ಸುಂಟಿಕೊಪ್ಪ, ಡಿ. ೨೭: ಕೊಡಗರಹಳ್ಳಿಯ ಶ್ರೀ ಬೈತೂರಪ್ಪ ಶ್ರೀ ಪೊವ್ವೆದಿ ಬಸವೇಶ್ವರ ದೇವಾಲಯದಲ್ಲಿ ೧೪ನೇ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೊರಣ ಸೇರಿದಂತೆ ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.

ಬೆಳಿಗ್ಗಿನಿAದ ದೇವಾಲಯದಲ್ಲಿ ಮಹಾಗಣಪತಿ ಹೋಮದೊಂದಿಗೆ ಧಾರ್ಮಿಕ ವಿಧಿವಿಧಾನಗಳನ್ನು ಪ್ರಾರಂಭಿಸಲಾಯಿತು.

ಏಕಾದಶ ರುದ್ರಾಭೀಷೇಕ, ನವಕಲಾಶಾಭೀಷೇಕ ಪೂಜೆ, ನಾಗದೇವರಿಗೆ ವಿಶೇಷ ಪೂಜೆ, ನವಗ್ರಹಗಳಿಗೆ ವಿಶೇಷ ಕಲಾಶಾಭಿಷೇಕ ಪೂಜೆಯನ್ನು ನೆರವೇರಿಸಲಾಯಿತು.

ಕ್ಷೇತ್ರ ತಂತ್ರಿಗಳಾದ ಶಿವರಾಂಭಟ್ ಮತ್ತು ವೈದಿಕರ ತಂಡ, ದೇವಾಲಯದ ಪ್ರಧಾನ ಆರ್ಚಕರಾದ ರಾಘವೇಂದ್ರ ಭಟ್ ಮತ್ತು ನರಸಿಂಹ ಭಟ್ ಅವರು ದಿನದ ವಿಶೇಷ ಪೂಜಾ ಕೈಂಕರ್ಯ ಮಹಾಮಂಗಳಾರತಿಯನ್ನು ನೆರವೇರಿಸಿದರು. ಭಕ್ತಾದಿಗಳು ದೇವರ ಪ್ರಸಾದವನ್ನು ಸ್ವೀಕರಿಸಿದರು. ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭ ದೇವಾಲಯದ ಟ್ರಸ್ಟ್ ಅಧ್ಯಕ್ಷ ಕೊಕ್ಕಲೇರ ಎನ್. ಪೂಣ್ಣಚ್ಚ, ಕಾರ್ಯದರ್ಶಿ ಬಿ.ಸಿ. ದಿನೇಶ್, ತಕ್ಕ ಹ್ಯಾರಿ ಕಾರ್ಯಪ್ಪ, ಖಜಾಂಚಿ ಡಾ. ಎ.ಬಿ. ತಮ್ಮಯ್ಯ, ಟ್ರಸ್ಟಿಗಳಾದ ಎಂ.ಎ. ಬೋಪಯ್ಯ, ಎ.ಎಂ. ಸನ್ನಿ ಕಾರ್ಯಪ್ಪ, ಎಂ.ಎಸ್. ಸುರೇಶ್ ಚಂಗಪ್ಪ, ಕೆ.ಎಸ್. ಮಂಜುನಾಥ್, ದತ್ತ ಸೋಮಣ್ಣ, ದೇವಾಲಯದ ಪಾರುಪತ್ತೇದಾರ ಅಕ್ಕಪಂಡ ಎ. ರಾಜೇಂದ್ರ ಸೇರಿದಂತೆ ಊರಿನ ಹಿರಿಯರು ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.