ಮಡಿಕೇರಿ, ಡಿ. ೨೫: ನೈಜ ಧರ್ಮ ವಿಶ್ವಾಸಿಯ ಬದುಕು ಇತರರ ಕಷ್ಟ ಸಂಕಷ್ಟಗಳಿಗೆ ಪರಿಹಾರವಾಗುವ ರೀತಿಯಲ್ಲಿ ಇರಬೇಕು. ನಿರಾಶ್ರಿತ, ನಿರ್ಗತಿಕ ಹಾಗೂ ಅನಾಥರ ಸೇವೆಯನ್ನು ಮಾಡುವ ಮೂಲಕ ಸಾರ್ಥಕತೆ ಗಳಿಸಬೇಕು ಎಂದು ತನಲ್ ಟ್ರಸ್ಟ್ ಇದರ ಕೇರಳದ ವಡಗರ ವಿಭಾಗದ ಪ್ರತಿನಿಧಿ ಮೊಹಮ್ಮದ್ ಆಲಿ ಹೇಳಿದರು.

ತನಲ್ ಸೇವಾ ಕೇಂದ್ರಗಳ ಅಧೀನದಲ್ಲಿ ದೇಶಾದ್ಯಾಂತ ಮೂರು ಲಕ್ಷದಷ್ಟು ಜನರು ಆಶ್ರಯ ಪಡುತ್ತಿದ್ದಾರೆ. ಸಾವಿರದ ಮುನ್ನೂರ ಮೂವತ್ತು ಶಾಲೆಗಳು ತನಲ್ ಅಧೀನದಲ್ಲಿ ಕಾರ್ಯಚರಿಸುತ್ತಿದ್ದು. ಇನ್ನು ಅನೇಕ ಜನ ಹಸಿವು ದಾರಿದ್ರ‍್ಯದಿಂದ ಬದುಕು ಸವೆಯುತ್ತಿದ್ದಾರೆ ಎಂದು ಪ್ರತಿಪಾದಿಸಿದರು. ಮಡಿಕೇರಿಯ ತನಲ್ ಆಶ್ರಮದಲ್ಲಿ ಎಂಟನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷ ಮೊಹಮ್ಮದ್ ಮುಸ್ತಫರವರು ತನಲ್ ಆಶ್ರಮದ ಪ್ರಾರಂಭ ಹಾಗೂ ಅದರ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿ ಎಲ್ಲರನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಾಳೆಯಡ ದಿವ್ಯಾ ವಾರ್ಷಿಕ ವರದಿ ಯನ್ನು ಮಂಡಿಸಿದರು. ಕೋಶಾಧಿಕಾರಿ ಕರಾಮತ್ತುಲ್ಲಾ ಖಾನ್ ವರ್ಷದ ಲೆಕ್ಕಾಚಾರವನ್ನು ಮಂಡಿಸಿದರು

ಸನ್ಮಾನ: ತನಲ್ ಆಶ್ರಮ ಸಮಿತಿಯಲ್ಲಿ ಪ್ರಾರಂಭದಿAದ ಇದುವರೆಗೂ ಸೇವೆ ಸಲ್ಲಿಸುತ್ತಿರುವ ಹಿರಿಯ ವ್ಯಕ್ತಿ ಬಾಬುಚಂದ್ರ ಉಳ್ಳಾಗಡಿ, ವಿವೇಕಾನಂದ ಸಂಸ್ಥೆಯಿAದ ನಿರಂತರವಾಗಿ ಶುಷ್ರೂಷೆ ಹಾಗೂ ಸೇವೆಯನ್ನು ಸಲ್ಲಿಸುತ್ತಿರುವ ಮೌನ ಹಾಗೂ ಶೋಭಾ ಅವರನ್ನು ಈ ಸಂದರ್ಭ ಸನ್ಮಾನ ಮಾಡಲಾಯಿತು.

ನೂತನ ಸಮಿತಿ ಅಸ್ಥಿತ್ವಕ್ಕೆ: ಅಧ್ಯಕ್ಷರಾಗಿ ಮೊಹಮ್ಮದ್ ಮುಸ್ತಫ, ಪ್ರಧಾನ ಕಾರ್ಯದÀರ್ಶಿಯಾಗಿ ಬಾಳೆಯಡ ದಿವ್ಯಾ, ಕೋಶಾಧಿಕಾರಿಯಾಗಿ ಖರಾಮತ್ತುಲ್ಲಾ ಖಾನ್ ಅವರನ್ನು ಈ ಹಿಂದಿನAತೆ ಮುಂದುವರೆಸಲು ತೀರ್ಮಾನಿಸಲಾಯಿತು. ಕಾರ್ಯಕಾರಿ ಸಮಿತಿಗಾಗಿ ಐದು ಜನ ಮಹಿಳೆಯರು ಸೇರಿದಂತೆ ಒಟ್ಟು ಹದಿಮೂರು ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಮುಹೀನ ಅಬೂಬಕ್ಕರ್ ವಂದಿಸಿದರು. ಅಬ್ದುಲಾ ಕಾರ್ಯಕ್ರಮ ನಿರೂಪಿಸಿದರು.