ಮಡಿಕೇರಿ, ಡಿ. ೨೩: ಜಮ್ಮಾ ಬಾಣೆ ಸಮಸ್ಯೆಗೆ ಸಂಬAಧಿಸಿದAತೆ ತಿದ್ದುಪಡಿ ವಿಧೇಯಕ ಹೊರತರಲು ಕಾರಣಕರ್ತರಾಗಿರುವ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಇಂದು ಯುಕೋ ಸಂಘಟನೆ, ಮೂರ್ನಾಡು ಕೊಡವ ಸಮಾಜದ ವತಿಯಿಂದ ಭೇಟಿಯಾಗಿ ಗೌರವ ಸಲ್ಲಿಸಲಾಯಿತು.

ನೆಲ್ಲಿಹುದಿಕೇರಿ ನಾಡ್ ಎಸ್. ಕಟ್ಟೆಮಾಡು ಮಂದ್ ಸಮಿತಿಯವರೂ ಅಭಿನಂದಿಸಿದರು. ಅಭಿನಂದನೆ ಸಲ್ಲಿಸಿ ಮಾತನಾಡಿದ ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಸುಮಾರು ೭ ದಶಕಗಳಿಂದ ಜೀವಂತವಾಗಿರುವ ಕೊಡಗಿನ ಈ ಸಮಸ್ಯೆಯು ಜಮ್ಮಾ ಹಿಡುವಳಿದಾರರ ಜೀವ ಹಿಂಡಿತ್ತು, ಕೊಡವರಿಗೆ ಜಮ್ಮಾ ಯಾರೂ ನೀಡಿದ ಜಾಗವಲ್ಲ, ಕೊಡವರ ಜಾಗಕ್ಕೆ ಭೂದಾಖಲಾತಿ ವ್ಯವಸ್ಥೆ ಜಾರಿಗೆ ಬಂದಾಗ ಜಮ್ಮಾ ಎಂದು ವರ್ಗೀಕರಣ ಮಾಡಲಾಯಿತಲ್ಲದೆ, ರಾಜರಾಗಲಿ, ಬ್ರಿಟಿಷರು ನೀಡಿರುವ ಬಳುವಳಿ ಆಸ್ತೆಯಲ್ಲ. ೧೯೫೬ರ ವರೆಗೆ ಕೂರ್ಗ್ ಲ್ಯಾಂಡ್ ರೆವೆನ್ಯೂ ಆಕ್ಟ್ ಜಾರಿಯಲ್ಲಿತ್ತು, ಆನಂತರ ಕೊಡಗು ಕರ್ನಾಟಕದೊಂದಿಗೆ ವಿಲೀನವಾದನಂತರ ಕೂರ್ಗ್ ಲ್ಯಾಂಡ್ ರೆವೆನ್ಯೂ ಆಕ್ಟ್ ರದ್ದುಗೊಂಡು ಕರ್ನಾಟಕ ಲ್ಯಾಂಡ್ ರೆವೆನ್ಯೂ ಆಕ್ಟ್ ಜಾರಿಯಾದಾಗ, ಸಮಸ್ಯೆಗೆ ಕಾರಣವಾಯಿತು. ಅಲ್ಲಿಂದ ಇಲ್ಲಿಯವರೆಗೆ ಸಮಸ್ಯೆ ಜೀವಂತವಾಗಿಯೇ ಉಳಿದುಕೊಂಡು ಬಂದಿದೆ. ಇದಕ್ಕೆ ಕೆಲವು ತಾಂತ್ರಿಕವಾದ ಕಾರಣಗಳೂ ಇರುವುದರಿಂದ ಹಾಗೂ ಶಾಸಕಾಂಗ ಮತ್ತು ನ್ಯಾಯಾಂಗ ಮತ್ತು ಕಾರ್ಯಾಂಗದ ಸಮನ್ವಯತೆಯ ಕೊರತೆಯ ಕಾರಣದಿಂದ ಎಷ್ಟೇ ಪ್ರಯತ್ನಿಸಿದರೂ ಇದು ಗೊಂದಲಮಯವಾಗಿಯೇ ಮುಂದುವರಿದುಕೊAಡು ಬಂದಿದ್ದು ಪರಿಹಾರ ಕಠಿಣ ಸವಾಲಾಗಿತ್ತು. ಶಾಸಕ ಪೊನ್ನಣ್ಣನವರ, ಕಾನೂನಿನ ಪರಿಣತೆ, ಸಂವಿಧಾನ ಹಾಗೂ ಶಾಸಕಾಂಗದ ಕುರಿತು ಇರುವ ಜ್ಞಾನ, ಮತ್ತು ಇಚ್ಛಾಶಕ್ತಿ ಹಾಗೂ ಬದ್ಧತೆಯ ಪರಿಣಾಮ ತಿದ್ದುಪಡಿ ಮಸೂದೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಂಡಿಸಿ ಸದನದ ಬೆಂಬಲ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುಕೊ ಸದಸ್ಯರಾದ ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ, ಅಜ್ಜಿನಿಕಂಡ ತಿಮ್ಮಯ್ಯ. ತೀತಿಮಾಡ ಬೋಸ್ ಅಯ್ಯಪ್ಪ, ಬಾದುಮಂಡ ವಿಷ್ಣು ಕಾರ್ಯಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಚೊಟ್ಚೆಯಂಡ ಸಂಜು ಕಾವೇರಪ್ಪ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ, ನಿರ್ದೇಶಕರಾದ ಚಂಗAಡ ಸೂರಜ್, ಅಮ್ಮಾಟಂಡ ದೇವಯ್ಯ, ಸಮಾಜ ಸೇವಕ ಪಾಲೇಂಗಡ ಅಮಿತ್, ಕಾಂಗ್ರೇಸ್ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮೀದೇರಿರ ನವೀನ್, ಮಂದ್ ಸಮಿತಿಯ ಚಂಗಣಮಕ್ಕಡ ವಿನು ಅಪ್ಪಯ್ಯ, ನಂದೇಟಿರ ನಿಶು ನಂಜಪ್ಪ, ಜೋಯ್ಯಪ್ಪ, ಕಾಶಿ ಕುಶಾಲಪ್ಪ, ಮತ್ತಿತರರು ಉಪಸ್ಥಿತರಿದ್ದರು.