ಸೋಮವಾರಪೇಟೆ, ಡಿ. ೨೯: ರಾಜ್ಯದ ಕಾಂಗ್ರೆಸ್ ಸರ್ಕಾರ ಸಂವಿಧಾನದತ್ತವಾಗಿ ಲಭಿಸಿರುವ ವಾಕ್ ಸ್ವಾತಂತ್ರö್ಯವನ್ನು ಹತ್ತಿಕ್ಕುವಂತಹ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಭಾರತೀಯ ಜನತಾ ಪಾರ್ಟಿ ಹಾಗೂ ಬಿಜೆಪಿ ಯುವ ಮೋರ್ಚಾದ ವತಿಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಧ್ವೇಷ ಭಾಷಣ ವಿಧೇಯಕದ ಹೆಸರಿನಲ್ಲಿ ವಾಕ್ ಸ್ವಾತಂತ್ರö್ಯವನ್ನು ಧಮನಿಸುವ ಯತ್ನ ನಡೆಯುತ್ತಿದೆ. ಅಂಬೇಡ್ಕರ್ ಅವರು ಸಂವಿಧಾನದತ್ತವಾಗಿ ನೀಡಿರುವ ಹಕ್ಕನ್ನು ಮೊಟಕುಗೊಳಿಸುವ ಯತ್ನಕ್ಕೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೈಹಾಕಿದೆ ಎಂದು ಆರೋಪಿಸಿದರು.

ಸಾಮಾನ್ಯ ಜನರು, ಮಾಧ್ಯಮಗಳು, ವಿರೋಧ ಪಕ್ಷದ ಹಕ್ಕುಗಳನ್ನು ಕಿತ್ತುಕೊಳ್ಳುವ ಇಂತಹ ಕಾಯ್ದೆಗಳ ವಿರುದ್ಧ ಜನರು ಜಾಗೃತರಾಗಬೇಕು. ರಾಜ್ಯ ಸರ್ಕಾರದಿಂದ ನಡೆಯುವ ಭ್ರಷ್ಟಾಚಾರಗಳನ್ನು ಯಾರೂ ಪ್ರಶ್ನಿಸಬಾರದು. ವಿರೋಧ ಪಕ್ಷಗಳು ಬಾಯಿ ಬಿಡಬಾರದು ಎಂಬ ದುರಾಲೋಚನೆಯಿಂದ ಇಂತಹ ಕಾಯ್ದೆ ತರಲಾಗಿದೆ ಎಂದ ರಂಜನ್, ಎಸ್.ಟಿ. ಅಭಿವೃದ್ಧಿ ನಿಗಮದಲ್ಲಿ ೮೯ ಕೋಟಿ ಹಣ ಅವ್ಯವಹಾರ, ಮೈಸೂರು ಮೂಡಾದಲ್ಲಿ ೧೪ ಸೈಟ್ ಪಡೆದ ಭ್ರಷ್ಟಾಚಾರ ಸೇರಿದಂತೆ ಇಡೀ ಸರ್ಕಾರ ಭ್ರಷ್ಟವಾಗಿದೆ. ಸರ್ಕಾರದ ಭ್ರಷ್ಟಾಚಾರದ ವಿರುದ್ಧ ವಿರೋಧ ಪಕ್ಷವಾಗಿರುವ ಬಿಜೆಪಿ ಹೋರಾಟ ಮಾಡಬಾರದು ಎಂಬ ದುರುದ್ದೇಶದಿಂದ ಇಂತಹ ಕಾಯ್ದೆ ತಂದಿದೆ ಎಂದರು. ಇಂತಹ ಜನವಿರೋಧಿ ವಿಧೇಯಕಕ್ಕೆ ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದೆಂದು ಪಕ್ಷದಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ರಂಜನ್ ಹೇಳಿದರು.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಈಗಾಗಲೇ ಸಾರ್ವಜನಿಕವಾಗಿ ದ್ವೇಷ ಹರಡುವ ಮಾತುಗಳಿಗೆ ಸಂವಿಧಾನದಡಿಯೇ ಕಾನೂನುಗಳಿವೆ. ಈಗಿನ ಭಾರತೀಯ ನ್ಯಾಯ ಸಂಹಿತೆಯಲ್ಲೂ ಕಾನೂನುಗಳಿವೆ. ಹೀಗಿದ್ದರೂ ಹೊಸದಾಗಿ ಕಾನೂನು ತರುವ ಅಗತ್ಯವೇನಿದೆ? ಈ ಬಗ್ಗೆ ನ್ಯಾಯಾಲಯದ ಮೂಲಕ ಹೋರಾಟ ಮಾಡಲಾಗುವುದು ಎಂದರು. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿರುವ ಸಂದರ್ಭದಲ್ಲಿ ಜನತೆಯ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಅವರ ದನಿಯನ್ನೇ ಅಡಗಿಸುವ ಕಾಯ್ದೆಗಳನ್ನು ಕಾಂಗ್ರೆಸ್ ಸರ್ಕಾರ ತರುತ್ತಿದೆ. ಇಂತಹ ತುರ್ತು ಪರಿಸ್ಥಿತಿಗೆ ಅವಕಾಶ ನೀಡಬಾರದು ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ಈ ಹಿಂದೆ ಇಂದಿರಾಗಾAಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿ ವಿರೋಧ ಪಕ್ಷದವರನ್ನು ಹತ್ತಿಕ್ಕಿದಂತೆಯೇ ಈಗಿನ ಕಾಂಗ್ರೆಸ್ ಸರ್ಕಾರವೂ ಕೆಲಸ ಮಾಡುತ್ತಿದೆ. ಸಂವಿಧಾನ ಅಡಿಯಲ್ಲಿ ಯಾವುದೇ ವ್ಯಕ್ತಿಗೆ ಮಾತನಾಡುವ ಹಕ್ಕಿದೆ. ಅದು ದ್ವೇಷ ಎಂದು ತೀರ್ಮಾನಿಸಲು ಸರ್ಕಾರಕ್ಕೆ ಹಕ್ಕಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಬಿಜೆಪಿ ಜನತೆಯ ಮುಂದೆ ಇಡುತ್ತದೆ ಎಂಬ ಭಯದಿಂದ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ. ಈ ಹಿಂದೆ ಪಾಕಿಸ್ತಾನ ಪರ ಘೋಷಣೆ ಕೂಗಿದವರು, ಪಾಕಿಸ್ತಾನ ಕ್ರಿಕೆಟ್ ಗೆದ್ದಾಗ ಸಂಭ್ರಮಿಸಿ ಪಟಾಕಿ ಹೊಡೆದವರು, ಮಂಗಳೂರಿನಲ್ಲಿ ಎಸ್‌ಡಿಪಿಐನವರ ಭಾಷಣ, ಕೋಗಿಲವಾಡಿಯಲ್ಲಿ ನಡೆದ ಘಟನೆಗೆ ಸಂಬAಧಿಸಿದAತೆ ಕೂಗಿದ ಘೋಷಣೆ, ಭಾಷಣಗಳು ಈ ವಿಧೇಯಕಕ್ಕೆ ಒಳಪಡುತ್ತದೆಯೇ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದರು.

ಜನರ ಹಕ್ಕನ್ನು ಕಸಿದುಕೊಳ್ಳುವ ಇಂತಹ ಕಾಯ್ದೆಗಳನ್ನು ತರಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಿರಂತರ ಹೋರಾಟ ಮಾಡಲಿದೆ ಎಂದು ಭಾರತೀಶ್ ಹೇಳಿದರು. ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಹರಪಳ್ಳಿ ರವೀಂದ್ರ, ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಗೌಡ, ಪ್ರಮುಖರಾದ ಮಹೇಶ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ಮೋಹಿತ್ ತಿಮ್ಮಯ್ಯ, ಎನ್.ಆರ್. ಅಜೀಶ್‌ಕುಮಾರ್, ಮನುಕುಮಾರ್ ರೈ, ಹೆಚ್.ಕೆ. ಮಾದಪ್ಪ, ಎಸ್.ಆರ್. ಸೋಮೇಶ್, ಮೋಕ್ಷಿಕ್ ರಾಜ್, ಶರತ್‌ಚಂದ್ರ, ಕವಿತಾ ವಿರೂಪಾಕ್ಷ, ಮಂಜುಳಾ ಸುಬ್ರಮಣಿ, ಭುವನೇಂದ್ರ, ಇಂದಿರಾ ಮೋಣಪ್ಪ, ಲೋಕೇಶ್ವರಿ ಗೋಪಾಲ್, ಸವಿತಾ ಸತೀಶ್, ಶ್ರೀನಿಧಿ ಲಿಂಗಪ್ಪ, ನತೀಶ್ ಮಂದಣ್ಣ, ಮಾವಾಜಿ ರಕ್ಷಿತ್, ದಿವಾಕರ್, ಹೆಚ್.ಸಿ. ರಾಮಕೃಷ್ಣ, ಕೆಂಚೇಶ್ವರ್, ಪ್ರವೀಣ್, ಜಗದೀಶ್, ಪ್ರಕಾಶ್, ಪೂರ್ಣಿಮಾ, ತೇಜಸ್ವಿನಿ, ಹರೀಶ್, ವಿಜಯಕುಮಾರ್, ಪ್ರಜಾ ಪೂಣಚ್ಚ ಸೇರಿದಂತೆ ಇತರರು ಇದ್ದರು.