ಐಗೂರು, ಡಿ. ೨೮: ತಾಲೂಕಿನಲ್ಲಿ ಈಗಾಗಲೇ ಕಾಫಿ ಕೊಯ್ಯುವ ಕೆಲಸದ ಜೊತೆಗೆ ಕೊಯ್ದ ಕಾಫಿ ಹಣ್ಣನ್ನು ಪಲ್ಪಿಂಗ್ ಮಾಡುವ ಕೆಲಸ ಬಿರುಸಿನಿಂದ ಸಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಐಗೂರಿನ ಚೋರನ ಹೊಳೆಗೆ ಕಿರುಗಂದೂರು ಭಾಗದಿಂದ ಹರಿದು ಬಂದ ಕಾಫಿ ಪಲ್ಪಿಂಗ್ ಮಾಡಿದ ನೀರಿನ ಮಿಶ್ರಣವು ಚೋರನ ಹೊಳೆಗೆ ಸೇರಿ ನೀರು ಕಪ್ಪುಬಣ್ಣದ ಮಿಶ್ರಣದಿಂದ ಕಲುಷಿತಗೊಂಡಿದೆ ಎಂದು ಐಗೂರು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ಜನರು ಬಟ್ಟೆ ಒಗೆಯಲು ಜಾನುವಾರುಗಳು ನೀರು ಕುಡಿಯಲು ಕಲುಷಿತಗೊಂಡ ನೀರನ್ನೆ ಬಳಸಬೇಕಾದ ಪರಿಸ್ಥಿತಿ ಇದೆ.ಜಲಚರಗಳು ಸಾಯುತ್ತಿದ್ದು, ನೀರು ದುರ್ವಾಸನೆಯಿಂದ ಕೂಡಿದೆ. ಕಲುಷಿತಗೊಂಡ ನೀರಿನಿಂದ ಸಾಂಕ್ರಾಮಿಕ ರೋಗಗಳು ಪ್ರಾರಂಭವಾಗುವ ಮೊದಲೇ ಸಂಬAಧಪಟ್ಟ ಇಲಾಖಾಧಿಕಾರಿಗಳು ಗಮನ ಹರಿಸಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.