ಶ್ರೀಮಂಗಲ, ಡಿ. ೨೯: ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ೧೯೭೮ ರಿಂದ ೧೯೮೩ರ ನಡುವೆ ಪದವಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸ ಮಾಡಿದ ಉಪನ್ಯಾಸಕರ ಸಂತೋಷ ಕೂಟ ಗೋಣಿಕೊಪ್ಪ ದುರ್ಗಾ ಬೋಜಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ೯೫ ವಿದ್ಯಾರ್ಥಿಗಳ ಪೈಕಿ ೬೫ ವಿದ್ಯಾರ್ಥಿಗಳು ಸೇರಿ ಎಲ್ಲಾ ಉಪನ್ಯಾಸಕರನ್ನು ಸ್ಮರಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಇಂಗ್ಲಿಷ್ ಉಪನ್ಯಾಸಕರಾದ ಪ್ರೊ. ಸತ್ಯನ್, ಪ್ರೊ.ಬಿದ್ದಂಡ ಸರೋಜಿನಿ ಅಚ್ಚಪ್ಪ,ಪ್ರೊ. ಚೇಂದAಡ ಅಕ್ಕಮ್ಮ, ಪ್ರೊ.ಬಿ. ಆರ್. ಕೃಷ್ಣಯ್ಯ, ಪ್ರೊ. ಬೊಳ್ಳಮ್ಮ ಪ್ರೊ.ಇಟ್ಟಿರ ಬಿದ್ದಪ್ಪ, ಪ್ರೊ.ಮೂಕಳಮಾಡ ಮೊಣ್ಣಪ್ಪ,ಪ್ರೊ. ಕುಲ್ಲಚಂಡ ಇಂದ್ರಬಾಲ, ಡಾ. ನಾಯಕ್, ಪ್ರೊ. ಈರಪ್ಪ, ಪ್ರೊ. ಪೆಮ್ಮಂಡ ಚಂಗಪ್ಪ, ಪ್ರೊ. ಸುಬ್ರಮಣಿ, ಪ್ರೊ. ಅಡಿಗ ಇವರನ್ನು ಸನ್ಮಾನಿಸಲಾಯಿತು. ಮೃತಪಟ್ಟ ಉಪನ್ಯಾಸಕರಾದ ಅಡ್ಡೇಂಗಡ ಬೋಸ್, ಚೆಟ್ರುಮಾಡ ಮುತ್ತಣ್ಣ, ಸಿ.ಬಿ. ದೇವಯ್ಯ, ದೊರೆಸ್ವಾಮಿ, ಚೆಟ್ರುಮಾಡ ಭೀಮಯ್ಯ, ಸಿ. ಕೆ. ಗಣಪತಿ ಹಾಗೂ ಮೃತಪಟ್ಟ ಮೂವರು ವಿದ್ಯಾರ್ಥಿಗಳಿಗೆ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು.