ಮಡಿಕೇರಿ, ಡಿ. ೩೦: ಅಕ್ರಮ ಮಾದಕ ವಸ್ತು ಸರಬರಾಜು ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗು ಜಿಲ್ಲಾ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿ ನಿಷೇಧಿತ ಎಂಡಿಎAಎ ಮಾದಕ ವಸ್ತುವನ್ನು ವಶಪಡಿಸಿಕೊಂಡು ಈ ಸಂಬAಧ ಐವರು ಆರೋಪಿಗಳನ್ನು ಬಂದಿಸಿದ್ದಾರೆ. ಜಿಲ್ಲೆ, ಹೊರಜಿಲ್ಲೆ, ಹೊರರಾಜ್ಯಗಳಿಂದ ಪ್ರವಾಸದ ನಿಮಿತ್ತ ಕೊಡಗು ಜಿಲ್ಲೆಗೆ ಆಗಮಿಸಿ ಹೋಂಸ್ಟೇ, ರೆಸಾರ್ಟ್, ಲಾಡ್ಜ್ಗಳಲ್ಲಿ ತಂಗಲು ಬರುವ ಪ್ರವಾಸಿಗರು ರೇವ್ ಪಾರ್ಟಿ ನೆಪದಲ್ಲಿ ನಿಷೇಧಿತ ಮಾದಕ ವಸ್ತುಗಳ ಸರಬರಾಜು, ಮಾರಾಟ ಹಾಗೂ ಬಳಕೆ ಮಾಡುವದನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಹಾಗೂ ಕುಶಾಲನಗರ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡು ಐವರು ಆರೋಪಿಗಳನ್ನು ಬಂದಿಸಿ ಅವರುಗಳಿಂದ ೧೬.೯೭ಗ್ರಾಂ ಎಂಡಿಎಎAಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಸುಂಟಿಕೊಪ್ಪದ ಎಸ್.ಎಂ. ತೌಶಿದ್ (೨೪), ಎಸ್.ಎಂ. ನೌಶದ್ (೨೩), ಅದ್ನಾನ್(೨೫), ಕುಶಾಲನಗರದ ನೌಶೀಫ್ (೨೩), ಮೈಸೂರು ವಿದ್ಯಾರಣ್ಯಪುರಂನ (ಕ್ಷೇವಿಯರ್(೪೦) ಬಂದಿತ ಆರೋಪಿಗಳು. ಇದರೊಂದಿಗೆ ಈವರೆಗೆ ಸುಂಟಿಕೊಪ್ಪ ಹಾಗೂ ಕುಶಾಲನಗರ ಠಾಣೆಯಲ್ಲಿ ೧೬ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಲಲಾಗಿದ್ದು, ಒಟ್ಟು ೫೭ ಮಂದಿ ಆರೋಪಿಗಳನ್ನು ಬಂದಿಸಿ ಕಾನೂನು ಕ್ರಮ ಕೈಗೊಂಡಿರುವದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸೊಮವಾರಪೇಟೆ ಡಿಎಸ್ಪಿ ಚಂದ್ರಶೇಖರ್, ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್‌ಕುಮಾರ್, ಠಾಣಾಧಿಕಾರಿಗಳಾದ ರಾಮಚಂದ್ರ, ಠಾಣಾಧಿಕಾರಿ ಹೆಚ್.ಸಿ. ಸ್ವಾಮಿ, ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್‌ರಾಜು, ಕುಶಾಲನಗರ ನಗರ ಠಾಣಾಧಿಕಾರಿಗಳಾದ ಶಿವಣ್ಣ, ಗೀತಾ, ಸಿಬ್ಬಂದಿಗಳಾದ ವೆಂಕಟೇಶ, ಡಿಂಪಲ್, ಹೊನ್ನರಾಜಪ್ಪ, ಪ್ರವೀಣ, ಜೀವನ್, ಶಿವಣ್ಣ, ಸುನಿಲ್, ಶಿವರಾಜ್, ಜಾವಿದ್, ಶಶಿಕುಮಾರ್ ಪಾಲ್ಗೊಂಡಿದ್ದರು.