ಮರಣ ಪ್ರಮಾಣ ಪತ್ರಗಳನ್ನು ೨೧ ದಿನಗಳ ಒಳಗಾಗಿ ವಿತರಿಸುವಂತೆ ಕುಶಾಲನಗರ ಪುರಸಭೆ ಜನನ/ ಮರಣ ನೊಂದಾಣಾಧಿಕಾರಿ ತಿಳಿಸಿದ್ದಾರೆ.