ಚೆಯ್ಯಂಡಾಣೆ, ಜ. ೨: ವೀರಾಜಪೇಟೆಯ ಅನ್ವಾರುಲ್ ಹುದಾ ಸೌದಿ ಅರೇಬಿಯಾ ರಾಷ್ಟಿçÃಯ ಸಮಿತಿಯ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ರಿಯಾದ್‌ನ ಸ್ವಾದ್ ರೆಸ್ಟೋರೆಂಟ್ ಸಭಾಂಗಣದಲ್ಲಿ ರಾಷ್ಟಿçÃಯ ಸಮಿತಿಯ ಅಧ್ಯಕ್ಷ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಷಂಶುದ್ದೀನ್ ಮುಸ್ಲಿಯಾರ್ ಚಾಮಿಯಾಲ ಉದ್ಘಾಟಿಸಿ ಮಾತನಾಡಿದರು.
ಅನ್ವಾರುಲ್ ಹುದಾ ಶಿಲ್ಪಿ ಹಾಗೂ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಶೈಖುನಾ ಅಶ್ರಫ್ ಅಹ್ಸನಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ರಾಷ್ಟಿçÃಯ ಸಮಿತಿ ಸಂಸ್ಥೆಗೆ ನೀಡಿದ ಸಹಾಯ, ಸಹಕಾರವನ್ನು ಶ್ಲಾಘಿಸಿ, ಇನ್ನು ಮುಂದೆಯೂ ಕೂಡ ಇದೆ ರೀತಿಯ ಸಹಕಾರ ಇರಲಿ ಎಂದರು.
ನAತರ ಅಶ್ರಫ್ ಅಹ್ಸನಿಯವರ ನೇತೃತ್ವದಲ್ಲಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆದು ನೂತನ ಅಧ್ಯಕ್ಷರಾಗಿ ಹಂಸ ಮುಸ್ಲಿಯಾರ್ ಚೋಕಂಡಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಷಂಶುದ್ದೀನ್ ಮುಸ್ಲಿಯಾರ್ ಪೆರಾತ, ಕೋಶಾಧಿಕಾರಿಯಾಗಿ ಮಜೀದ್ ಚೇರಂಬಾಣೆ, ಉಪಾಧ್ಯಕ್ಷರಾಗಿ ಹಂಸ ಹಾಜಿ ಜಿದ್ದಾ, ಅಬ್ದುಲ್ ರಹ್ಮನ್ ಹಾಜಿ ಅಯ್ಯಂಗೇರಿ, ಜಂಟಿ ಕಾರ್ಯದರ್ಶಿಯಾಗಿ ರಫೀಕ್ ನೆಲ್ಲಿಹುದಿಕೇರಿ, ಅಬೂಬಕ್ಕರ್ ಎಮ್ಮೆಮಾಡು (ದಮಾಮ್), ವರ್ಕಿಂಗ್ ಕಾರ್ಯದರ್ಶಿಯಾಗಿ ಷಂಶುದ್ದೀನ್ ತಕ್ಕಪಳ್ಳಿ (ರಿಯಾದ್) ಅವರನ್ನು ಆಯ್ಕೆ ಮಾಡಲಾಯಿತು.
ರಾಷ್ಟಿçÃಯ ಸಮಿತಿ ಪ್ರಧಾನ ಕಾರ್ಯದರ್ಶಿ ಮಜೀದ್ ಚೇರಂಬಾಣೆ ಸ್ವಾಗತಿಸಿ, ನೂತನ ಕಾರ್ಯದರ್ಶಿ ಷಂಶುದ್ದೀನ್ ಮುಸ್ಲಿಯಾರ್ ವಂದಿಸಿದರು.