ಮಡಿಕೇರಿ, ಡಿ. ೨೩; ಟಿ.ಶೆಟ್ಟಿಗೇರಿ-ಶ್ರೀಮಂಗಲ ಶೂಟರ್ಸ್ ಕ್ಲಬ್ ವತಿಯಿಂದ ಶ್ರೀಮಂಗಲ ಕೊಡವ ಸಮಾಜದ ಆವರಣದಲ್ಲಿ ತಾ. ೨೫ ರಂದು (ನಾಳೆ) ಐದನೇ ವರ್ಷದ ತೋಕ್ನಮ್ಮೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿದೆ.
.೨೨, ೧೨ನೇ ಬೋರ್, ಏರ್ಗನ್ ಹಾಗೂ ಸ್ಲಗ್ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. .೨೨ ಸ್ಪರ್ಧಾ ವಿಜೇತರಿಗೆ ತಲಾ ರೂ. ೨೫ ಸಾವಿರ, ೨೦ ಸಾವಿರ ಹಾಗೂ ರೂ. ೧೫ ಸಾವಿರ, ನಗದು, ೧೨ನೇ ಬೋರ್ನಲ್ಲಿ ರೂ. ೨೦ ಸಾವಿರ, ರೂ. ೧೫ ಸಾವಿರ ಹಾಗೂ ರೂ. ೧೦ ಸಾವಿರ ನಗದು ಬಹುಮಾನವಿದೆ. ಏರ್ಗನ್ ವಿಭಾಗಕ್ಕೆ ರೂ. ೧೦ ಸಾವಿರ, ರೂ. ೭ ಸಾವಿರ ಹಾಗೂ ರೂ. ೫ ಸಾವಿರ, ಸ್ಲಗ್ ವಿಭಾಗಕ್ಕೆ ರೂ. ೧೫ ಸಾವಿರ, ರೂ. ೧೦ ಸಾವಿರ ಹಾಗೂ ರೂ. ೭ ಸಾವಿರ ನಗದು ಬಹುಮಾನವಿದ್ದು, ಹಲವು ದಾನಿಗಳು ಈ ಮೊತ್ತವನ್ನು ಪ್ರಾಯೋಜಿಸಿದ್ದಾರೆ.
ಬೆಳಿಗ್ಗೆ ೯ ರಿಂದ ಸ್ಪರ್ಧೆ ಆರಂಭಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ ಮಲ್ಲಂಗಡ ನಿರನ್ ಪಾಲ್ಗೊಳ್ಳಲಿದ್ದಾರೆ. ಶ್ರೀಮಂಗಲದ ಬೆಳೆಗಾರ ಕುಂಞAಗಡ ದಿನೇಶ್ ಉದ್ಘಾಟನೆ ನೆರವೇರಿಸಲಿದ್ದಾರೆ. ಶೂರ್ಸ್ ಕ್ಲಬ್ ಅಧ್ಯಕ್ಷ ತಡಿಯಂಗಡ ಕರುಂಬಯ್ಯ, ಉಪಾಧ್ಯಕ್ಷ ಕೋಟ್ರಮಾಡ ಮಂಜು ಭಾಗವಹಿಸಲಿದ್ದಾರೆ. ಮುಕ್ತ ಸ್ಪರ್ಧೆಯಲ್ಲಿ ಹಲವಷ್ಟು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ.