ಸುAಟಿಕೊಪ್ಪ, ಡಿ. ೨೫: ಸುಂಟಿಕೊಪ್ಪದ ಕೂರ್ಗ್ ಚೆಸ್ ಕ್ಲಬ್ ಇವರ ವತಿಯಿಂದ ತಾ. ೩೧ ರಂದು ಬೆಳಿಗ್ಗೆ ೯.೩೦ ಗಂಟೆಗೆ ಶ್ರೀ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಜಿಲ್ಲಾಮಟ್ಟದ ಚದುರಂಗ (ಚೆಸ್) ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಕ್ಲಬ್‌ನ ಯೋಜನಾ ನಿರ್ದೇಶಕರುಗಳಾದ ಎಸ್. ವೇಲು, ಒ.ಜಿ. ಮಣಿಕಂಠ (ಮಣಿ), ಪಂದ್ಯಾವಳಿಯ ನಿರ್ದೇಶಕ ತಿರುಮೂರ್ತಿ ಹಾಗೂ ಸಂಯೋಜಕ ಎಂ. ಭಾಸ್ಕರ್ ತಿಳಿಸಿದ್ದಾರೆ.

೭ ರಿಂದ ೧೪ ವರ್ಷ ಪ್ರಾಯದ ಮಕ್ಕಳ ವಿಭಾಗದಲ್ಲಿ ಪ್ರಥಮ ಬಹುಮಾನ ರೂ. ೩,೦೦೦, ದ್ವಿತೀಯ ಬಹುಮಾನ ರೂ. ೨,೦೦೦, ತೃತೀಯ ಬಹುಮಾನ ರೂ. ೧,೦೦೦ ನಗದು ಬಹುಮಾನ ಹಾಗೂ ಐವರು ಸ್ಪರ್ಧೆಗಳಿಗೆ ಆಕರ್ಷಕ ಟ್ರೋಫಿ ನೀಡಲಾಗುವುದು. ಈ ವಿಭಾಗದ ನೋಂದಣಿ ಶುಲ್ಕ ರೂ. ೩೦೦ ಆಗಿದೆ. ೧೫ ವರ್ಷ ಮೇಲ್ಪಟ್ಟವರ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ. ೫,೦೦೦, ದ್ವಿತೀಯ ಬಹುಮಾನ ರೂ. ೩,೦೦೦, ತೃತೀಯ ಬಹುಮಾನ ರೂ. ೧,೫೦೦ ನಗದು ಬಹುಮಾನ ಹಾಗೂ ಐವರು ಸ್ಪರ್ಧಿಗಳಿಗೆ ಆಕರ್ಷಕ ಟ್ರೋಫಿ ಸಿಗಲಿದೆ. ಈ ವಿಭಾಗದ ನೋಂದಣಿ ಶುಲ್ಕ ರೂ. ೫೦೦ ಆಗಿದ್ದು, ಮೊದಲು ಹೆಸರು ನೋಂದಾಯಿಸಿಕೊಳ್ಳುವ ೧೦೦ ಸ್ಪರ್ಧಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು.

ಚದುರಂಗ (ಚೆಸ್) ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ತಾ. ೩೦ ರ ರಾತ್ರಿ ೯ ಗಂಟೆಯೊಳಗೆ ಹೆಸರನ್ನು ನೋಂದಣಿ ಮಾಡಿಕ್ಕೊಳ್ಳಬಹುದಾಗಿದೆ ಎಂದು ಅವರುಗಳು ಮಾಹಿತಿ ನೀಡಿದ್ದಾರೆ.ಹೆಚ್ಚಿನ ವಿವರಗಳಿಗೆ ಹಾಗೂ ಹೆಸರು ನೋಂದಣಿಗೆ ಸಂಪರ್ಕಿಸಿ: ಎಸ್. ವೇಲು - ೯೦೦೮೧೯೧೦೨೧ ಮಣಿಕಂಠ (ಮಣಿ) - ೯೪೮೧೭೭೦೬೫೮. ತಿರುಮೂರ್ತಿ - ೮೭೬೨೯೬೫೧೨೦ ಎಂ. ಭಾಸ್ಕರ್ - ೯೬೬೩೫೮೩೪೪೪. ಸ್ಮಿತಾ ಬಿ.ಬಿ. (ಪಂದ್ಯಾವಳಿ ನಿರೂಪಕರು) - ೮೮೬೧೦೫೯೪೧೦.