ಶಿವಮೊಗ್ಗ, ಡಿ. ೨೩: ಶಿವಮೊಗ್ಗದ ಜೋಗ್ ಫಾಲ್ಸ್ ಬಳಿಯ ಅನಧಿಕೃತ ಹೋಮ್‌ಸ್ಟೇಯೊಂದರಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಅತ್ಯಾಚಾರ ಎಸಗಿದ ವ್ಯಕ್ತಿ ಸೇರಿದಂತೆ ಅನಧಿಕೃತ ಹೋಮ್‌ಸ್ಟೇಯ ಮಾಲೀಕ ಹಾಗೂ ಅಲ್ಲಿನ ಉದ್ಯೋಗಿಗೆ ೨೦ ವರ್ಷ ಜೈಲು ಶಿಕ್ಷೆ ನೀಡಿ ಶಿವಮೊಗ್ಗ ನ್ಯಾಯಾಲಯವು ಆದೇಶಿಸಿದೆ.

ಕೃತ್ಯವು ೨೦೨೩ರಲ್ಲಿ ನಡೆದಿದ್ದು, ಅತ್ಯಾಚಾರ ಮಾಡಿದ ಸಾಗರ ತಾಲೂಕಿನ ಅರುಣ್ ಮಹಾಲೆ(೨೪)ಗೆ ೨೦ ವರ್ಷ ಜೈಲು ಹಾಗೂ ರೂ.೭೧,೦೦೦ ದಂಡ ವಿಧಿಸಿದ್ದಲ್ಲದೆ ಕೃತ್ಯ ನಡೆದ ಯಾತ್ರಿ ನಿವಾಸ್ ಹೆಸರಿನ ಅನಧಿಕೃತ ಹೋಮ್‌ಸ್ಟೇ ಮಾಲೀಕ ರಾಜಕುಮಾರ್(೫೮) ಹಾಗೂ ಉದ್ಯೋಗಿ ಬಾಲಚಂದ್ರ ದಾಮೋದರ್ ಮಾಸ್ತೆ ಅವರುಗಳಿಬ್ಬರಿಗೆ ತಲಾ ರೂ.೧೦,೦೦೦ ದಂಡ ಹಾಗೂ ೨೦ ವರ್ಷ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗ ನ್ಯಾಯಾಲಯವು ಆದೇಶಿಸಿದೆ. ಸಂತ್ರಸ್ತೆ ೨೦೨೩ರಲ್ಲಿ ೧೬ ವರ್ಷ ವಯಸ್ಸಿನವಳಾಗಿದ್ದು, ಮೂವರ ವಿರುದ್ಧವೂ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆದ ಬಳಿಕ ತೀವ್ರ ಸ್ವರೂಪದ ಶಿಕ್ಷೆ ವಿಧಿಸಲಾಗಿದೆ.

ಅತ್ಯಾಚಾರ ಎಸಗಿದ ಅರುಣ್ ಹಾಗೂ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದು ಬಾಲಕಿಯನ್ನು ಮದುವೆಯಾಗುವುದಾಗಿ ಅರುಣ್ ಮಾತು ಕೊಟ್ಟಿದ್ದ. ನಂತರದಲ್ಲಿ ಇಬ್ಬರ ಜಾತಿ ಬೇರೆಯಾಗಿದ್ದರಿಂದ ಮದುವೆ ಆಗಲು ಸಾಧ್ಯವಿಲ್ಲ ಎಂದೂ ಅರುಣ್ ಹೇಳಿದ್ದ. ಅದಾಗ್ಯೂ ೨೦೨೩ರಲ್ಲಿ ಬಾಲಕಿ ಕೆಲಸಕ್ಕೆ ತೆರಳುತ್ತಿರುವಾಗ ಅರುಣ್ ತನ್ನ ವಾಹನವನ್ನು ಅವಳ ಬಳಿ ನಿಲ್ಲಿಸಿ ‘ನೀನು ಇಲ್ಲದೆ ನಾನು ಬದಕಲು ಸಾಧ್ಯವಿಲ್ಲ’ ಎಂಬುದಾಗಿ ಹೇಳಿ ತನ್ನ ವಾಹನದಲ್ಲಿ ಯಾತ್ರಿ ನಿವಾಸ ಹೋಮ್‌ಸ್ಟೇಗೆ ಕರೆದೊಯ್ದಿದ್ದಾನೆ. ಇಲ್ಲಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಇದೇ ಪ್ರಕ್ರಿಯೆಯನ್ನು ಹಲವು ದಿನಗಳ ಅಂತರದಲ್ಲಿ ೩ ಬಾರಿ ಮಾಡಿದ್ದಾನೆ ಎಂಬುದಾಗಿ ಆರೋಪಿಸಿದ ಬಾಲಕಿ, ಮದುವೆ ಆಗುವ ಮಾತು ನೀಡಿ ದೈಹಿಕವಾಗಿ ಮಾತ್ರ ತನ್ನನ್ನು ಬಳಸಿದ್ದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದು. ಪೋಕ್ಸೋ ಕಾಯ್ದೆಯಡಿ ಅರುಣ್ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ನ್ಯಾಯಾಲಯದಲ್ಲಿ ವಿಚಾರಣೆ ನಡೆದ ಬಳಿಕ ತೀರ್ಪು ಇದೀಗ ನೀಡಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವÀ ಶಿವಮೊಗ್ಗ ಎಸ್.ಪಿ ಮಿಥುನ್ ಕುಮಾರ್ ಜಿ.ಕೆ, ನ್ಯಾಯಾಲಯದ ತೀರ್ಪು ಹೋಮ್‌ಸ್ಟೇ, ರೆಸಾರ್ಟ್ ಮಾಲೀಕರಿಗೆ ಎಚ್ಚರಿಕೆಯ ಸಂದೇಶ ನೀಡುತ್ತದೆ. ಯಾತ್ರಿ ನಿವಾಸ್ ಹೋಮ್‌ಸ್ಟೇ ಮೊದಲೇ ಅನಧಿಕೃತವಾಗಿದ್ದು, ಇಲ್ಲಿ ತಂಗಲು ಬಂದವರ ಗುರುತಿನ ಚೀಟಿಯನ್ನು ಪರಿಶೀಲಿಸದೇ ಅವರುಗಳಿಗೆ ವಾಸ್ತವಕ್ಕೆ ಕೊಠಡಿ ನೀಡಲಾಗಿದೆ. ಗುರುತಿನ ಚೀಟಿ ಪರಿಶೀಲಿಸಿದ್ದೇ ಆಗಿದ್ದಲ್ಲಿ ಬಾಲಕಿಯು ಅಪ್ರಾಪ್ತೆ ಎಂಬುದಾಗಿ ತಿಳಿಯುತ್ತಿತ್ತು. ಮಾಲೀಕರ ನಿರ್ಲಕ್ಷತನದಿಂದಾಗಿ ಅವರಿಗೂ ಶಿಕ್ಷೆ ವಿಧಿಸಲಾಗಿದೆ ಎಂದಿದ್ದಾರೆ.