ಮಡಿಕೇರಿ, ಡಿ. ೨೮: ಇತಿಹಾಸವನ್ನು ಮರೆತು ಇತಿಹಾಸ ನಿರ್ಮಿಸುವುದು ಅಸಾಧ್ಯ ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಭಾರತದ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ರವರ ಘೋಷವಾಕ್ಯ ವನ್ನು ಪುನರುಚ್ಚರಿಸಿದರು.
ಸ್ವಾತಂತ್ರö್ಯ ಹೋರಾಟಗಾರ ದಿವಂಗತ ಪೂಜಾರಿರ ರಾಮಪ್ಪ ಅವರ ಹೆಸರಿನಲ್ಲಿ ಮೇಕೇರಿ ಬಿಳಿಗೇರಿ, ಅರ್ವತ್ತೋಕ್ಲು ಲಿಂಕ್ ರಸ್ತೆಗೆ ನಾಮಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ‍್ಯ ಹೋರಾಟದಲ್ಲಿ ಕೊಡಗಿನ ಅನೇಕ ಮಹನೀಯರು ತಮ್ಮ ಬದುಕನ್ನು ತ್ಯಾಗ ಮಾಡಿ ಪಾಲ್ಗೊಳ್ಳುವ ಮೂಲಕ ತಮ್ಮ ದೇಶ ಪ್ರೇಮದ ಬದ್ದತೆಯನ್ನು ಮೆರೆದಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ದಿವಂಗತ ಪೂಜಾರಿ ರಾಮಪ್ಪ ಒಬ್ಬರಾಗಿದ್ದು ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡುವ ಮೂಲಕ ಸ್ವಾತಂತ್ರ‍್ಯ ಹೋರಾಟಗಾರರಿಗೆ ಗೌರವ ಸೂಚಿಸುವ ಅವಕಾಶ ದೊರಕಿದ್ದು ಸಂತಸದ ಕ್ಷಣವಾಗಿದೆ ಎಂದು ಹೇಳಿದರು.
ಕೊಡಗು ಗಡಿ ಭಾಗವಾದ್ದರಿಂದ ಇತಿಹಾಸಕಾರರು ಕೊಡಗಿನ ಸ್ವಾತಂತ್ರ‍್ಯ ಹೋರಾಟಗಾರರ ಬಗ್ಗೆ ದಾಖಲೀಕರಿಸಲು ಆಸಕ್ತಿ ತೋರದೇ ಇದ್ದಿರುವ ಸಾಧ್ಯತೆ ಇದ್ದು ಇಂದಿನ ಪೀಳಿಗೆ ಸ್ವಾತಂತ್ರ‍್ಯ ಹೋರಾಟಕ್ಕೆ ಶ್ರಮಿಸಿದ ಕೊಡಗಿನ ಮಹಾನ್ ವ್ಯಕ್ತಿಗಳ ಬಗ್ಗೆ ಪರಿಚಯಿಸುವಂತಹ ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು.
ಪ್ರಾಸ್ತವಿಕವಾಗಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯಿತಿ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ತನ್ನ ಸಂಸಾರ, ಸಂಬAಧÀಗಳು ಮತ್ತು ಬದುಕು ದೇಶಕ್ಕಿಂತ ದೊಡ್ಡದಲ್ಲಾ ಎಂಬ ದೃಢ ಸಂಕಲ್ಪದೊAದಿಗೆ ಸ್ವಾತಂತ್ರö್ಯ ಹೋರಾಟದಲ್ಲಿ ಭಾಗವಹಿಸಿ ಕಠಿಣ ಶಿಕ್ಷೆ ಅನುಭವಿಸಿ ಸ್ವಾತಂತ್ರ‍್ಯ ನಂತರವೂ ಅಪ್ಪಟ ಗಾಂಧಿವಾದಿಯಾಗಿ ಗಾಂಧಿಯವರ ಆದರ್ಶಗಳೊಂದಿಗೆ ಬದುಕಿ ಮುಂದಿನ ಪೀಳಿಗೆಗೆ ಆದರ್ಶದ ಮಾರ್ಗವನ್ನು ತೋರಿದ ಪೂಜಾರಿರ ರಾಮಪ್ಪ ನವರ ಬದುಕು ಅವೀಸ್ಮರಣೀಯವಾದದ್ದು ಎಂದು ಹೇಳಿದರು.
ಸ್ವಾತಂತ್ರö್ಯ ಹೋರಾಟಗಾರ ಪೂಜಾರಿರ ರಾಮಪ್ಪ ಟ್ರಸ್ಟ್ ಅಧ್ಯಕ್ಷ ಪೂಜಾರಿರ ಬೆಳ್ಯಪ್ಪನವರು ಮಾತನಾಡಿ, ಈ ಸುದಿನಕ್ಕಾಗಿ ಕಳೆದ ೨೯ ವರ್ಷಗಳಿಂದ ಟ್ರಸ್ಟ್ ಸದಸ್ಯರು ಪ್ರಯತ್ನ ಪಟ್ಟಿದ್ದು ಶಾಸಕರಾದ ಪೊನ್ನಣ್ಣ ಅವರ ಸಹಕಾರದಿಂದ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ನೆರವು ನೀಡಿದ ಶಾಸಕ ಎ.ಎಸ್. ಪೊನ್ನಣ್ಣ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ, ರಾಜೀವ್ ಗಾಂಧಿ ಪಂಚಾಯಿತಿ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೂಜಾರಿರ ರಕ್ಷಿತ್ ರವರನ್ನು ಪೂಜಾರಿರ ಕುಟುಂಬಸ್ಥರು ಸನ್ಮಾನಿಸಿದರು. ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು ಪೂರ್ವನಿಯೋಜಿತ ಕಾರ್ಯಕ್ರಮ ನಿಮಿತ್ತ ಕಾರ್ಯಕ್ರಮಕ್ಕೆ ಮೊದಲೇ ಆಗಮಿಸಿ ಶುಭ ಕೋರಿದರು. ಅವರನ್ನು ಪೂಜಾರಿರ ಕುಟುಂಬದ ಪರವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಡಿ.ಸಿ.ಸಿ. ಸದಸ್ಯರಾದ ಭೀಷ್ಮ ಮಾದಪ್ಪ, ಅರೆಭಾಷೆ ಗೌಡ ಅಕಾಡೆಮಿ ಸ್ಥಾಪಕ ಅಧ್ಯಕ್ಷ ತುಂತಜೆ ಗಣೇಶ್, ಪ್ರಮುಖರಾದ ಪೂಜಾರಿರ ಮಾದಪ್ಪ, ಪೂಜಾರಿರ ನಾಣಯ್ಯ, ಪೂಜಾರಿರ ಜಗದೀಶ್, ಬಾಳಾಡಿ ಪ್ರತಾಪ್, ಅಂಬೇಕಲ್ ನವೀನ್ ಕುಶಾಲಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ, ಕೇಟೋಳಿರ ಮೋಹನ್ ರಾಜ್, ಪಿ.ಎಲ್. ಸುರೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಕುಮುದ ರಶ್ಮಿ, ಮಂಞೆರ ಸಾಬು ತಿಮ್ಮಯ್ಯ, ಅಪ್ರು ರವೀಂದ್ರ, ಪೂಜಾರಿರ ಪ್ರದೀಪ್ ಕುಮಾರ್, ಪೂಜಾರಿರ ಧ್ರುವ, ತೆನ್ನಿರ ರಮೇಶ್ ಪೊನ್ನಪ್ಪ, ಮುಂಜಾAದಿರ ಅಶೋಕ್, ಪೂಜಾರಿರ ಮೈತ್ರಿ, ಪೂಜಾರಿರ ಸೋನಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪೂಜಾರಿರ ಯಶಿಕ ಮಿಥುನ್ ಪೂಜಾರಿರ ರಾಮಪ್ಪ ಅವರ ನುಡಿನಮನ ಗೀತೆಯನ್ನು ಹಾಡಿದರು. ಪೂಜಾರಿರ ಪುಷ್ಪಾವತಿ ಚಂದ್ರಶೇಖರ್ ಪ್ರಾರ್ಥಿಸಿ, ಕೃಪಾದೇವರಾಜ್ ನಿರೂಪಿಸಿ, ಪೂಜಾರಿರ ಜಗದೀಶ್ ವಂದಿಸಿದರು.