ಸೋಮವಾರಪೇಟೆ, ಜ. ೨: ಕರ್ನಾಟಕ ರೈತ ಸಂಘ ಹಾಗೂ ದಲಿತ ಆದಿವಾಸಿ ಕೃಷಿ ಕಾರ್ಮಿಕ ಸಂಘದ ವತಿಯಿಂದ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಆದಿವಾಸಿಗಳಿಗೆ ಮೂಲ ದಾಖಲೆಗಳಾದ ಪಡಿತರ ಚೀಟಿ, ಆಧಾರ್ ಕಾರ್ಡ್, ಮನೆ ನಿವೇಶನ, ಭೂಮಿ ಹಕ್ಕು, ಕುಡಿಯುವ ನೀರು, ಸಾಲ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಪದಾಧಿಕಾರಿಗಳು ಮನವಿ ಮಾಡಿದರು. ವಿವಿಧ ಗ್ರಾಮ ಮತ್ತು ಹಾಡಿಗಳಲ್ಲಿ ವಾಸ ಮಾಡುತ್ತಿ ರುವ ಆದಿವಾಸಿಗಳಿಗೆ ಸರ್ಕಾರ ಹೊಸ ಪಡಿತರ ಚೀಟಿಯನ್ನು ಕಳೆದ ೫ ವರ್ಷಗಳಿಂದ ನೀಡದ ಕಾರಣ ಹೆಚ್ಚಿನವರಿಗೆ ಪಡಿತರ ಪಡೆಯಲು ಸಾಧ್ಯ ವಾಗುತ್ತಿಲ್ಲ. ದಾಖಲಾತಿಗಳು ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರದ ಯಾವುದೇ ಯೋಜನೆಗಳು ನಮಗೆ ತಲುಪುತ್ತಿಲ್ಲ. ಆದ್ದರಿಂದ ಸಂಬAಧಿಸಿದ ಅಧಿಕಾರಿಗಳಿಗೆ ಸರಳ ಮಾರ್ಗದಲ್ಲಿ ಮೂಲ ದಾಖಲೆ ಗಳನ್ನು ಒದಗಿಸಿಕೊಡಲು ಸೂಚನೆ ನೀಡಬೇಕೆಂದು ಮುಖಂಡರು ಒತ್ತಾಯಿಸಿದರು.
ಬ್ಯಾಡಗೊಟ್ಟದಲ್ಲಿ ೩೫೪ ಕುಟುಂಬಗಳಿದ್ದು, ಈ ಸ್ಥಳಕ್ಕೆ ಮೂಲಭೂತ ಸೌಕರ್ಯ ಒದಗಿಸಬೇಕು. ೭೦ ಮನೆಗಳು ಇಂದಿಗೂ ಪಾಳು ಬಿದ್ದಿವೆ, ಬಸವನಳ್ಳಿಯಲ್ಲೂ ಸಹ ಇದೇ ಪರಿಸ್ಥಿತಿ ಇದ್ದು, ಕೂಡಲೇ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದರು. ಈ ಸಂದರ್ಭ ದಲಿತ ಆದಿವಾಸಿ ಸಂಘದ ಜಿಲ್ಲಾಧ್ಯಕ್ಷ ಮುತ್ತ, ರೈತ ಸಂಘದ ವಳಗುಂದ ಕುಮಾರ, ವೈ.ಎಂ. ಸುರೇಶ ಸೇರಿದಂತೆ ಇತರರು ಇದ್ದರು. ಮನವಿ ಸ್ವೀಕರಿಸಿದ ಶಾಸಕರು, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.