ಸುAಟಿಕೊಪ್ಪ, ಡಿ.೨೩ : ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಸುಂಟಿಕೊಪ್ಪದ ಇಮ್ಮಾನುವೆಲ್ ದೇವಾಲಯದಲ್ಲಿ ಕ್ರಿಸ್ಮಸ್ ಆಚರಣೆಯ ಅಂಗವಾಗಿ ಕೊಡಗು ವಲಯದ ವಿವಿಧ ದೇವಾಲಯಗಳಿಂದ ಮಹಿಳಾ ಕ್ರಿಸ್ಮಸ್ ಆಚರಿಸಲಾಯಿತು.

ಸೋಮವಾರಪೇಟೆ, ಕುಶಾಲನಗರ, ಸುಂಟಿಕೊಪ್ಪ, ಮಡಿಕೇರಿ, ಆನಂದಪುರ, ಪಾಲಿಬೆಟ್ಟ ದೇವಾಲಂiÀiಗಳಲ್ಲಿರುವ ಮಹಿಳೆಯರು ಮತ್ತು ಯುವತಿಯರು ಸುಂಟಿಕೊಪ್ಪದ ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಇಮ್ಮಾನುವೆಲ್ ದೇವಾಲಯದ ಆವರಣದಲ್ಲಿ ಅಯೋಜಿಸಲಾಗಿದ್ದ ಮಹಿಳಾ ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಕೊಡಗು ವಲಯದ ವಿವಿಧ ದೇವಾಲಯಗಳ ಮಹಿಳೆಯರು ಯುವತಿಯರು ಪ್ರಭು ಕ್ರಿಸ್ತರ ಜನನದ ಸಂದೇಶದ ಗಾಯನ ಹಾಗೂ ರೂಪಕಗಳೊಂದಿಗೆ ಕ್ರಿಸ್ತಜಯಂತಿಯ ಸಂದೇಶವನ್ನು ಸಾರಿದರು. ಕ್ರಿಸ್ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಚರ್ಚ್ ಆಫ್ ಸೌತ್ ಇಂಡಿಯಾದ ದಕ್ಷಿಣಪ್ರಾಂತ್ಯದ ಬಿಷೋಪ್ ಹೇಮಚಂದ್ರ ಅವರ ಪತ್ನಿ ಮಂಗಳೂರು ಪ್ರಾಂತಿಯ ಮಹಿಳಾ ಅಧ್ಯಕ್ಷೆ ಬಾಲಭಾರತಿ ದೇವಾಲಯದಲ್ಲಿ ನೆರೆದಿದ್ದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳೆಯರು ಒಂದಾಗಿ ಸಮಾರಂಭವನ್ನು ಅಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದರಿಂದ ಮಹಿಳೆಯರಲ್ಲಿರುವ ಪ್ರತಿಭೆಗಳನ್ನು ಹೊರ ತರಲು ವೇದಿಕೆಗಳನ್ನು ಒದಗಿಸಿರುವುದು ಆಶಾದಾಯಕ ವಿಚಾರವಾಗಿದೆ. ಗ್ರಾಮೀಣ ಪ್ರದೇಶದ ಪ್ರತಿಭೆಗಳು ಹೊರ ಬರಲು ಮತ್ತು ಬಲಿಷ್ಠವಾಗಿ ಸಂಘಟಿತಗೊಳ್ಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಮಾರಂಭದಲ್ಲಿ ಮಡಿಕೇರಿ ಶಾಂತಿ ದೇವಾಲಯದ ಧರ್ಮಗುರು ಮಧುಕಿರಣ್, ಕುಶಾಲನಗgದ ಮೆಡಕ್ ದೇವಾಲಯದ ಧರ್ಮಗುರು ಶ್ಯಾಮ್‌ವೆಲ್ ಮನೋಜ್ ಕುಮಾರ್, ಸೋಮವಾರಪೇಟೆ ಸಂತ ಜಾನ್ ದೇವಾಲಯದ ಧರ್ಮಗುರು ಪ್ರಿಯದರ್ಶಿನಿ, ಮಂಗಳೂರು ಪ್ರಾಂತಿಯ ಮಹಿಳಾ ಕಾರ್ಯದರ್ಶಿ ಸುಲೋಚನ ನಿರಂಜನ್, ಮಹಿಳಾ ವಲಯಾಧ್ಯಕ್ಷೆ ಅಕ್ಷಜೈಸನ್, ಸುಂಟಿಕೊಪ್ಪ ಇಮ್ಮಾನುವೆಲ್ ದೇವಾಲಯದ ಧರ್ಮಗುರು ಹಾಗೂ ವಲಯ ಅಧ್ಯಕ್ಷ ಜೈಸನ್ ಗೌಡ, ಆನಂದಪುರ ದೇವಾಲಯದ ಧರ್ಮಗುರು ಹಾಗೂ ವಲಯ ಕಾರ್ಯದರ್ಶಿ ಮಿಲನ್ ಚಕ್ರವರ್ತಿ, ಪಾಲಿಬೆಟ್ಟ ದೇವಾಲಯದ ಧರ್ಮಗುರು ಶಶಿಕುಮಾರ್ ಮತ್ತಿತರ ದೇವಾಲಯಗಳಿಂದ ಧರ್ಮಗುರುಗಳು ಪಾಲ್ಗೊಂಡಿದ್ದರು.