ಸಿದ್ದಾಪುರ, ಡಿ. ೨೮: ಸಿದ್ದಾಪುರದ ಮೈಸೂರು ರಸ್ತೆಯ ನಿವಾಸಿ ಬಿ.ಜಿ.ಚಿಣ್ಣಪ್ಪ ಮತ್ತು ಶಿಕ್ಷಕಿ ಈಶ್ವರಿ ದಂಪತಿ ಅವರ ಮನೆಯಲ್ಲಿ ಭಾರಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸ್ ಇಲಾಖೆಯಿಂದ ಮೂರು ತಂಡಗಳನ್ನು ರಚನೆ ಮಾಡಿ ಬಿರುಸಿನ ತನಿಖೆ ನಡೆಸಲಾಗುತ್ತಿದೆ.

ಕಳೆದ ಮೂರು ದಿನಗಳ ಹಿಂದೆ ಸಿದ್ದಾಪುರದ ಮೈಸೂರು ರಸ್ತೆಯ ನಿವಾಸಿ ಚಿಣ್ಣಪ್ಪ ಅವರ ಮನೆಯ ಮೇಲ್ಭಾಗದ ಶೌಚಾಲಯದ ಕಿಟಕಿಯಿಂದ ಮನೆ ಒಳಗೆ ನುಗ್ಗಿ ಮನೆಯ ಕೋಣೆಯ ವಾಡ್ರೋಬ್‌ನ ಬೀಗವನ್ನು ತೆಗೆದು ಅಂದಾಜು ರೂ. ೧೯.೫೦ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾನೆ.

ಈ ಸಂಬAಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮೂರು ಪೊಲೀಸ್ ತಂಡಗಳನ್ನು ರಚನೆ ಮಾಡಿ ತ್ವರಿತಗತಿಯ ತನಿಖೆಯನ್ನು ಕೈಗೊಳ್ಳಲಾಗಿದೆ. ಈಗಾಗಲೇ ಘಟನೆ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಪೊಲೀಸ್ ಶ್ವಾನದಳ ಭೇಟಿ ನೀಡಿ ತನಿಖೆ ನಡೆಸಿದೆ. ಸದ್ಯದಲ್ಲೇ ಆರೋಪಿಯನ್ನು ಸೆರೆ ಹಿಡಿಯುವ ವಿಶ್ವಾಸವನ್ನು ಪೊಲೀಸರು ಹೊಂದಿದ್ದಾರೆ.