ಚೆಟ್ಟಳ್ಳಿ, ಜ. ೨: ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಪುತ್ತರಿ ಊರೊರ್ಮೆ ಕೂಟ ಮಂಗಳ ಸಭಾಂಗಣದಲ್ಲಿ ನಡೆಯಿತು. ಪುರುಷರು ಮಹಿಳೆಯರಿಗೆ ಹಾಗೂ ದಂಪತಿಗಳಿಗೆ ವಿವಿಧ ಮನೋರಂಜನಾ ಕ್ರೀಡೆಯನ್ನು ಆಯೋಜಿಸಲಾಗಿತ್ತು. ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಮಾತನಾಡಿ ಒಡಹುಟ್ಟಿದ ಸಹೋದರರು, ಕುಟುಂಬದವರು ಒಗ್ಗಟ್ಟಾದಾಗ ಮಾತ್ರ ಕೊಡವರ ಉಳಿವು ಸಾಧ್ಯವೆಂದರು. ಎಲ್ಲರೂ ಒಗ್ಗಟ್ಡಿನಿಂದ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕೆಂದರು. ನಿರ್ದೇಶಕರಾದ ಬಟ್ಟೀರ ರಕ್ಷು ಕಾಳಪ್ಪ ಪುತ್ತರಿ ಹಬ್ಬದ ವಿಶೇಷತೆಯ ಬಗ್ಗೆ ವಿವರಿಸಿದರು. ನಂತರ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮಾಜದ ಉಪಾಧ್ಯಕ್ಷ ಬಿದ್ದಂಡ ಮಾದಯ್ಯ, ಕಾರ್ಯದರ್ಶಿ ಪುತ್ತರಿರ ಕಾಳಯ್ಯ, ಜಂಟಿಕಾರ್ಯದರ್ಶಿ ಮುಳ್ಳಂಡ ಶೋಭಾ ಚಂಗಪ್ಪ, ಖಜಾಂಜಿ ಕೆಚ್ಚೆಟ್ಟಿರ ರತಿ ಕಾರ್ಯಪ್ಪ, ಜಂಟಿ ಕಾರ್ಯದರ್ಶಿ ಐಚೆಟ್ಟಿರ ಮಾಚಯ್ಯ, ಕಾನೂನು ಸಲಹೆಗಾರರಾದ ಕಡೇಮಾಡ ವಿನ್ಸಿ ಅಪ್ಪಯ್ಯ, ನಿರ್ದೇಶಕರಾದ ಪುತ್ತರಿರ ಕಾಶಿ ಸುಬ್ಬಯ್ಯ, ಅಡಿಕೇರಿ ಶಾಂತಿ ಮುತ್ತಪ್ಪ, ಬಲ್ಲಾರಂಡ ರಾಜಪ್ಪ, ಮುಳ್ಳಂಡ ಮಾಯಮ್ಮ, ಐಚೆಟ್ಟಿರ ಸುನಿತಾ ಮಾಚಯ್ಯ ಹಾಗೂ ಸಮಾಜದ ಸದಸ್ಯರು ಭಾಗವಹಿಸಿದ್ದರು. ಪಳಂಗಡ ಗೀತಾ ಸುಬ್ಬಯ್ಯ ಪ್ರಾರ್ಥಿಸಿ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಸ್ವಾಗತಿಸಿದರು. ಮುಳ್ಳಂಡ ಶೋಭಾ ಚಂಗಪ್ಪ ವಂದಿಸಿದರು, ರಾಷ್ಟçಗ್ರೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.