ಮಡಿಕೇರಿ, ಜ. ೪: ವೀರ ಬಾಲ ದಿವಸ್ ಅಂಗವಾಗಿ ಗಾಳಿಬೀಡು ಅಂಗನವಾಡಿ ಕೇಂದ್ರದ ಮಕ್ಕಳೊಂದಿಗೆ ಅಮೃತ ಸರೋವರ ಚಪ್ಪಂಡ ಕೆರೆಗೆ ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್, ಅಂಗನವಾಡಿ ಕಾರ್ಯಕರ್ತೆ ವೈ. ಜಯಂತಿ, ಧರಣಿ, ಸಹಾಯಕಿ ವಿದ್ಯಾಶ್ರೀ ತೆರಳಿ ಮಕ್ಕಳಿಗೆ ಸ್ವಚ್ಛತೆ, ನೀರಿನ ಸದ್ಬಳಕೆ, ಸುಂದರ ಪರಿಸರದ ಅವಲೋಕನ, ವಿವಿಧ ಬಣ್ಣದ ತಾವರೆ ಹೂಗಳ ಪರಿಚಯ ಮಾಡಿಕೊಡಲಾಯಿತು.

ನಂತರ ಅಂಗನವಾಡಿ ಕೇಂದ್ರದಲ್ಲಿ ಕ್ಲೀನ್ ಇಂಡಿಯಾ ಗ್ರೀನ್ ಇಂಡಿಯಾ ವಿಷಯವಾಗಿ ಚಿತ್ರಕ್ಕೆ ಬಣ್ಣಗಳನ್ನು ಹಚ್ಚುವ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಿ, ಮಕ್ಕಳಲ್ಲಿ ಅರಿವು ಮೂಡಿಸಲಾಯಿತು.