ಮಡಿಕೇರಿ, ಜ. ೩: ಚೇನಂಡ ಕುಟುಂಬದ ವತಿಯಿಂದ ಏಪ್ರಿಲ್ ೫ ರಿಂದ ಆರಂಭಗೊಳ್ಳಲಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವ ಅಂಗವಾಗಿ ಆಯೋಜಿಸಿದ್ದ ಅಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಾಕಿ ಪಂದ್ಯಾವಳಿಯ ಫೈನಲ್ಸ್ ತಾ. ೪ ರಂದು (ಇಂದು) ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹಾಕಿ ಸಮಿತಿ ಕಾರ್ಯದರ್ಶಿ ಚೇನಂಡ ಮಧು ಮಾದಯ್ಯ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಮುದ್ದಂಡ ಕುಟುಂಬ ಯಶಸ್ವಿಯಾಗಿ ಕೊಡವ ಕೌಟುಂಬಿಕ ಹಾಕಿ ನಮ್ಮೆ ಆಯೋಜಿಸಿದೆ. ೨೬ನೇ ವರ್ಷದ ಆತಿಥ್ಯ ಚೇನಂಡ ಕುಟುಂಬ ವಹಿಸಿಕೊಂಡಿದ್ದು, ಪಂದ್ಯಾವಳಿಯೊAದಿಗೆ ಸಾಮಾಜಿಕ ಚಟುವಟಿಕೆಯನ್ನು ನಡೆಸಲಾಗುತ್ತಿದೆ. ಈಗಾಗಲೇ ‘ಕಾಡು ಬೆಳೆಸಿ, ಪರಿಸರ ಉಳಿಸಿ’ ಎಂಬ ಘೋಷವಾಕ್ಯದಲ್ಲಿ ಗಿಡ ನೆಡುವ ಕೆಲಸವಾಗುತ್ತದೆ. ಪಂದ್ಯ ಆರಂಭದ ನಂತರ ‘ಗೋಲಿಗೊಂದು ಗಿಡ’ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುವುದು ಎಂದರು.
ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ತಾ. ೧ ರಿಂದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ, ಬಾಲಕಿಯರ ಹಾಕಿ ಪಂದ್ಯಾವಳಿ ಆರಂಭವಾಗಿದೆ. ೩೪ ತಂಡಗಳು ಪಂದ್ಯದಲ್ಲಿ ಭಾಗವಹಿಸಿದ್ದು, ತಾ. ೪ ರಂದು ಫೈನಲ್ಸ್ ನಡೆಯಲಿದೆ. ಫೈನಲ್ ಪಂದ್ಯಾವಳಿ ಬೆಳಿಗ್ಗೆ ೧೧ ಗಂಟೆಗೆ ಆರಂಭವಾಗಲಿದ್ದು, ಕೂಡಿಗೆ ಹಾಗೂ ಡಿವೈಇಎಸ್ ಕ್ರೀಡಾ ವಸತಿ ಶಾಲಾ ತಂಡದೊAದಿಗೆ ಪ್ರದರ್ಶನ ಪಂದ್ಯ ಆಯೋಜಿಸಲಾಗಿದೆ. ಸಮಾರೋಪ ಸಮಾರಂಭಕ್ಕೆ ಮುಖ್ಯಮಂತ್ರಿ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಮೂರ್ನಾಡು ಗ್ರಾ.ಪಂ. ಅಧ್ಯಕ್ಷ ಕುಶನ್ ರೈ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ವಿಸ್ಮಯಿ, ಹಾಕಿ ಕೂರ್ಗ್ ಅಧ್ಯಕ್ಷ ಲವಕುಮಾರ್, ಮೂರ್ನಾಡು ಎಜುಕೇಷನ್ ಸೊಸೈಟಿ ಅಧ್ಯಕ್ಷ ಜಗತ್ ತಿಮ್ಮಯ್ಯ, ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ವಿಲ್ಮಾ ಅವರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ತೋರುವ ೩೦ ಉತ್ತಮ ಹಾಕಿ ಪಟುಗಳನ್ನು ಆಯ್ಕೆ ಮಾಡಿ, ಕೌಟುಂಬಿಕ ಹಾಕಿ ಪಂದ್ಯದ ವೇಳೆ ವಿಶೇಷ ಶಿಬಿರ ಕೈಗೊಂಡು ತರಬೇತಿ ನೀಡಲಾಗುವುದು. ಈ ಪೈಕಿ ೧೨ ಹಾಕಿ ಪಟುಗಳಿಗೆ ಬೇಕಾದ ಕ್ರೀಡಾ ಪರಿಕರ ವಿತರಣೆಯೊಂದಿಗೆ ಕ್ರೀಡಾ ವಸತಿ ಶಾಲೆಗಳಿಗೆ ಸೇರ್ಪಡೆಗೊಳಿಸಲು ಸಹಾಯ ಮಾಡಿ ರಾಷ್ಟç, ಅಂತರರಾಷ್ಟಿçÃಯ ಮಟ್ಟದಲ್ಲಿ ಸಾಧನೆಗೈಯಲು ಪೂರಕ ಸಹಕಾರ ನೀಡಲಾಗುವುದು ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಹಾಕಿ ಸಮಿತಿ ಅಧ್ಯಕ್ಷ ಚೇನಂಡ ಕಂಬಣಿ ಕರುಂಬಯ್ಯ, ಜಂಟಿ ಕಾರ್ಯದರ್ಶಿ ತಮ್ಮಿ ತಮ್ಮಯ್ಯ ಹಾಜರಿದ್ದರು.