ಸುಂಟಿಕೊಪ್ಪ, ಡಿ. ೨೪: ಗದ್ದೆಹಳ್ಳದ ಗಾಂಧಿ ವೃತ್ತದಲ್ಲಿ ಶಿವಯಾತ್ರೆ ರಥಕ್ಕೆ ಅದ್ದೂರಿ ಸ್ವಾಗತವನ್ನು ಹಿಂದೂ ಭಕ್ತಾದಿಗಳು ಕೋರಿದರು.ಗದ್ದೆಹಳ್ಳದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ರಥವನ್ನು ಎಳೆದು ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟದೆಡೆಗೆ ತಂದರು. ಬೆಳಗ್ಗಿನ ಪೂಜೆ ಸಲ್ಲಿಸಿದ ಬಳಿಕ ಕುಶಾಲನಗರದತ್ತ ರಥ ಪ್ರಯಾಣ ಬೆಳೆಸಿತು. ಶ್ರೀಪುರಂ ಅಯ್ಯಪ್ಪ ಕ್ಷೇತ್ರದ ಬಳಿ ಪೂಜೆ ಸ್ವೀಕರಿಸಿದ ಬಳಿಕ ಕೊಡಗರಹಳ್ಳಿ ಶ್ರೀ ಬೈತೂರಪ್ಪ ದೇವಾಲಯಕ್ಕೆ ಆಗಮಿಸಿತು. ದೇವಾಲಯದಲ್ಲಿ ಪೂಜೆ ನೆರವೇರಿಸಿದ ಬಳಿಕ ಸ್ವಲ್ಪಹೊತ್ತು ಧ್ಯಾನ ಭಜನೆಯ ಮೂಲಕ ಕೊಡಗರಹಳ್ಳಿ ಮಾರುತಿ ನಗರದ ಶ್ರೀ ಆಂಜನೇಯ ದೇವಸ್ಥಾನ, ೭ನೇ ಹೊಸಕೋಟೆಯ ಶ್ರೀ ಮಹಾಗಣಪತಿ ಮತ್ತು ಶ್ರೀ ಕೃಷ್ಣ ದೇವಸ್ಥಾನ ಕ್ರಮಿಸಿದ ಬಳಿಕ ಬ್ರಹ್ಮಶ್ರೀ ನಾರಾಯಣ ಗುರು ಚಾರಿಟೆಬಲ್ ಟ್ರಸ್ಟ್ನಲ್ಲಿ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭ ಆಯಾ ವ್ಯಾಪ್ತಿಯ ದೇವಸ್ಥಾನ ಸೇವಾ ಸಮಿತಿಗಳು, ವಿವಿಧ ಸಂಘಟನೆಗಳು ರಥವನ್ನು ಎಳೆಯಲು ಕೈಜೋಡಿಸಿದ್ದು ಮಾತ್ರವಲ್ಲದೆ ಮನೆ ಮತ್ತು ವಾಣಿಜ್ಯ ಮಳಿಗೆಗಳ ಮುಂದೆ ಹಾದು ಹೋಗುವಾಗ ಈಡುಗಾಯಿ ಒಡೆದು ಆರತಿ ಎತ್ತಿ ಭಕ್ತಿಯಿಂದ ನಮಿಸಿದ್ದು ಕಂಡುಬAತು. ಗುರುವಾರ ಬೆಳಿಗ್ಗೆ ರಥಯಾತ್ರೆ ಬೆಟ್ಟದಪುರ - ಕೆ.ಆರ್. ನಗರ ಮಾರ್ಗವಾಗಿ ಮೈಸೂರು ತಲುಪಲಿದ್ದು, ಫೆ. ೧೩ ರಂದು ಕೊಯಮತ್ತೂರಿನಲ್ಲಿರುವ ಈಶ ಆದಿಯೋಗಿ ಕೇಂದ್ರದಲ್ಲಿ ಸಮರ್ಪಣೆಗೊಳ್ಳಲಿದೆ.