ವೀರಾಜಪೇಟೆ, ಡಿ. ೩೦: ಕೇರಳ ಕಣ್ಣೂರು ಜಿಲ್ಲೆಯ ಇರಟ್ಟಿಯ ಉಳಿಕಲ್‌ನಲ್ಲಿ ಕೇರಳಿಗರು ಹಾಗೂ ಕೊಡಗಿನ ಜನರು ಒಂದಾಗಿ ಸೇರಿ ನಡೆಸುವ ವಿಶಿಷ್ಟ ಹಬ್ಬವಾದ ಆದಿ ಬೈತೂರಪ್ಪನ ವಾರ್ಷಿಕ ಉತ್ಸವದ ಕೋಮರತಚ್ಚನ್ ಕೊಡಗು ಭೇಟಿಗೆ ಕೇರಳದ ಬೈತೂರು ದೇವಾಲಯದಲ್ಲಿ ಶಾಸ್ತೊçÃಕ್ತವಾಗಿ ಚಾಲನೆ ನೀಡಲಾಯಿತು. ಹಬ್ಬದ ಭಾಗವಾಗಿ, ಕೋಮರತಚ್ಚನ್ ಮಂಗಳವಾರ ಬೆಳಿಗ್ಗೆ ಊಟರಿಪುö್ಪವಿನೊಂದಿಗೆ ಕೊಡಗಿಗೆ ತೆರಳಿದರು. ಕೋಮರತಚ್ಚನ್ ರಾಜನ್ ನಂಬಿಯಾರ್ ಹಲವು ವರ್ಷಗಳಿಂದ ಭಕ್ತಿಯಿಂದ ಕೊಡಗಿಗೆ ಬರುತ್ತಿದ್ದು ಅವರನ್ನು ಪುಗ್ಗೇರ ಕುಟುಂಬದ ತಕ್ಕರು ಸ್ವಾಗತಿಸುತ್ತಾರೆ. ಹಾಗೆಯೇ ಇಲ್ಲಿ ಹಲವು ದೇವಸ್ಥಾನಗಳಿಗೆ ಭೇಟಿ ನೀಡುವ ಅವರನ್ನು ಪ್ರತಿ ಕುಟುಂಬದ ಸದಸ್ಯರು ಪ್ರತಿದಿನ ಸ್ವಾಗತಿಸುತ್ತಾರೆ. ಮಂಗಳವಾರ ಬೆಳಿಗ್ಗೆ ದೇವಾಲಯದಲ್ಲಿ ವಿವಿಧ ಪೂಜಾ ಪುನಸ್ಕಾರಗಳು, ಅಭಿಷೇಕದ ನಂತರ ಚೆಂಬುಕೊಟ್ಟಿಪರಕ್ಕೆ ತೆರಳಿದ್ದ ಕೋಮರತಚ್ಚನ್ ಅವರೊಂದಿಗೆ ಆಡಳಿತ ಮಂಡಳಿಯ ಸದಸ್ಯರಾದ ಬಿ. ದಿವಾಕರನ್, ಕೆ.ವಿ. ಶಾಜಿ, ಆಚರಣಾ ಸಮಿತಿ ಅಧ್ಯಕ್ಷ ಬಿನುಪುತುಸ್ಸೇರಿ, ಸದಸ್ಯರಾದ ಬಾಬು ಗುರುಕ್ಕಲ್, ನಿಧಿಶ್, ಆದಿತ್ಯನ್, ಅವಿನಾಶ್ ಬೈತೂರು ದೇವಸ್ಥಾನದ ನೌಕರರಾದ ಜಯನ್ ಬೈತೂರು ಮತ್ತು ಪ್ರವೀಣ್ ಕುಮಾರ್ ಇದ್ದರು. ಕೋಮರತಚ್ಚನ್ ಕೊಡಗಿನಲ್ಲಿ ಎಲ್ಲಾ ದೇವಾಲಯಗಳಿಗೆ ಭೇಟಿ ನೀಡಿ ಹಿಂದಿರುಗಿದ ನಂತರ ಜನವರಿ ೧೩ ರಂದು ಸಂಜೆ ೭.೩೦ಕ್ಕೆ ತಿರುವತ್ತಳಕ್ಕೆ ಅಕ್ಕಿ ಅಳತೆಯೊಂದಿಗೆ ಉತ್ಸವ ಪ್ರಾರಂಭವಾಗುತ್ತದೆ.
ಇಂದು ಕೋಮರತಚ್ಚನ್ ಹೆಗ್ಗಳ ಭಗವತಿ ಅಯ್ಯಪ್ಪ ದೇವಾಲಯಕ್ಕೆ ಆಗಮಿಸಿ ಅಲ್ಲಿ ವಾಸ್ತವ್ಯ ಹೂಡಿದ್ದಾರೆ. ತಾ. ೩೧ ರಂದು (ಇಂದು) ಭಕ್ತರಿಗೆ ಆಶೀರ್ವಾದ ನೀಡಿ ಬಳಿಕ ಪುಗ್ಗೆರ ನಂದಾ ಗಣಪತಿ ಅವರ ಮನೆಗೆ ತೆರಳಿ ಸಂಜೆ ಕುಕ್ಲೂರು ಮಾಳೇಟಿರ ಐನ್‌ಮನೆ, ಚೆಂಬೆಬೆಳ್ಳೂರು ಕೊಳುವಂಡ ಐನ್‌ಮನೆಗೆ ತೆರಳಿ ಸಂಜೆ ಈಶ್ವರ ದೇವಾಲಯದಲ್ಲಿ ವಾಸ್ತವ್ಯ. ಜನವರಿ ೧ ರಂದು ಪೂರ್ವಾಹ್ನ ದೇವಣಗೇರಿ ಮುಕ್ಕಾಟಿರ ಐನ್‌ಮನೆಗೆ ಭೇಟಿ ನೀಡಿ ದೇವಣಗೇರಿ ಈಶ್ವರÀ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹಾಲುಗಂದ ಗ್ರಾಮದಲ್ಲಿ ವಾಸ್ತವ್ಯ. ಜನವರಿ ೨ ರಂದು ಹಾಲುಗುಂದ ಗ್ರಾಮದ ಭಗವತಿ ದೇವಾಲಯದಲ್ಲಿ ಪೂಜೆ ನಂತರ ಮೈತಾಡಿ ಚಪ್ಪಂಡ ಐನ್‌ಮನೆಯಲ್ಲಿ ವಾಸ್ತವ್ಯ. ಜನವರಿ ೩ ರಂದು ಪೂರ್ವಾಹ್ನ ಮೈತಾಡಿ ಅಯ್ಯಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಐಚೇಟ್ಟಿರ ಐನ್‌ಮನೆಗೆ ಭೇಟಿ ನೀಡಿ ಮೈತಾಡಿ ಬೇರೆರ ಐನ್‌ಮನೆ ಭೇಟಿ, ನಂತರ ಕುಂಜಿಲಗೇರಿ ಗ್ರಾಮದ ಮುಕ್ಕಾಟಿರ ಐನ್‌ಮನೆಯಲ್ಲಿ ವಾಸ್ತವ್ಯ. ಜನವರಿ ೪ ರಂದು ಮಾತಂಡ ಐನ್‌ಮನೆ, ಬಲ್ಲಚಂಡ ಐನ್‌ಮನೆಗೆ ಭೇಟಿ ನೀಡಿ ರಾತ್ರಿ ಕೆದಮುಳ್ಳೂರು ಈಶ್ವರ ದೇವಾಲಯದಲ್ಲಿ ವಾಸ್ತವ್ಯ, ಜನವರಿ ೫ ರಂದು ಪಾಲೆಕಂಡ ಐನ್‌ಮನೆಗೆ ಭೇಟಿ ನೀಡಿ ಕೆದಮುಳ್ಳೂರು ಈಶ್ವರ ದೇವಾಲಯದಲ್ಲಿ ವಾಸ್ತವ್ಯ. ಜನವರಿ ೬ ರಂದು ಕೆದಮುಳ್ಳೂರು ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕದನೂರು ಗ್ರಾಮದ ಭಗವತಿ ದೇವಾಲಯಕ್ಕೆ ಭೇಟಿ ನೀಡಿ ಮಗ್ಗುಲದ ಚೋಕಂಡ ಐನ್‌ಮನೆಗೆÀ ಭೇಟಿ ನೀಡಿ ಅಯ್ಯಪ್ಪ ದೇವಾಲಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜನವರಿ ೭ ರಂದು ವೀರಾಜಪೇಟೆ ಗಣಪತಿ ದೇವಾಲಯ, ಮಡಿಕೇರಿಯ ಓಂಕಾರೇಶ್ವರ ದೇವಾಲಯ, ಕೋಟೆ ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಕೊಡಂದೇರ ಐನ್‌ಮನೆಯಲ್ಲಿ ವಾಸ್ತವ್ಯ. ಜನವರಿ ೮ ರಂದು ಹಳ್ಳಿಗಟ್ಟು ಭದ್ರಕಾಳಿ ದೇವಾಲಯಕ್ಕೆ ತೆರಳಿ ಕೊಕ್ಕಂಡ ಐನ್‌ಮನೆ, ಮುರುವಂಡ ಐನ್‌ಮನೆ, ಬಿಟ್ಟಂಗಾಲದ ಕಾಮೇಯಂಡ ಐನ್‌ಮನೆಗೆ ತೆರಳಿ ಮಾಚೇಟಿರ ಐನ್‌ಮನೆಯಲ್ಲಿ ವಾಸ್ತವ್ಯ. ಜನವರಿ ೯ ರಂದು ಬಾಳುಗೋಡುವಿನ ಭದ್ರಕಾಳಿ ದೇವಾಲಯದಲ್ಲಿ ಪೂಜೆ ಬಳಿಕ ಮೂರಿರ ಐನ್‌ಮನೆ, ಅಮ್ಮಣಕುಟ್ಟಂಡ ಐನ್ ಮನೆಗೆ ಭೇಟಿ ನೀಡಿ ಬಳಿಕ ಬೈತೂರು ದೇವಾಲಯಕ್ಕೆ ತೆರಳಲಿದ್ದಾರೆ. ಜ. ೧೩ ರಿಂದ ೨೬ ರವರೆಗೆ ಉತ್ಸವ ನಡೆಯಲಿದ್ದು ಇದರ ದೊಡ್ಡ ಹಬ್ಬ ಪತ್ತೂಟ್ (ಹತ್ತು ಊಟ) ಜ. ೨೪ ರಂದು ನಡೆಯಲಿದೆ.