ಸೋಮವಾರಪೇಟೆ, ಡಿ. ೨೩: ಸಮೀಪದ ತಣ್ಣೀರುಹಳ್ಳ ಗ್ರಾಮದ ಸಮುದಾಯ ಭವನ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಸಭೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಗ್ರಾ.ಪಂ. ಸದಸ್ಯ ಪ್ರವೀಣ್‌ಕುಮಾರ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹಬೀಬ್, ಕಾರ್ಯದರ್ಶಿಯಾಗಿ ಶಾಲಾ ಮುಖ್ಯೋಪಾಧ್ಯಾಯರು, ಉಪ ಕಾರ್ಯದರ್ಶಿಯಾಗಿ ಹರೀಶ್, ಖಜಾಂಚಿಯಾಗಿ ಆನಂದ್‌ರಾಜ್ ಅವರುಗಳನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ನಿರ್ದೇಶಕರುಗಳಾಗಿ ಗ್ರಾ.ಪಂ. ಸದಸ್ಯರುಗಳಾದ ಅಶ್ವಿನಿ, ಕವಿತಾ, ಉಷಾ ರವೀಂದ್ರ, ಸದಾನಂದ್, ರಫೀಕ್, ಶಾಲಿ, ದರ್ಶನ್, ಸುಭಾಷ್, ರೂಪಾವತಿ, ಮಂಗಳ, ಚೈತ್ರ, ಭಾನು, ಜಯಂತ್ ಅವರುಗಳನ್ನು ನೇಮಕಗೊಳಿಸಲಾಯಿತು.

ಸಮುದಾಯ ಭವನದ ಅಭಿವೃದ್ಧಿ, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸುವುದು, ಆದಾಯದ ನಾಲ್ಕನೇ ೧ ಭಾಗವನ್ನು ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಶಿಕ್ಷಕ ಕೆ.ಜಿ.ನಾಗೇಂದ್ರ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ರವಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.