ಮಡಿಕೇರಿ, ಡಿ. ೨೮: ನಗರದ ಬಾಲಗೋಕುಲ ಹಾಗೂ ಮುಳಿಯ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಆಯೋಜಿಸ ಲಾಗಿದ್ದ ಬಾಲಸಂಗಮ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು. ನಗರದ ಮುಳಿಯ ಜ್ಯುವೆಲ್ಸ್ ಸಭಾಂಗಣದಲ್ಲಿ ನಡೆದ ಸಮಾರಂಭವು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಒಂದು ಸಾಂಸ್ಕೃತಿಕ ವೇದಿಕೆಯಾಗಿ ಮೂಡಿಬಂದಿತು.
ಮುಳಿಯ ಜ್ಯುವೆಲ್ಸ್ನ ವ್ಯವಸ್ಥಾಪಕ ಚಂದ್ರಶೇಖರ್ ಬಿ.ವಿ. ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಮಕ್ಕಳ ಸರ್ವತೋಮುಖ ಏಳಿಗೆಯಲ್ಲಿ ಇಂತಹ ಮೌಲ್ಯಧಾರಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಲಾವಿದ ಪಿ.ಎಂ. ರವಿ ಮಾತನಾಡಿ ರಾಷ್ಟಿçÃಯ ಗೀತೆ ವಂದೇ ಮಾತರಂ ಭವ್ಯ ಇತಿಹಾಸದ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಂದೇ ಮಾತರಂ ಗೀತೆಯು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ದೇಶಭಕ್ತರಿಗೆ ಹೇಗೆ ಸ್ಫೂರ್ತಿಯ ಸೆಲೆಯಾಗಿತ್ತು ಎಂಬುದನ್ನು ವಿವರಿಸಿದ ಅವರು, “ಹೆಜ್ಜೆಗಳು ೧೫೦” ವರ್ಷಗಳ ಸಂಭ್ರಮದ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ಈ ಗೀತೆಯ ಉಗಮ ಮತ್ತು ಅದು ಭಾರತೀಯರಲ್ಲಿ ಮೂಡಿಸಿದ ರಾಷ್ಟçಪ್ರೇಮದ ಕಿಚ್ಚಿನ ಬಗ್ಗೆ ಅವರು ಹಂಚಿಕೊAಡ ಮಾಹಿತಿ ಸ್ಮರಣೀಯವಾಗಿತ್ತು.
೬ ರಿಂದ ೧೫ ವರ್ಷದೊಳಗಿನ ಮಕ್ಕಳಿಗೆ ಅವರ ಆಸಕ್ತಿ ಮತ್ತು ವಯೋಮಾನಕ್ಕೆ ಅನುಗುಣವಾಗಿ ವೇದಿಕೆಯನ್ನು ಕಲ್ಪಿಸಲಾಗಿತ್ತು. ಪುಟಾಣಿ ಮಕ್ಕಳು ರಾಷ್ಟಿçÃಯ ಗೀತೆ ವಂದೇ ಮಾತರಂ ಗಾಯನ, ದೇಶಭಕ್ತಿ ಗೀತೆಗಳು, ಶ್ಲೋಕ ಪಠಣ, ಕುಣಿತ ಭಜನೆ ಹಾಗೂ ವಿವಿಧ ರೀತಿಯ ಮನೋಲ್ಲಾಸದ ಆಟಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು. ಇದರೊಂದಿಗೆ ಮಹಾಭಾರತ ಗ್ರಂಥ ಪಠಣದಿಂದ ಆಗುವ ಪ್ರಯೋಜನದ ಬಗ್ಗೆಯೂ ತಿಳುವಳಿಕೆ ನೀಡಲಾಯಿತು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹದಾಯಕ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಬಾಲಗೋಕುಲದ ಕಾರ್ಯಕರ್ತರಾದ ಜಯಾ ಪಾಲಾಕ್ಷ, ರಾಣಿ ಅರುಣ್, ಗೌರಮ್ಮ, ದೀಕ್ಷಾ, ಆಶಾ ಮತ್ತು ಗೀತಾ ಮೂರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು.