ಮಡಿಕೇರಿ, ಜ. ೩: ಸ್ವಾಮಿ ವಿವೇಕಾನಂದರ ೧೬೪ನೇ ಜನ್ಮ ದಿನಾಚರಣೆಯ ಅಂಗವಾಗಿ (ರಾಷ್ಟಿçÃಯ ಯುವ ದಿನಾಚರಣೆ) ಕೊಡಗು ಜಿಲ್ಲೆಯ ಯುವ ಜನರಿಗಾಗಿ ಸ್ವಾಮಿ ವಿವೇಕಾನಂದರ ಆದರ್ಶಗಳು ಮತ್ತು ಯುವಜನತೆ ಎಂಬ ವಿಷಯದ ಕುರಿತು ಜಿಲ್ಲಾ ಮಟ್ಟದ ಲೇಖನ ಸ್ಪರ್ಧೆ ನಡೆಯಲಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ತಿಳಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗು, ಮೈ ಭಾರತ್ ಕೊಡಗು. ಮಡಿಕೇರಿ, ಕೊಡಗು ಜಿಲ್ಲಾ ಯುವ ಒಕ್ಕೂಟ ಕೊಡಗು, ಮಡಿಕೇರಿ, ವೀರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕು ಯುವ ಒಕ್ಕೂಟಗಳ ಸಂಯುಕ್ತಾ ಆಶ್ರಯದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು ೧೫ ವರ್ಷ ಮೇಲ್ಪಟ್ಟು ೨೯ ವರ್ಷದೊಳಗಿನವರಾಗಿರಬೇಕು. ಲೇಖನದೊಂದಿಗೆ ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಿರಬೇಕು. ಟೈಪ್ ಮಾಡಿದ ಲೇಖನ ``ಎ೪’’ ಕಾಗದದ ಒಂದೇ ಭಾಗದಲ್ಲಿರಬೇಕು ಮತ್ತು ನಾಲ್ಕು ಪುಟಗಳನ್ನು ಮೀರಬಾರದು. ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತರಿಗೆ ಆಕರ್ಷಕ ಟ್ರೋಫಿ, ನಗದು ಬಹುಮಾನ ಹಾಗೂ ದೃಢೀಕರಣ ಪತ್ರವನ್ನು ನೀಡಲಾಗುವುದು.

ಚಿತ್ರಕಲೆ ಸ್ಪರ್ಧೆ : ೧೫ ವರ್ಷದೊಳಗಿನ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಚಿತ್ರವು “ಎ೪” ಡ್ರಾಯಿಂಗ್ ಶಿಟ್‌ನಲ್ಲಿ ಬಿಡಿಸತಕ್ಕದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ದೃಢೀಕರಣ ಪತ್ರವನ್ನು ನೀಡಲಾಗುವುದು. ಚಿತ್ರಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳ ಆಧಾರ್ ಕಾರ್ಡ್ ಪ್ರತಿಯನ್ನು ಡ್ರಾಯಿಂಗ್ ಶಿಟ್‌ನೊಂದಿಗೆ ಕಳುಹಿಸಿಕೊಡಬೇಕು. ಲೇಖನ ಹಾಗೂ ಚಿತ್ರಕಲೆಗಳನ್ನು ಜನವರಿ ೯ ರಂದು ಮಧ್ನಾಹ್ನ ೩ ಗಂಟೆಯೊಳಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ ೯೫೯೧೧೩೭೨೭೫, ೯೮೪೫೫೭೧೨೯೦ ಮತ್ತು ೯೯೪೫೭೯೪೪೧೪ ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಭಾಗವಹಿಸುವವರು ಪಾಸ್‌ಪೋರ್ಟ್ ಫೋಟೋವನ್ನು ಕಳುಹಿಸಿಕೊಡಬೇಕು. ಅಂಚೆ ಮೂಲಕ ಅಥವಾ ನೇರವಾಗಿ ಪಿ.ಪಿ.ಸುಕುಮಾರ್, ಅಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ, ಕೊಡಗು. ಅ/ಔ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣದ ಸಮೀಪ, ಮಡಿಕೇರಿ, ಈ ವಿಳಾಸಕ್ಕೆ ತಲುಪಿಸುವಂತಾಗಬೇಕು. ತಾ. ೧೨ ರಂದು ನಡೆಯುವ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ಯುವ ಕಾರ್ಯಕ್ರಮದ ಸಂದರ್ಭ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.