ವೀರಾಜಪೇಟೆ, ಡಿ. ೨೮: ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಅವಶ್ಯ. ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಮೂಲಸೌಕರ್ಯ ಒದಗಿಸಲು ಅಗತ್ಯ ಸಹಕಾರ ನೀಡುವುದಾಗಿ ದಾನಿ ಹಾಗೂ ಮಾಜಿ ಸೈನಿಕ ಕ್ಯಾಪ್ಟನ್ ಬಾಚುರ ಎಸ್. ಪೂಣಚ್ಚ ಭರವಸೆ ನೀಡಿದರು.
ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಟಿಶರ್ಟ್ ಹಾಗೂ ಜೆರ್ಸಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ದಿನಗಳಲ್ಲಿಯೂ ಸಾಧ್ಯವಾದಷ್ಟು ನೆರವು ನೀಡುತ್ತೇನೆ. ಇಲ್ಲಿನ ವಿದ್ಯಾರ್ಥಿಗಳು ಕೂಡ ಉನ್ನತ ವಿದ್ಯಾಭ್ಯಾಸ ಪಡೆದು ಸೇನೆಗೆ ಸೇರುವಂತಾಗಬೇಕು ಎಂದು ಕರೆ ನೀಡಿದರು.
ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ, ವೀರಾಜಪೇಟೆ ಮಹಿಳಾ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಚೆಯ್ಯಂಡ ಲೀಲಾವತಿ, ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯೆ ಬೇಪಡಿಯಂಡ ವಿಲೀನ, ಬಾಚುರ ಕಾಮವ್ವ, ಸ್ಥಳೀಯ ಕಾಫಿ ಬೆಳೆಗಾರರು, ಸಮಾಜ ಸೇವಕ ಪಟ್ರಪಂಡ ಸುರೇಶ್ ಬೆಳ್ಯಪ್ಪ, ಶಾಲೆಯ ಸಲಹಾ ಸಮಿತಿ ಸದಸ್ಯ ಬಿದ್ದೇರಿಯಂಡ ದೇವಯ್ಯ ಉಪಸ್ಥಿತರಿದ್ದರು.