ವೀರಾಜಪೇಟೆ, ಜ. ೨: ತಾಲೂಕಿನ ನಲ್ವತೋಕ್ಲು ಗ್ರಾಮದ ಚೋಕಂಡಳ್ಳಿಯಲ್ಲಿ ೩ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ನಡೆಯಿತು. ಮುಖ್ಯ ಅತಿಥಿಯಾಗಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭಾಗವಹಿಸಿದ್ದರು.
ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ದೇಹದ ಸ್ವಾಸ್ಥö್ಯವನ್ನು ಕಾಪಾಡಿಕೊಳ್ಳಲು ವಾಲಿಬಾಲ್ ಉತ್ತಮ ಆಟವಾಗಿದೆ. ಬುದ್ಧಿವಂತಿಕೆ, ಚುರುಕು ಹಾಗೂ ಒಗ್ಗಟ್ಟಿನ ಆಟ ಇದಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ತಾಲೂಕು ಅಲ್ಪಸಂಖ್ಯಾತರ ಘಟದ ಅಧ್ಯಕ್ಷ ಕೊಳುಮಂಡ ರಫೀಕ್, ಪ್ರಮುಖರಾದ ಆಲಿ ಹಾಜಿ, ಬಿಳುಗುಂದ ಪಂಚಾಯಿತಿ ಮಾಜಿ ಸದಸ್ಯ ಕಾವೇರಪ್ಪ, ಮಾಜಿ ಪುರಸಭೆ ಸದಸ್ಯರಾದ ರಾಫಿ, ಮತೀನ್ ಹಾಗೂ ಶೈಯದ್ ಉಪಸ್ಥಿತರಿದ್ದರು.