ಸೋಮವಾರಪೇಟೆ, ಡಿ. ೨೫: ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಟೆಗಳಲ್ಲಿ ಸಂಗ್ರಹಿಸಿ ಸಾರ್ವಜನಿಕ ರಸ್ತೆಬದಿಯಲ್ಲಿ ಎಸೆಯುವ ದುಷ್ಟ ಬುದ್ದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇದೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಇಂತಹ ಮೂಟೆಗಳು ಕಂಡುಬರುವುದು ಸರ್ವೆ ಸಾಮಾನ್ಯ ಎಂಬAತಾಗಿದೆ.
ತಮ್ಮ ಮನೆಯ ತ್ಯಾಜ್ಯವನ್ನು ಮೂಟೆಗಳಲ್ಲಿ ಸಂಗ್ರಹಿಸಿ ಬೇರೊಂದು ಗ್ರಾಮದ ರಸ್ತೆಗಳಿಗೆ ಎಸೆಯುವುದು ನಿರಂತರವಾಗಿದೆ. ಅಂತೆಯೇ ಮಸಗೋಡು ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಬದಿಯಲ್ಲಿ ಮನೆಯ ತ್ಯಾಜ್ಯಗಳ ಮೂಟೆ ಕಂಡುಬAದಿದ್ದು, ಇದನ್ನು ಬೀದಿ ನಾಯಿಗಳು ಎಳೆದಾಡಿ ಚೆಲ್ಲಾಪಿಲ್ಲಿ ಮಾಡಿವೆ.
ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಿದ್ಯಾರ್ಥಿಗಳು, ಮಕ್ಕಳು ಸಂಚರಿಸುತ್ತಿರುತ್ತಾರೆ. ಗೃಹೋಪಯೋಗಿ ತ್ಯಾಜ್ಯಗಳನ್ನು ನಾಯಿಗಳು ಎಳೆದಾಡುತ್ತಾ ಕಚ್ಚಾಡುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಮಕ್ಕಳು ರಸ್ತೆಯಲ್ಲಿ ನಡೆದಾಡಲೂ ಸಮಸ್ಯೆಯಾಗುತ್ತಿದೆ. ಇಂತಹ ಕೆಟ್ಟ ಕೆಲಸ ಮಾಡುವವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ತಮ್ಮದೇ ಜಾಗದಲ್ಲಿ ವಿಲೇವಾರಿ ಮಾಡಿಕೊಳ್ಳಬೇಕು. ತಪ್ಪಿದ್ದಲ್ಲಿ ಪಂಚಾಯಿತಿಯ ಸ್ವಚ್ಛ ವಾಹಿನಿ ವಾಹನಕ್ಕೆ ನೀಡಬೇಕು. ವಾತಾವರಣ ಕಲುಷಿತವಾಗಲು ಅವಕಾಶ ನೀಡಬಾರದು. ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಗಳು ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಮಸಗೋಡು ಗ್ರಾಮಾಧ್ಯಕ್ಷ ಬಂಗೀರಮನೆ ಸತೀಶ್ ಒತ್ತಾಯಿಸಿದ್ದಾರೆ.