ಶನಿವಾರಸAತೆ, ಜ. ೨: ಸಮೀಪದ ಗಡಿಭಾಗ ಹೊಸೂರು ಗ್ರಾಮದ ಮಹಿಯದ್ದೀನ್ ಜುಮಾ ಮಸ್ಜಿದ್ ಹಿದಾಯ ಯೂತ್ ಕಮಿಟಿ ವತಿಯಿಂದ ತಾ. ೪ ರಂದು ಬೆಳಿಗ್ಗೆ ೧೦.೩೦ ರಿಂದ ೧ ಗಂಟೆಯವರೆಗೆ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದೆ. ಖತೀಬರು ಹಾಗೂ ಕಸಾಪ ಸೋಮವಾರಪೇಟೆ ತಾಲೂಕು ಘಟಕದ ನಿರ್ದೇಶಕ ಬಹು ಶಾಫಿ ಸಅದಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಅಲ್ಪಸಂಖ್ಯಾತರ ಕಲ್ಯಾಣ, ವಸತಿ ಹಾಗೂ ವಕ್ಫ್ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಉದ್ಘಾಟಿಸುತ್ತಾರೆ. ಕಕ್ಕಿಂಜೆಯ ಡಾ. ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ. ತಪೋವನ ಕ್ಷೇತ್ರ ಮನೆಹಳ್ಳಿ ಮಠಾಧೀಶ ಮಹಾಂತಶಿವಲಿAಗ ಸ್ವಾಮೀಜಿ ಹಾಗೂ ಗೋಪಾಲಪುರ ಸಂತ ಅಂಥೋಣಿ ಚರ್ಚ್ನ ರೆವೆರೆಂಡ್ ಫಾದರ್ ಕ್ರಿಸ್ಟೋಫರ್ ಸಗಯರಾಜ್ ಸಂದೇಶ ಭಾಷಣ ಮಾಡಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಹಾಸನ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್, ಸಕಲೇಶಪುರ ಕ್ಷೇತ್ರದ ಶಾಸಕ ಮಂಜು ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಪಾಲ್ಗೊಳ್ಳುತ್ತಾರೆ.

ಸಾಮಾಜಿಕ ಚಿಂತಕ ನಿಕೇತ್ ರಾಜ್ ಮೌರ್ಯ ಪ್ರಾಸ್ತಾವಿಕ ನುಡಿಯಾಡುತ್ತಾರೆ. ಹೊಸಕೋಟೆ ಖಾಸಿಂ, ವಿಶೇಷ ಗಣ್ಯರಾದ ಮುರಳಿ ಮೋಹನ್, ಹೆಚ್.ಕೆ. ಕುಮಾರಸ್ವಾಮಿ, ಪ್ರತಾಪ ಗೌಡ್ರು, ಪ್ರದೀಪ್, ಸಂಪತ್ ಸುಬ್ಬಯ್ಯ, ಕೆ.ಎ. ಆದಂ ಹಾಜಿ, ವೈರಮುಡಿ ಚಂದ್ರು, ಜಿ.ಕೆ. ಪಾಟೀಲ್, ಸಲೀಂ ಹಾಜಿ, ಅಬ್ದುಲ್ ಮಜೀದ್, ಸೈಯ್ಯದ್ ಮುಫೀಝ್, ಹೆಚ್.ಹೆಚ್. ಉದಯ್, ಯಾಕೂಬ್, ಯಾದಗಾರ್, ಹಸೈನಾರ್, ಸಲೀಂಕೊಲ್ಲಳ್ಳಿ, ವಿರೇಶ್ ಹೊಲ್ಲಹಳ್ಳಿ, ಹೆಚ್.ಪಿ. ಮೊಹಮ್ಮದ್ ಮತ್ತಿತರ ಪ್ರಮುಖರು ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ.

ಮಾಜಿ ಯೋಧರಾದ ಪ್ರದೀಪ್, ದಿಲೀಪ್ ಕುಮಾರ್, ಕುಮಾರ್, ರವಿ ಪೂಜಾರಿ, ಯೋಧರಾದ ಹನೀಫ್ ಹಾಗೂ ಗಿರೀಶ್ ಅವರನ್ನು ಸನ್ಮಾನಿಸಲಾಗುವುದು. ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದು ಮುಹಿಯದ್ದೀನ್ ಜುಮಾ ಮಸ್ಜಿದ್ ಹಿದಾಯ ಯೂತ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.