ವೀರಾಜಪೇಟೆ, ಡಿ. ೨೮: ಕೊಡಗು ಕೆಂಬಟ್ಟಿ ಸಮಾಜದ ೭೫ ವರ್ಷಗಳ ಬೇಡಿಕೆಯನ್ನು ಈಡೇರಿಸುಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಗೆ ಕೊಡಗು ಕೆಂಬಟ್ಟಿ ಸಮಾಜದ ಅಧ್ಯಕ್ಷ ಮೊಳ್ಳೆಕುಟ್ಟಂಡ ದಿನು ಬೋಜಪ್ಪ ಅವರ ನೇತೃತ್ವದಲ್ಲಿ ಸನ್ಮಾನ ಮಾಡಲಾಯಿತು.

ಕೊಡಗಿನ ಕೊಡವ ಭಾಷೆ ಮಾತನಾಡುವ ಕೆಂಬಟ್ಟಿ ಸಮುದಾಯವು ಆದಿಕರ್ನಾಟಕ ಎಂದು ಜಾತಿಪ್ರಮಾಣ ಪತ್ರ ಪಡೆಯುತ್ತಿದ್ದು, ಅವರ ಮೂಲ ಜಾತಿಯ ಹೆಸರಾದ ಕೆಂಬಟ್ಟಿ ಹೆಸರಿನಲ್ಲಿಯೇ ಜಾತಿ ಪ್ರಮಾಣ ಪತ್ರ ಪಡೆಯುವ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ, ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಭರವಸೆಯನ್ನು ನೀಡಿದ ಸಲುವಾಗಿ ವಿಧಾನ ಸೌಧದ ಶಾಸಕರ ಕಚೇರಿಯಲ್ಲಿ ಕೊಡಗು ಕೆಂಬಟ್ಟಿ ಸಮಾಜದ ಪರವಾಗಿ ಸನ್ಮಾನ ಮಾಡಲಾಯಿತು.