ಮಡಿಕೇರಿ, ಡಿ. ೨೭: ರಾಷ್ಟಿçÃಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಎಲ್ಲಾ ನ್ಯಾಯಾಲಯಗಳಲ್ಲಿರುವ ರಾಜಿಯಾಗುವಂತಹ ಬಾಕಿ ಪ್ರಕರಣಗಳನ್ನು ಮಧ್ಯಸ್ಥಿಕೆಗಾರಿಕೆಯ ಮೂಲಕ ಇತ್ಯರ್ಥಪಡಿಸಲು ಮುಖ್ಯ ನ್ಯಾಯಮೂರ್ತಿಗಳು ಸರ್ವೋಚ್ಚ ನ್ಯಾಯಾಲಯರವರು ದೇಶಾದಾದ್ಯಂತ ಜನವರಿ ೨ ರಿಂದ ೯೦ ದಿನಗಳ ವಿಶೇಷ ಮಧ್ಯಸ್ಥಗಾರಿಕಾ ಅಭಿಯಾನ ೨.೦ ಮಧ್ಯಸ್ಥಿಕೆ ರಾಷ್ಟçಕ್ಕಾಗಿ ೯೦ ದಿನಗಳ ಮಧ್ಯಸ್ಥಿಕೆ ಎಂಬ ಅಭಿಯಾನಕ್ಕೆ ಚಾಲನೆ ನೀಡಿರುತ್ತಾರೆ.

ಅದರಂತೆ ಜಿಲ್ಲೆಯ ನ್ಯಾಯಾಲದಯಲ್ಲಿರುವ ರಾಜಿ ಯಾಗುವಂತಹ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸುತ್ತಿದ್ದು. ಕಕ್ಷಿದಾರರು ಈ ೯೦ ದಿನಗಳ ವಿಶೇ಼ಷ ಅಭಿಯಾನದ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು, ಪ್ರಬಾರ ಸದಸ್ಯ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.