ಮಡಿಕೇರಿ, ಜ. ೨: ಅಂಜಿಗೇರಿ ನಾಡ್ ಕೂಟ - ಹುದಿಕೇರಿಯ ನೂತನ ಅಧ್ಯಕ್ಷರಾಗಿ ಬಯವಂಡ ಪ್ರತು ಪೂವಣ್ಣ ಹಾಗೂ ಕಾರ್ಯದರ್ಶಿಯಾಗಿ ಚೆಕ್ಕೇರ ಆದರ್ಶ್ ಆಯ್ಕೆಯಾಗಿದ್ದಾರೆ. ಅಂಜಿಗೇರಿ ನಾಡ್ ಕೂಟದ ವಾರ್ಷಿಕ ಮಹಾಸಭೆಯನ್ನು ಕುಶಾಲನಗರದ ಖಾಸಗಿ ಹೊಟೇಲಿನಲ್ಲಿ ನಡೆಸಲಾಯಿತು.

ಸಭೆಯಲ್ಲಿ ಅಂಜಿಗೇರಿ ನಾಡ್ ಕೂಟದ ಸದಸ್ಯರು ಪಾಲ್ಗೊಂಡು ಈವರೆಗೆ ನಡೆದ ಕಾರ್ಯಗಳ ಬಗ್ಗೆ ಚರ್ಚಿಸಿ ವಿಮರ್ಶಿಸಲಾಯಿತು. ಮುಂದಿನ ದಿನಗಳಲ್ಲಿ ನಡೆಯಲಿರುವ ಕಾರ್ಯಗಳ ಬಗ್ಗೆ ಯೋಜನೆ ರೂಪಿಸಲಾಯಿತು.

ಈ ಸಂದರ್ಭ ಸಂಘದ ಮುಂದಿನ ಅಧ್ಯಕ್ಷರಾಗಿ ಬಯವಂಡ ಪ್ರತು ಪೂವಣ್ಣ ಹಾಗೂ ಮುಂದಿನ ಕಾರ್ಯದರ್ಶಿಯಾಗಿ ಚೆಕ್ಕೇರ ಆದರ್ಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

೨೦೧೬ ರಿಂದ ಸಮಾಜಮುಖಿಯಾಗಿ, ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅಂಜಿಗೇರಿ ನಾಡ್ ಕೂಟ, ಈಗಾಗಲೇ ಹಲವು ಕಾರ್ಯಕ್ರಮಗಳನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ವಿಶ್ವಾಸದಲ್ಲಿ ಪಾಲ್ಗೊಳ್ಳುವ ಭರವಸೆಯನ್ನು ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.